ಬೆಳ್ತಂಗಡಿ: ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ನೂತನವಾಗಿ ನಿರ್ಮಾಣಗೊಂಡ ವಿಜಯಗೋಪುರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಸುಂದರವಾದ ಗೋಪುರಗಳನ್ನು ನಿರ್ಮಿಸುವುದು ಬಹಳ ಕಡಿಮೆ. ಅದರಲ್ಲೂ ನಮ್ಮ ದಕ್ಷಿಣ ಭಾರತದಲ್ಲಿ ಇಂತಹ ಸುಂದರ ರಾಜಗೋಪುರ ಉಜಿರೆಯಲ್ಲಿ ನಿರ್ಮಾಣವಾಗಿರುವುದು ಹೆಮ್ಮೆಯ ವಿಚಾರ. ಇದರ ಹಿಂದೆ ಹಲವರ ಹಲವು ದಿನಗಳ ಶ್ರಮ ಇದೆ. ಧಾರ್ಮಿಕತೆಯನ್ನು ನೋಡಿ ಮುಂದುವರೆಸಿಕೊಂಡು ಹೋದರೆ ಖಂಡಿತವಾಗಿ ಗ್ರಾಮದ ಬೆಳವಣಿಗೆ ಆಗುತ್ತದೆ. ಶರತ್‌ಕೃಷ್ಣ ಪಡ್ವೆಟ್ನಾಯರು ಗ್ರಾಮದ ಮನೆಮನೆಗೆ ತೆರಳಿ ಭಕ್ತರನ್ನು ಒಂದಾಗಿಸಿದ್ದಾರೆ ಎಂದರು.ಈ ಸಂದರ್ಭದಲ್ಲಿ ಉಜಿರೆ ಅಶೋಕ ಭಟ್ ಬರೆದ ''''''''''''''''ವಿಜಯಪಥ'''''''''''''''' ಮತ್ತು ಸಾಂತೂರು ಶ್ರೀನಿವಾಸ ತಂತ್ರಿ ಬರೆದ ''''''''''''''''ಉಜಿರೆ ಜನಾರ್ದನ ದೇವಸ್ಥಾನದ ಇತಿಹಾಸ'''''''''''''''' ಪುಸ್ತಕಗಳನ್ನು ಅನಾವರಣಗೊಳಿಸಿದರು.

ಧಾರ್ಮಿಕ ಉಪನ್ಯಾಸ ನೀಡಿದ ಸಾಂಸ್ಕೃತಿಕ ಚಿಂತಕ ದಾಮೋದರ ಶರ್ಮಾ ಅವರು ರಾಜಗೋಪುರ ಅಂದರೆ ಅದು ದೇವ ದೇವತೆಗಳಿಗೆ ಸ್ವಾಗತಕೋರುವ ಲಾಂಛನ. ಶ್ರೀ ವಿಷ್ಣುದೇವರ ಶಯನಾಸನದಂತೆ ಕಾಣುವಗೋಪುರಕ್ಕೆ ನಮಿಸಿದರೆ ಜನಾರ್ದನ ಸ್ವಾಮಿಗೆ ನಮಿಸಿದಂತೆಯೇ ಎಂದರು.

ವಿಜಯಗೋಪುರ ಲೋಕಾರ್ಪಣೆಗೆ ಆಗಮಿಸುವ ಸಂದರ್ಭದಲ್ಲಿ ವೀರೇಂದ್ರ ಹೆಗ್ಗಡೆಯವರು ಶ್ರೀ ಸಚ್ಚಿದಾನಂದ ಸ್ವಾಮೀಜಿಗಳು ರಥವನ್ನುಏರಿದ ನಂತರ ತಾವು ರಥವನ್ನುಏರಿದರು. ಇದರಲ್ಲೇ ಅವರು ಗುರುಪರಂಪರೆಗೆ ನೀಡುವ ಗೌರವ ಎಲ್ಲರಿಗೂ ತಿಳಿಯುತ್ತದೆ ಎಂದು ಹೇಳಿದರು.

ದೈವದ ಮೇಲೆ ನಂಬಿಕೆ ಇಟ್ಟು ಶ್ರಮದೊಂದಿಗೆ ಮುಂದುವರಿದರೆ ದೇವರು ಆಶೀರ್ವಾದ ನೀಡುತ್ತಾರೆ ಎನ್ನುವುದು ಇಲ್ಲಿ ಸಾಬೀತಾಗಿದೆ. ಕಳೆದ ಒಂದು ವರ್ಷದಲ್ಲಿ ಪ್ರಾರಂಭವಾಗಿ ಉತ್ತಮ ರೀತಿಯಲ್ಲಿ ನಿರ್ಮಾಣಗೊಂಡ ವಿಜಯಗೋಪುರ ಮತ್ತು ಪುನರ್ ಪ್ರತಿಷ್ಠೆಗೊಂಡ ದೇವಸ್ಥಾನ ಭಕ್ತರ ಶ್ರಮದಾನಕ್ಕೆ ಉತ್ತಮ ಉದಾಹರಣೆ ಎಂದರು.ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ


ಬೇರೆ ಯಾವ ದೇಶದಲ್ಲೂ ಕಾಣದ ವೈಶಿಷ್ಟ್ಯತೆ ನಮ್ಮದೇಶದಲ್ಲಿ ಕಾಣುತ್ತದೆ. ಎಷ್ಟೇ ಆಧುನಿಕತೆ ಬಂದರೂ ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯನ್ನು ಭಾರತೀಯರು ಮರೆಯದೆ ಮುಂದುವರಿಸುತ್ತಿದ್ದಾರೆ ಎನ್ನುವುದಕ್ಕೆ ಇಂದಿನ ಕಾರ್ಯಕ್ರಮ ಉತ್ತಮ ಉದಾಹರಣೆ. ಇಂದು ಉಜಿರೆಯ ಜನಾರ್ದನ ದೇವಸ್ಥಾನ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ಬೆಳೆದಿದೆ. ಪರಂಪರೆ ಮತ್ತು ಆಧುನಿಕತೆಯನ್ನು ಜೊತೆಯಲ್ಲಿ ಕೊಂಡೊಯ್ದರೆ ಮಾತ್ರ ನಮ್ಮ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸಲು ಸಾಧ್ಯ ಎಂದರು.ಶಾಸಕ ಹರೀಶ್ ಪೂಂಜಾ ಮಾತನಾಡಿ, ಸಂಬಂಧಗಳಿಂದಾಗಿಯತೇ “ನ ಭೂತೋ, ನ ಭವಿಷ್ಯತಿ ಎನ್ನುವಷ್ಟು ಅದ್ಧೂರಿಯಾಗಿ ಬ್ರಹ್ಮಕಲಶೋತ್ಸವ ನಡೆಯುತ್ತಿದೆ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರಕುಮಾರ್ ಮಾತನಾಡಿದರು.

ವಿಜಯಗೋಪುರ ನಿರ್ಮಾಣ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಎಲ್ಲಾ ಧರ್ಮದವರು ಒಟ್ಟಾಗಿ ದೇವಸ್ಥಾನದ ಶ್ರಮದಾನದಲ್ಲಿ ಭಾಗವಹಿಸಿರುವುದು ಅಪೂರ್ವ ಸಂಗತಿ. ಭಕ್ತರ ಆಸಕ್ತಿಗೆ ನೀಡಲು ಬೇಕಾದಷ್ಟು ಕೆಲಸ ಇಲ್ಲಿರಲಿಲ್ಲ ಎಂಬುದು ವಿಶೇಷ” ಎಂದರು.

ವಾಸ್ತುತಜ್ಞ ರಮೇಶ್‌ ಕಾರಂತ್ ಬೆದ್ರಡ್ಕ, ಶಿಲ್ಪಿ ಕೃಷ್ಣಪ್ಪ ಚಾರ್ಮಾಡಿ, ರಮೇಶ್ ಲಾಯಿಲ, ಕಾಷ್ಠ ಶಿಲ್ಪಿ ಶಶಿಧರ ಆಚಾರ್ಯ, ಶೇಖರ. ಸೋಮೇಶ್ವರ, ಬಿ. ರಾಜ ಹೆಗ್ಡೆ, ವಿದ್ಯುತ್‌ ಗುತ್ತಿಗೆದಾರ ಲೋಕೇಶ್‌ ರೈ ಹಾಗೂ ಮಾತೃಶಕ್ತಿ ಶಿಲಾ ಸಂಚಯನ ಸಮಿತಿ ಅಧ್ಯಕ್ಷೆ ವನಿತಾ ವಿಶ್ವನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಅನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯರ್ ಸ್ವಾಗತಿಸಿದರು. ರಾಜಗೋಪುರ ನಿರ್ಮಾಣ ಸಮಿತಿ ಪ್ರಧಾನ ಕೋಶಾಧಿಕಾರಿ ರಾಜೇಶ್ ಪೈ ವಂದಿಸಿದರು. ಉಜಿರೆ ಎಸ್.ಡಿ.ಎಂ ಕಾಲೇಜು ಕುಲಸಚಿವ ಹಾಗೂ ಸಂಸ್ಕೃತ ಉಪನ್ಯಾಸಕ ಪ್ರೊ. ಶ್ರೀಧರ ಭಟ್ಟ ಕಾರ್ಯಕ್ರಮ ನಿರೂಪಿಸಿದರು.