ಮೂಲಭೂತ ಸೌಕರ್ಯ, ಬಡವರಿಗೆ ಸೂರು ಹಂಚಲು ಗ್ರಾಮಸ್ಥರ ಹಕ್ಕೊತ್ತಾಯ

| Published : Nov 16 2025, 03:00 AM IST

ಸಾರಾಂಶ

ಸುಂಟಿಕೊಪ್ಪ ಗ್ರೇಡ್‌ 1 ಗ್ರಾಮ ಪಂಚಾಯಿತಿಯ 2025-26ನೇ ಸಾಲಿನ ಗ್ರಾಮಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷ ಪಿ. ಆರ್‌. ಸುನಿಲ್‌ ಕುಮಾರ್‌ ವಹಿಸಿದ್ದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಬಡಾವಣೆಗಳಿಗೆ ಮೂಲಭೂತ ಸೌಕರ್ಯಗಳು, ಪಟ್ಟಣ ಪಂಚಾಯಿಯಾಗಿ ಮೇಲ್ದರ್ಜೆಗೇರಬೇಕೆಂಬ ಸಲಹೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರವಾಗಿ ಮಾರ್ಪಡುಗೊಳ್ಳಬೇಕು, ಪೈಸಾರಿ ಜಾಗಗಳು ಪಂಚಾಯಿತಿ ಸುರ್ಪದಿಗೆ ಒಳಪಟ್ಟು ಬಡವರಿಗೆ ಸೂರು ಹಂಚಿಕೆಕೊಳ್ಳಬೇಕು ಎಂದು ಗ್ರಾಮಸಭೆಯಲ್ಲಿ ಗ್ರಾಮಸ್ಥರ ಹಕ್ಕೊತ್ತಾಯ ಕೇಳಿ ಬಂತು.ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ 2025-26ನೇ ಸಾಲಿನ ಗ್ರಾಮಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ವಹಿಸಿದ್ದರು.

ಇಲ್ಲಿನ ಶ್ರೀ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆಸಲಾದ ಸಭೆಯಲ್ಲಿ ಕಳೆದ ಬಾರಿ ಗ್ರಾಮಸಭೆಯಲ್ಲಿ ಚರ್ಚಿಸಲಾದ ವಿಚಾರಗಳನ್ನು ಅನುಷ್ಠಾನಗೊಳಿಸಲಾಗಿದೆ. ಇದರ ಮಾಹಿತಿ, ಗಂಭೀರ ವಿಚಾರಗಳ ಕ್ರಮ ಕೈಗೊಳ್ಳದಿರುವ ಬಗ್ಗೆ ಗ್ರಾಮಸ್ಥರಾದ ಸೂಪಿ, ಇಬ್ರಾಹಿಂ, ಕೆ.ಎ.ಲತೀಫ್, ರಜಾಕ್ , ದಿನೇಶ್ , ಉದಯಕುಮಾರ್ ಡೇವಿಡ್ ಜನ್ಸಾನ್, ಮಮತ ಸೇರಿದಂತೆ ಮತ್ತಷ್ಟು ಗ್ರಾಮಸ್ಥರು ವರದಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇಬ್ರಾಹಿಂ ಮಾತನಾಡಿ, ಪ್ರತಿ ಗ್ರಾಮಸಭೆಯಲ್ಲಿ ನಾವು ಹೇಳುವುದು ನೀವು ಬರೆದುಕೊಳ್ಳುವುದು ಮತ್ತು ಸಭೆಯಲ್ಲಿ ಓದುವುದಕ್ಕೆ ಮಾತ್ರ ಸೀಮಿತವಾಗಿದೆ. ಯಾವ ಯಾವ ಬೇಡಿಕೆಗಳು ಈಡೇರಿಕೆಕೆಯಾಗಿದೆ ಎಂಬುದನ್ನು ಓದಿ ಎಂಬುದನ್ನು ಆಗ್ರಹಿಸಿದರು.ಸಮಸ್ಯೆ ಹೆಚ್ಚಾಗಿದೆ:

ಗದ್ದೆಹಳ್ಳ ನಿವಾಸಿಗಳಾದ ರುಕ್ಸಾನ, ರಜಾಕ್ ಮತ್ತು ಪಟ್ಟೆಮನೆ ಉದಯಕುಮಾರ್ ಮಾತನಾಡಿ, ಸುಂಟಿಕೊಪ್ಪ ಪಟ್ಟಣದ ತ್ಯಾಜ್ಯ ನೀರು ಮತ್ತು ಮಳೆಗಾಲದಲ್ಲಿ ಪ್ರವಾಹದ ನೀರು ಕೃಷಿ ಮತ್ತು ಮನೆಗಳಿಗೆ ನುಗ್ಗುತ್ತಿದ್ದು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಕೆಲವು ಕಡೆಗಳಲ್ಲಿ ಅಪೂರ್ಣ ಕಾಮಗಾರಿ ನಿರ್ವಹಿಸುವುದರಿಂದ ಸಮಸ್ಯೆ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಿಎಸ್ ಐ ದೇವಾಲಯದ ಧರ್ಮಗುರುಗಳಾದ ಮಧುಕಿರಣ್ , ವಿಲಿಯಂ ಮತ್ತು ರತ್ನಕುಮಾರ್ ಮಾತನಾಡಿ, ಕೊಡವ ಸಮಾಜದ ಸಭಾಂಗಣದಲ್ಲಿ ನಿಯಮ ಮೀರಿ ತಡ ರಾತ್ರಿಯ ವರೆಗೂ ಡಿಜೆ ಮತ್ತು ಧ್ವನಿವರ್ಧಕಗಳನ್ನು ಬಳಕೆ ಮಾಡುತ್ತಿದ್ದು, ಜನವಸತಿ ಪ್ರದೇಶವಾಗಿದ್ದು ಚರ್ಚ್ ಮತ್ತು ಮಸೀದಿಗಳಿದ್ದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ಕೊಟ್ಟು ಈ ಬಗ್ಗೆ ಸೂಕ್ತ ಕ್ರಮಕ್ಕೆ ಸೂಚಿಸಲಾಗುವುದು. ಸಮಗ್ರ ವರದಿ ಬಂದ ಬಳಿಕ ಕಾರ್ಯನಿರ್ವಹಣಾಧಿಕಾರಿಯನ್ನು ಕರೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯ ನೋಡಲ್ ಅಧಿಕಾರಿ ಸಿದ್ದೇಗೌಡ ಮಾಹಿತಿ ನೀಡಿದರು.ಜನರ ಸಹಕಾರ ಬೇಕು:

ಪಟ್ಟಣದ ಕಸ ವಿಲೇವಾರಿ ಬಗ್ಗೆ ಸಭೆಯಲ್ಲಿ ತೀವ್ರ ಚರ್ಚೆ ನಡೆದು ಪಂಚಾಯಿತಿ ಯ ಕಸವಿಲೇವಾರಿ ಬಗ್ಗೆ ಅಸಮಾಧಾನ ವ್ಯಕ್ತವಾಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಮಾತನಾಡಿ, ಸುಂಟಿಕೊಪ್ಪ ದಲ್ಲಿ ಒಣಕಸ ವಿಲೇವಾರಿ ಘಟಕ ಮಾತ್ರ ಇದ್ದು ಹಸಿ ಕಸವನ್ನು ಆಯಾ ಮನೆಯವರೇ ವಿಲೇವಾರಿಗೊಳಿಸಬೇಕೆಂಬ ಮಾರ್ಗಸೂಚಿ ಇದೆ. ಕಸ ವಿಲೇವಾರಿ ಯಲ್ಲಿ ಜನರ ಸಹಕಾರವು ಬೇಕೆಂದು ಮನವಿ ಮಾಡಿದರು.ಗ್ರಾಮಸಭೆಯಲ್ಲಿ ಖಾಸಗಿ ಬಡಾವಣೆಯಲ್ಲಿ ಮನೆಗಳು ಹಾಗೂ ಮಳಿಗೆಗಳು ನಿರ್ಮಾಣಗೊಂಡಿದ್ದು, ಮುಖ್ಯವಾಗಿ ಮನೆಗಳಿಗೆ ನೀರು ಸೌಲಭ್ಯ ಒದಗಿಸಲು ಮೀನಾಮೇಷ, ಪಂಚಾಯಿತಿಯಿಂದ ಮೀನು ಮಾಂಸ ಮಳಿಗೆಗಳು ಖಾಸಗಿ ವ್ಯಕ್ತಿಯ ಜಾಗದಲ್ಲಿ ನಿರ್ಮಿಸಿದ್ದು ಪಂಚಾಯಿತಿ ಯ ಸಾರ್ವಜನಿಕ ರ ಹಣವನ್ನು ಪೋಲು ಮಾಡಲಾಗಿದೆ ಎಂದು ಕೆ.ಎ.ಲತೀಫ್ ಮತ್ತು ದಿನೇಶ್ ದಾಖಲೆ ಸಹಿತ ಆರೋಪ ಮಾಡಿದ್ದರು. ಇದನ್ನು ಪಂಚಾಯಿತಿ ಅಧ್ಯಕ್ಷ, ಸದಸ್ಯರು ಮತ್ತು ಪಿಡಿಓ ಅಲ್ಲಗೆಳೆಯಲು ಮುಂದಾದಾಗ ದಿನೇಶ್ ತಮ್ಮ ಬಳಿಯಿದ್ದ ನಕ್ಷೆಯನ್ನು ಮತ್ತು ಅಧಿಕೃತ ದಾಖಲೆಗಳನ್ನು ಪ್ರದರ್ಶಿಸಿ ಗಮನಸೆಳೆದರು.ಕ್ರಮ ಜರುಗಿಸಲಾಗುವುದು:

ಈ ಸಂದರ್ಭ ಮಾತನಾಡಿದ ಪಂಚಾಯಿತಿ ಅದ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಲೋಟಸ್ ಲೇಜಾಟ್ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರುಕೆ.ಎ.ಲತೀಫ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೈಸಾರಿ ಇವುಗಳಲ್ಲಿ ಕೆಲವು ಅತಿಕ್ರಮಣಕ್ಕೆ ಒಳಗೊಂಡಿದೆ. ಅನಧಿಕೃತ ಕಟ್ಟಡಗಳು ನಿರ್ಮಾಣಗೊಂಡಿದೆ. ಇವುಗಳಿಗೆ ಪಂಚಾಯಿತಿ ವತಿಯಿಂದ ಮೂಲಭೂತ ಸೌಲಭ್ಯ ಹೊಂದಿಕೊಳ್ಳಲು ಆದೇಶ ಪ್ರತಿ ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿ ಸಿ ಪಿ.ಆರ್.ಸುನಿಲ್ ಕುಮಾರ್ ಗ್ರಾಮ ಪಂಚಾಯಿತಿ ವತಿಯಿಂದ ಕಂದಾಯ ಇಲಾಖೆಗೆ ಮಾಹಿತಿಯನ್ನು ನೀಡಿ ಲತೀಫ್ ಅವರು ನೀಡಿದ ಮಾಹಿತಿ ನೀಡಿದರು.ಈ ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಸಿದ್ದೇಗೌಡ ಉಪಸ್ಥಿತರಿದ್ದರು.ವೇದಿಕೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯರಾದ ಪ್ರಸಾದ್ ಕುಟ್ಟಪ್ಪ, ಕೆ.ಎಂ.ಆಲಿಕುಟ್ಟಿ, ಶಬ್ಬೀರ್ , ಮಂಜುನಾಥ್, ಬಿ.ಎಂ.ಸುರೇಶ್, ಪಿ.ಎಫ್.ಸಬಾಸ್ಟಿನ್, ಸೋಮನಾಥ್, ಶಾಂತಿ, ಗೀತಾ, ಮಂಜುಳ, ನಾಗರತ್ನ, ವಸಂತಿ, ರಫೀಕ್ ಖಾನ್, ಜಿನಾಸುದ್ದೀನ್ ಇದ್ದರು. ಸೆಲಿನಾ ಜೆಫ್ರಿ ಪ್ರಾರ್ಥಿಸಿ, ಡಿ.ಎಂ.ಮಂಜುನಾಥ್ ನಿರೂಪಿಸಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಲೆಕ್ಕಪರಿಶೋಧಕಿ ಚಂದ್ರಕಲಾ ಮತ್ತು ಗಣಕ ಯಂತ್ರ ಸಿಬ್ಬಂದಿ ಸಂದ್ಯಾ ಹಿಂದಿನ ಗ್ರಾಮಸಭೆ ಹಾಗೂ ವಾರ್ಡ್ ಸಭೆ ವರದಿ ವಾಚಿಸಿದರು.