ದೇವಳ ಜೀರ್ಣೋದ್ಧಾರದಿಂದ ಗ್ರಾಮದ ಅಭಿವೃದ್ಧಿ: ಉಮಾನಾಥ ಕೋಟ್ಯಾನ್‌

| Published : Aug 12 2024, 01:32 AM IST

ಸಾರಾಂಶ

ಮೂಲ್ಕಿಯ ಕಾರ್ನಾಡ್ ಶ್ರೀ ಹರಿಹರ ಕ್ಷೇತ್ರದ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಲಿರುವ ಅಷ್ಟ ಬಂಧ ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ಪೂರ್ವಭಾವಿ ಸಬೆ ನಡೆಯಿತು,

ಕನ್ನಡಪ್ರಭವಾರ್ತೆ ಮೂಲ್ಕಿ

ದೈವಸ್ಥಾನ, ದೇವಳಗಳ ಜೀರ್ಣೋದ್ಧಾರವಾದಾಗ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದರು.

ಮೂಲ್ಕಿಯ ಕಾರ್ನಾಡ್ ಶ್ರೀ ಹರಿಹರ ಕ್ಷೇತ್ರದ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಲಿರುವ ಅಷ್ಟ ಬಂಧ ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಸಭೆಯಲ್ಲಿ ದೇವಸ್ಥಾನದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಆಡಳಿತ ಮೊಕ್ತೇಸರ ಎಂ ಎಚ್ ಅರವಿಂದ ಪೂಂಜ ವಹಿಸಿದ್ದರು. ಕ್ಷೇತ್ರದ ಅರ್ಚಕ ಹಯಗ್ರೀವ ಪಡ್ಡಿಲ್ಲಾಯ, ಬಪ್ಪನಾಡು ದೇವಸ್ಥಾನದ ಆಡಳಿತ ಮೊಕ್ತೇಸರ ಎನ್‌ ಎಸ್‌ ಮನೋಹರ ಶೆಟ್ಟಿ, ಉದ್ಯಮಿ ಆದಿತ್ಯ ಪೂಂಜ, ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶಶೀಂದ್ರ ಸಾಲ್ಯಾನ್, ರಾಘವೇಂದ್ರ ರಾವ್, ರವಿ ಭಟ್, ನೂತನ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ವೈ. ಎನ್. ಸಾಲ್ಯಾನ್, ಪ್ರವೀಣ್ ಕೋಟ್ಯಾನ್ ಉಪಸ್ಥಿತರಿದ್ದರು.

ಗ್ರಾಮಸ್ಥರ ಪರವಾಗಿ ಬಪ್ಪನಾಡು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಸುನಿಲ್ ಆಳ್ವ, ಮೂಲ್ಕಿ ನ. ಪಂ. ಸದಸ್ಯ ಹರ್ಷರಾಜ ಶೆಟ್ಟಿ ಮತ್ತಿತರರು ಮಾತನಾಡಿದರು. ಸಭೆಯಲ್ಲಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಎಂ. ಎಚ್. ಪೂಂಜ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ವೈ. ಎನ್. ಸಾಲ್ಯಾನ್ ನಿರೂಪಿಸಿದರು. ಪ್ರವೀಣ್ ಕೋಟ್ಯಾನ್ ವಂದಿಸಿದರು.