ಜೆಜೆಎಂ ಕಾಮಗಾರಿಗೆ ಗ್ರಾಮಸ್ಥರ ವರಿ

| Published : Jan 06 2025, 01:02 AM IST

ಸಾರಾಂಶ

ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆಯಾದ ರಾಷ್ಟ್ರೀಯ ಜಲ ಜೀವನ್ ಮಿಷನ್ ಕಾಮಗಾರಿ ಪ್ರಾರಂಭಕೊಂಡಿದ್ದು, ಸುಮಾರು ೫ ಕೋಟಿಗೂ ಹೆಚ್ಚು ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದ್ದು, ಸರ್ಕಾರದ ನಿಯಮದಂತೆ ಕೆಲಸ ಮಾಡದೆ ತರಾತುರಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಹಣ ಲಪಟಾಯಿಸುವ ಹುನ್ನಾರ ಗುತ್ತಿಗೆದಾರ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರ ಆರೋಪವಾಗಿದೆ.

ಎಚ್.ಎನ್.ನಾಗರಾಜು ಕೊರಟಗೆರೆಕನ್ನಡಪ್ರಭ ವಾರ್ತೆ ಕೊರಟಗೆರೆ.ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆಯಾದ ರಾಷ್ಟ್ರೀಯ ಜಲ ಜೀವನ್ ಮಿಷನ್ ಕಾಮಗಾರಿ ಪ್ರಾರಂಭಕೊಂಡಿದ್ದು, ಸುಮಾರು ೫ ಕೋಟಿಗೂ ಹೆಚ್ಚು ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದ್ದು, ಸರ್ಕಾರದ ನಿಯಮದಂತೆ ಕೆಲಸ ಮಾಡದೆ ತರಾತುರಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಹಣ ಲಪಟಾಯಿಸುವ ಹುನ್ನಾರ ಗುತ್ತಿಗೆದಾರ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರ ಆರೋಪವಾಗಿದೆ.

ಗ್ರಾಮೀಣ ಭಾಗದ ಪ್ರತಿಯೊಂದು ಮನೆಗಳಿಗೂ ನೀರು ಕೊಡುವ ಯೋಜನೆಯಾಗಿದ್ದು, ಗುತ್ತಿಗೆದಾರರು ಗ್ರಾಮದಲ್ಲಿ ಕಾಮಗಾರಿ ತರಾತುರಿಯಲ್ಲಿ ಕೆಲಸ ಮಾಡಿ ಇನ್ನಷ್ಟು ಸಮಸ್ಯೆಗಳನ್ನ ಉಂಟು ಮಾಡುತ್ತಿದ್ದಾರೆ. ಪೈಪ್ ಲೈನ್ ಮಾಡುವ ಸಂದರ್ಭದಲ್ಲಿ ರಸ್ತೆ ಹಾಗೂ ಪಕ್ಕದ ಚರಂಡಿಗಳನ್ನೂ ಕಿತ್ತು ಹಾಕುತ್ತಿದ್ದರೂ ತಾಪಂ ಜಿಪಂ ಅಧಿಕಾರಿಗಳಾಗಲಿ ಗ್ರಾಪಂ ಸದಸ್ಯರಾಗಲಿ ಪ್ರಶ್ನೆ ಮಾಡದೆ ಇರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.ಗುತ್ತಿಗೆದಾರ ತನ್ನ ಕಾಮಗಾರಿಯನ್ನು ತ್ವರಿತವಾಗಿ ಕೆಲಸ ಮುಗಿಸಿಕೊಳ್ಳಲು ಒಂದು ರಸ್ತೆಯಲ್ಲಿ ಎರಡು ಭಾಗದಲ್ಲಿಯೂ ಪೈಪ್ ಲೈನ್ ಮಾಡಲು ಚಿಕ್ಕ ಜೆಸಿಬಿ ಮೂಲಕ ಕೆಲಸ ಮಾಡುವುದರಿಂದ ಸಣ್ಣ ಸಣ್ಣ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಈ ಕಾಮಗಾರಿ ಪ್ರಾರಂಭದಿಂದ ಇಲ್ಲಿನ ಜನರಿಗೆ ಓಡಾಡಲು ರಸ್ತೆ ಬಂದ್ ಮಾಡಿದ್ದಾರೆ. ಒಂದು ರಸ್ತೆಯಲ್ಲಿ ಹಿಡಿದ ಪೈಪ್ ಲೈನ್ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ಬೇರೆ ಕಡೆ ಕಾಮಗಾರಿ ಮಾಡಲು ಹೋಗುತ್ತಿದ್ದು, ಪೈಪ್ ಲೈನ್ ಮಾಡುವ ಸಂದರ್ಭದಲ್ಲಿ ಹಳೆಯ ಪೈಪ್ ಲೈನ್ ಒಡೆದು ಹಾಕಿ ಮನೆಗೆ ಬರುತ್ತಿದ್ದ ನೀರು ಕೂಡ ಬರುತ್ತಿಲ್ಲ. ನಮ್ಮ ಸಮಸ್ಯೆಯನ್ನ ಯಾರಿಗೆ ಹೇಳೋದು. ಇತ್ತ ಗ್ರಾಪಂ ಅಧಿಕಾರಿಗಳು ಬರಲ್ಲ. ಅತ್ತ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಬರಲ್ಲ ಎಂದು ಸಾರ್ವಜನಿಕರು ಅಧಿಕಾರಿಗಳ ವಿರುದ್ದ ಕಿಡಿಕಾರಿದರು.

ಕೋಟ್ಈ ಹಿಂದೆ ಗುಣಮಟ್ಟದ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಈ ಕಾಮಗಾರಿ ಪ್ರಾರಂಭವಾದ ಮೇಲೆ ರಸ್ತೆ ಸಂಪೂರ್ಣ ಹಾಳು ಮಾಡುತ್ತಿದ್ದಾರೆ. ಎರಡು ಕಡೆ ಪೈಪ್ ಲೈನ್ ಮಾಡುವುದರಿಂದ ರಸ್ತೆ ಕಿತ್ತು ಹೋಗಿದೆ. ಚರಂಡಿ ಪಕ್ಕದಲ್ಲಿ ಪೈಪ್ ಲೈನ್ ಮಾಡುತ್ತಿರುವುದರಿಂದ ಚರಂಡಿಯನ್ನ ಕಿತ್ತು ಹಾಕುತ್ತಿದ್ದಾರೆ. ನೀರು ಬಿಟ್ಟು ಒಂದು ವಾರ ಆಗಿದೆ. ಕಾಮಗಾರಿ ಬಗ್ಗೆ ಪ್ರಶ್ನೆ ಮಾಡಿದರೆ ಧಮ್ಕಿ ಹಾಕುತ್ತಾರೆ.-ಶಫೀವೂಲ್ಲಾ ಹೊಳವನಹಳ್ಳಿ ಗ್ರಾಮಸ್ಥ.

ಕಾಮಗಾರಿಯ ಅಂದಾಜು ಮೊತ್ತವನ್ನು ಸಂಬಂಧಪಟ್ಟ ಎಂಜಿನಿಯರ್ ಅವರನ್ನು ಕೇಳಿ. ಗ್ರಾಮದ ಒಳಗೆ ರಸ್ತೆಯ ಎರಡು ಭಾಗದಲ್ಲಿ ಪೈಪ್ ಲೈನ್ ಮಾಡಲು ರಸ್ತೆಯನ್ನ ಒಡಿಯಲೇಬೇಕು. ಒಂದು ಸೈಡ್‌ನಲ್ಲಿ ಪೈಪ್ ಲೈನ್ ಹಾಕಲು ಆಗಲ್ಲ. ನೀವು ಯಾರಿಗೆ ಬೇಕಾದರೂ ಹೇಳಿಕೊಳ್ಳಿ. ಏನಾದರೂ ಬರೆದುಕೊಳ್ಳಿ. - ನಾಗರಾಜು, ಕೆಲಸ ಮಾಡಿಸುವ ಮೇಸ್ತ್ರೀ.

ಮುಖ್ಯಾಂಶಗಳು;೧)ಜೆಜೆಎಂ ಕಾಮಗಾರಿ ಅಡ್ಡಾದಿಡ್ಡಿ.೨) ರಸ್ತೆ ಕಟ್ ಮಾಡಿ ಒಂದು ವಾರ ಆದಮೇಲೆ ಕೆಲಸ ಪ್ರಾರಂಭ೩)ರಸ್ತೆಯಲ್ಲಿ ಸಂಚಾರ ಮಾಡುವ ಸಾರ್ವಜನಿಕರಿಗೆ ಓಡಾಡಲು ತೊಂದರೆ.೪)ಕಾಮಗಾರಿ ಬಗ್ಗೆ ಸಾರ್ವಜನಿಕರು ಮಾಹಿತಿ ಪ್ರಶ್ನೆ ಮಾಡಿದರೆ ಧಮ್ಕಿ. ೫)ತರಾತುರಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಹಣ ಲಪಟಾಯಿಸುವ ಹುನ್ನಾರ.೬)ಚರಂಡಿ ಪಕ್ಕದಲ್ಲಿ ಪೈಪ್ ಲೈನ್ ಚರಂಡಿ ಸಂಪೂರ್ಣ ಹಾಳು.(ಚಿತ್ರ ಇದೆ)