ಶಾಲೆ ಆಟದ ಮೈದಾನ ತೆರವುಗೊಳಿಸಲು ಹಡಗಲು ಗ್ರಾಮಸ್ಥರ ಒತ್ತಾಯ

| Published : Jun 01 2024, 12:46 AM IST

ಸಾರಾಂಶ

ಕಡೂರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಟದ ಮೈದಾನವನ್ನು ಅತಿಕ್ರಮಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಡೂರು ತಾಲೂಕಿನ ಹಡಗಲು ಗ್ರಾಮದ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಆಗ್ರಹಿಸಿದರು.

ಹಡಗಲು ಗ್ರಾಮದ ನೂರಾರು ಜನರ ಪ್ರತಿಭಟನೆ

ಕನ್ನಡಪ್ರಭ ವಾರ್ತೆ, ಕಡೂರು

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಟದ ಮೈದಾನವನ್ನು ಅತಿಕ್ರಮಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಡೂರು ತಾಲೂಕಿನ ಹಡಗಲು ಗ್ರಾಮದ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಆಗ್ರಹಿಸಿದರು.

ಪಟ್ಟಣದ ತಾಲೂಕು ಕಚೇರಿ ಮುಂದೆ ಶುಕ್ರವಾರ ಹಡಗಲು ಗ್ರಾಮದ ನೂರಾರು ಜನರು ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.

ಗ್ರಾಮದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗೋವಿಂದಪ್ಪ ಮತ್ತು ಅಣ್ಣಯ್ಯ ಮಾತನಾಡಿ, ಸರ್ವೆ ನಂ.56 ರಲ್ಲಿ 4 ಎಕರೆ 18 ಗುಂಟೆ ಜಮೀನಿದ್ದು ಇದನ್ನು ಶಾಲೆ ಆಟದ ಮೈದಾನಕ್ಕೆಂದು ಗ್ರಾಮಸ್ಥರು ಮೀಸಲಿರಿಸಿದ್ದೆವು. ಆದರೆ ಆಟದ ಮೈದಾನವನ್ನು ಅಕ್ರಮವಾಗಿ ಗ್ರಾಮದ ಕೆಲವು ವ್ಯಕ್ತಿಗಳು ಕಬಳಿಸಿದ್ದು ಗ್ರಾಮಸ್ಥರು ಒಟ್ಟಿಗೆ ಸೇರಿ ಆಟದ ಮೈದಾನ ಉಳಿಸಲು ಹೋರಾಟ ಮಾಡುತ್ತಿದ್ದರೂ ತಹಸೀಲ್ದಾರ್, ಜಿಲ್ಲಾಧಿಕಾರಿಗಳು ಯಾವುದೇ ರೀತಿ ಸ್ಪಂ ದಿಸುತ್ತಿಲ್ಲ ಎಂದು ದೂರಿದರು.ಪೊಲೀಸರು,ತಾಲೂಕು ಆಡಳಿತ ಮತ್ತು ಗ್ರಾಮ ಪಂಚಾಯಿತಿ ಪಿಡಿಒ ಜಾಗವನ್ನು ಕಬಳಿಸಿರುವವರ ಪರವಾಗಿದ್ದಾರೆ ಎಂದು ದೂರಿದ ಅವರು ಗ್ರಾಮಸ್ಥರು ಈ ಬಗ್ಗೆ ಮುಂದಿನ ವಾರದಲ್ಲಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆಗೆ ಮುಂದಾಗಲಿದ್ದೇವೆ ಎಂದು ಎಚ್ಚರಿಕೆ ನೀಡಿದರು. ಈ ಬಗ್ಗೆ ಶಾಸಕರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು. ಮುಖಂಡರಾದ ಬಾಸೂರು ವಸಂತ್, ಅಣ್ಣಯ್ಯ, ಸಿದ್ದರಾಮಪ್ಪ, ಬೀರಪ್ಪ,ಭೋರೇಗೌಡ, ರಂಗನಾಥ್, ಹನುಮಂತಪ್ಪ ಮತ್ತಿತರರು ಇದ್ದರು. -- ಕೋಟ್‌---

ಹಡಗಲು ಗ್ರಾಮದ ಶಾಲಾ ಮೈದಾನದ ಸಮಸ್ಯೆ ಇದ್ದು. 6 ಮನೆಯವರು ಮತ್ತು ಗ್ರಾಮಸ್ಥರ ನಡುವೆ ಹೊಂದಾಣಿಕೆ ಇಲ್ಲದೆ ಸಮಸ್ಯೆ ಆಗಿದೆ. ಆದರೆ 6 ಮನೆಯ ನಿವಾಸಿಗರಿಗೆ ಅಧಿಕೃತವಾಗಿ ರಸ್ತೆ ನೀಡಿದರೆ ಸಮಸ್ಯೆ ಬಗೆ ಹರಿಸಬಹುದು. ಗ್ರಾಮಸ್ಥರು ಮೈದಾನಕ್ಕೆ ತಂತಿಬೇಲಿ ಹಾಕಿಕೊಂಡು ರಸ್ತೆ ಮುಚ್ಚಿದ್ದರು. ತಾವು ಗುರುವಾರ ಸ್ಥಳಕ್ಕೆ ತೆರಳಿ ತಂತಿಬೇಲಿ ತೆರವುಗೊಳಿಸಿ ಬಂದಿದ್ದು ಎರಡೂ ಕಡೆಯವರು ಮುಕ್ತವಾಗಿ ಸೇರಿ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗಬೇಕು ತಾಲೂಕು ಆಡಳಿತ ಇಬ್ಬರಿಗೂ ನ್ಯಾಯಕೊಡಬೇಕಾಗಿದೆ ಇದಕ್ಕೆ ಗ್ರಾಮಸ್ಥರ ಸಹಕಾರ ಬಹು ಮುಖ್ಯವಾಗಿದೆ.

ಎಂ.ಪಿ. ಕವಿರಾಜ್, ತಹಸೀಲ್ದಾರ್31ಕೆಕೆಡಿಯು3.ಕಡೂರು ತಾಲೂಕು ಹಡಗಲು ಗ್ರಾಮಸ್ಥರು ಶಾಲಾ ಆಟದ ಮೈದಾನವನ್ನು ಅಕ್ರಮವಾಗಿ ಬಳಕೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಉಪ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.