ಸಾರಾಂಶ
ಇಂಡಿ ಪ್ರತ್ಯೇಕ ಜಿಲ್ಲಾ ರಚನೆಯಾಗಬೇಕು ಹಾಗೂ ಇಂಡಿ ಉಪವಿಭಾಗವನ್ನು ಸಂವಿಧಾನದ ವಿಧಿ 371(ಜೆ) ಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ತಾಲೂಕಿನ ಸಾಲೋಟಗಿ ಹಾಗೂ ಮಿರಗಿ ಗ್ರಾಮಸ್ಥರು ಪಾದಯಾತ್ರೆ ನಡೆಸಿ, ತಾಲೂಕು ಆಡಳಿತ ಸೌಧದ ಮುಂದೆ ಧರಣಿ ನಡೆಸಿದರು.ಪಾದಯಾತ್ರೆ ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟು ಟಿಪ್ಪುಸುಲ್ತಾನ, ಬಸವೇಶ್ವರ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ನಡೆದು ತಾಲೂಕು ಆಡಳಿತ ಸೌಧ ತಲುಪಿತು.
ಕನ್ನಡಪ್ರಭ ವಾರ್ತೆ ಇಂಡಿ

ಈ ಸಂದರ್ಭದಲ್ಲಿ ಮಾತನಾಡಿದ ಮಂಜುನಾಥ ಕಾಮಗೊಂಡ, ಎಸ್.ಜೆ. ಮಾಡ್ಯಾಳ, ಡಾ.ದೇವೇಂದ್ರ ಬರಡೋಲ, ಸಂತೋಷ ಪರಸೆನವರ, ಮುನ್ನಾ ಡಾಂಗೆ, ಪಾಪು ಕಿತ್ತಲಿ, ವಿಜಯಪುರ ಜಿಲ್ಲೆಯಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕು ಇಂಡಿಯಾಗಿದ್ದು, ಇಂಡಿ ತಾಲೂಕು ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ಮಳೆಗಾಲ, ಚಳಿಗಾಲ, ಬೆಸಿಗೆಕಾಲ ಯಾವುದೇ ಇದ್ದರೂ ಬರದ ಛಾಯೆಯಿಂದ ಮುಕ್ತಿ ಹೊಂದಿರುವುದಿಲ್ಲ. ಮಳೆ ಇಲ್ಲದೆ ಬೆಳೆಗಳು ಸಂಪೂರ್ಣ ಹಾಳಾಗುತ್ತಲೆ ಇವೆ. ಈ ಭಾಗದ ರೈತರ ಕಷ್ಟ ಹೇಳತೀರದು, ಹೀಗಾಗಿ ಈ ಎಲ್ಲ ಸಮಸ್ಯೆಗಳು ಪರಿಹಾರವಾಗಲು ಇಂಡಿಯನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು ಹಾಗೂ ಇಂಡಿ ಉಪ ವಿಭಾಗವನ್ನು 371(ಜೆ) ವ್ಯಾಪ್ತಿಗೆ ಸೇರ್ಪಡೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.ಚನ್ನು ಶ್ರೀಗಿರಿ, ಶಿವಾನಂದ ರಾವೂರ, ಚಂದಣ್ಣ ಆಲಮೇಲ, ಜೀತಪ್ಪ ಕಲ್ಯಾಣಿ, ಮಲ್ಲನಗೌಡ ಪಾಟೀಲ, ಶಿವಯೋಗೆಪ್ಪ ಚನಗೊಂಡ, ರಮೇಶ ಅಡಗಲ್ಲ, ರಮೇಶ ಕಲ್ಯಾಣಿ, ಸಂತೋಷ ಪರಸೆನವರ, ಶಿವಯೋಗೆಪ್ಪ ಮಾಡ್ಯಾಳ, ಶಿವಾನಂದ ಹೊಸೂರ, ಶಿವಯೋಗೆಪ್ಪ ಜೊತಗೊಂಡ, ಬಸವರಾಜ ಬಂಗಲಿ, ರಾಜಅಹ್ಮದ ಖೇಡಗಿ, ರಾಜಶೇಖರ ಬಗಲಿ, ಬಸವರಾಜ ಕರೂರ ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಎಸಿ ಅಬೀದ್ ಗದ್ಯಾಳ ಅವರಿಗೆ ಮನವಿ ಸಲ್ಲಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))