ಭಾರತೀಯ ಸೇನೆಯ ಮರಾಠ ಲೈಟ್ ಇನ್ಫೆಂಟ್ರಿಯಲ್ಲಿ 28 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಹೆಗ್ಗುಳ ಗ್ರಾಮದ ಸುಬೇದರ್ ಹೆಚ್.ಎ. ಸತೀಶ್ ಅವರನ್ನು ನಂದಿಗುಂದ ಗ್ರಾಮಸ್ಥರು ಸನ್ಮಾನಿಸಿದರು.

ಸೋಮವಾರಪೇಟೆ: ಭಾರತೀಯ ಸೇನೆಯ ಮರಾಠ ಲೈಟ್ ಇನ್ಫೆಂಟ್ರಿಯಲ್ಲಿ 28 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಹೆಗ್ಗುಳ ಗ್ರಾಮದ ಸುಬೇದರ್ ಹೆಚ್.ಎ. ಸತೀಶ್ ಅವರನ್ನು ನಂದಿಗುಂದ ಗ್ರಾಮಸ್ಥರು ಸನ್ಮಾನಿಸಿದರು.

ಭಾನುವಾರ ಗ್ರಾಮದ ಸಮುದಾಯಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸತೀಶ್ ಅವರನ್ನು ಅಭಿನಂದಿಸಲಾಯಿತು. ಈ ವೇಳೆ ಮಾತನಾಡಿದ ಸತೀಶ್, ದೇಶಸೇವೆ ಎಂಬುದು ಪ್ರತಿಯೊಬ್ಬ ಸೈನಿಕನ ಪಾಲಿಗೆ ಅತ್ಯುನ್ನತ ಕರ್ತವ್ಯವಾಗಿದೆ. ಸೇನೆಯಲ್ಲಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಭಾರತ ಹಾಗು ವಿದೇಶಗಳಲ್ಲೂ ಕಾರ್ಯನಿರ್ವಹಿಸುವ ಅವಕಾಶ ದೊರೆತಿದ್ದು, ಶಿಸ್ತು, ತ್ಯಾಗ ಮತ್ತು ದೇಶಪ್ರೇಮವೇ ಸೈನಿಕ ಜೀವನದ ಮೂಲ ಮೌಲ್ಯಗಳಾಗಿವೆ ಎಂದರು.

ಗ್ರಾಮಕ್ಕೆ ಹೆಮ್ಮೆ ತಂದಿರುವ ಅವರ ಸಾಧನೆ ಇತರ ಯುವಕರಿಗೆ ಸ್ಫೂರ್ತಿದಾಯಕವಾಗಿದೆ ಎಂದು ನಿವೃತ್ತ ಶಿಕ್ಷಕ ಎನ್.ಎಸ್. ರಾಜಪ್ಪ ಅಭಿಪ್ರಾಯಪಟ್ಟರು.

ಶ್ರೀ ನಂಜುಂಡೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಎನ್.ಎಚ್.ಸುದರ್ಶನ್, ಕಾರ್ಯದರ್ಶಿ ಎನ್.ಕೆ.ಮಂಜುನಾಥ್, ಹಿರಿಯರಾದ ನಿಂಗಸ್ವಾಮಿ, ಪಾಲಾಕ್ಷ, ಅರ್ಚಕ ಶಿವಮೂರ್ತಿ, ಪ್ರತಾಪ್, ಗೋಪಿ ಇದ್ದರು.