ಜನರ ಜೀವದ ಜತೆ ಚೆಲ್ಲಾಟವಾಡುತ್ತಿದ್ದೀರಾ? ಎಂದು ಸಾರ್ವಜನಿಕರು ಎಇಇ ರಾಹುಲ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಸಿರುಗುಪ್ಪ: ತಾಲೂಕಿನ ರಾರಾವಿ ಗ್ರಾಮದ ಮಾರೆಮ್ಮ ದೇವಸ್ಥಾನದ ಹತ್ತಿರ ವಿಶೇಷ ಗ್ರಾಮ ಸಭೆ ನೋಡಲ್ ಅಧಿಕಾರಿ ತಮ್ಮನಗೌಡ ಪಾಟೀಲ್ ನೇತೃತ್ವದಲ್ಲಿ ಸಭೆ ಏರ್ಪಡಿಸಲಾಗಿತ್ತು.
ರಾರಾವಿ ಗ್ರಾಮದಲ್ಲಿ ಗ್ರಾಮಸ್ಥರಿಗೆ ಪೂರೈಕೆಯಾಗುತ್ತಿರುವ ಕುಡಿಯುವ ನೀರಿನ ಅವ್ಯವಸ್ಥೆ ಗ್ರಾಮಸಭೆಯಲ್ಲಿ ಬಯಲಾಗಿದೆ.ಕುಡಿಯುವ ನೀರಿನಲ್ಲೇ ಹುಳುಗಳು ಪತ್ತೆಯಾಗಿರುವುದನ್ನು ಬಾಟಲ್‌ನಲ್ಲಿ ಸಂಗ್ರಹಿಸಿಕೊಂಡು ಗ್ರಾಮಸ್ಥರು ಗ್ರಾಮಸಭೆಗೆ ತಂದು ಅಧಿಕಾರಿಗಳ ಮುಂದೆ ಪ್ರದರ್ಶಿಸಿದ್ದು, ಸಭೆಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.ಜನರ ಜೀವದ ಜತೆ ಚೆಲ್ಲಾಟವಾಡುತ್ತಿದ್ದೀರಾ? ಎಂದು ಸಾರ್ವಜನಿಕರು ಎಇಇ ರಾಹುಲ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಕನಿಷ್ಠ ಜವಾಬ್ದಾರಿ ನಿರ್ವಹಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಅಧಿಕಾರಿಗಳೇ ಮೊದಲು ಈ ನೀರನ್ನು ನೀವೇ ಕುಡಿದು ನೋಡಿ.ಜನರಿಗೆ ಮಾತ್ರ ಇಂತಹ ನೀರನ್ನು ಪೂರೈಸುವುದು ಯಾವ ನ್ಯಾಯ? ನೀರು ಕುಡಿದು ಜನರಿಗೆ ಏನಾದರೂ ಅನಾಹುತವಾದರೆ ಹೊಣೆ ಯಾರು? ಎಂದು ಗ್ರಾಮಸ್ಥರು ಪ್ರಶ್ನಿಸಿದರು.
ಕುಡಿಯುವ ನೀರು ಜನರ ಮೂಲಭೂತ ಹಕ್ಕು.ಕೊಳಕು ನೀರು ಕೊಟ್ಟು ಜನರ ಆರೋಗ್ಯದ ಜತೆ ಆಟವಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.ತಕ್ಷಣ ನೀರಿನ ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಿ ಗುಣಮಟ್ಟ ಪರಿಶೀಲಿಸಬೇಕು, ನೀರು ಸರಬರಾಜು ವ್ಯವಸ್ಥೆ ಸ್ವಚ್ಛಗೊಳಿಸಬೇಕು ಹಾಗೂ ನೀರು ನೇರವಾಗಿ ಪೈಪ್ ಲೈನ್ ಅಳವಡಿಸಿಕೊಂಡ ಜನರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ರಾಹುಲ್ ಮಾತಾನಾಡಿ, ಗ್ರಾಮದಲ್ಲಿ ಕುಡಿಯುವ ನೀರಿನಲ್ಲಿ ಹುಳಗಳು ಬರುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ, ಈಹಿಂದೆ ಮೇ ತಿಂಗಳಲ್ಲಿ ಹುಳ ಬಂದಿರುವ ಬಗ್ಗೆ ಸಮಸ್ಯೆಯ ಬಗ್ಗೆ ಬಗ್ಗೆಹರಿಸಲಾಗುವುದು ಈಗ ಮತ್ತೆ ಬಂದಿರುವ ಬಗ್ಗೆ ತ್ವರಿತಗತಿಯಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದ್ದರು.ಗ್ರಾಮದ ವಿವಿಧ ಮೂಲಭೂತ ಸೌಕರ್ಯಗಳಾದ ಚರಂಡಿ ರಸ್ತೆ, ನರೇಗಾ ಯೋಜನೆಯ ವಿವಿಧ ಕಾಮಗಾರಿಗಳ ಮತ್ತು ಮೂಲಭೂತ ಸೌಕರ್ಯ ಸಮಸ್ಯೆ ಗಳಿಗೆ ಆದ್ಯತೆ ನೀಡಿ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಇದೇ ವೇಳೆ ಗ್ರಾಪಂ ಆಡಳಿತ ಅಧಿಕಾರಿ ಮನೋಹರ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಕೀರ್, ಸಾಮಾಜಿಕ ಪರಿಶೋಧನ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ಬಸವರಾಜ,ಕಿರಿಯ ಇಂಜಿನಿಯರ್ ಗೌತಮಿ, ಪೊಲೀಸ್ ಇಲಾಖೆ ಹಾಗೂ ಗ್ರಾಪಂ ಸಿಬ್ಬಂದಿ ಮತ್ತು ಗ್ರಾಮಸ್ಥರು ಇದ್ದರು.