ಸಾರಾಂಶ
ಹೊಳೆಹೊನ್ನೂರಿನ ಸಮೀಪದ ಎಮ್ಮೆಹಟ್ಟಿಗೆ ಭೇಟಿ ನೀಡಿದ ಪರಿಷತ್ ಸದಸ್ಯ ಎಂ.ಜಿ ಮುಳೆ ಗಾಯಾಳು ಅಪಿರ್ತಾಳಾ ಆರೋಗ್ಯ ವಿಚಾರಿಸಿದರು.
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಮೃತ ಕುಟುಂಬಗಳಿಗೆ ಗ್ರಾಮಸ್ಥರ ಸಹಕಾರ ಅಗತ್ಯ ಎಂದು ವಿಧಾನ ಪರಿಷತ್ ಸದಸ್ಯ ಡಾ.ಎಂ.ಜಿ.ಮುಳೆ ತಿಳಿಸಿದರು.ಅವರು ಸಮೀಪದ ಎಮ್ಮೆಹಟ್ಟಿಗೆ ಮಂಗಳವಾರ ಭೇಟಿ ನೀಡಿ ಮೃತ ಕುಟುಂಬಸ್ಥರಿಗೆ ಸಾಂತ್ವಾನ ಜೊತೆಗೆ ವೈಯಕ್ತಿಕ ನೆರವು ನೀಡಿ ಮಾತನಾಡಿ,
ಆಯಸ್ಸು ಪೂರ್ಣವಾಗದೆ ದುರಂತ ಸಾವು ಕಾಣುವುದು ನೋವಿನ ಸಂಗತಿ. ಮೃತರ ಕುಟುಂಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರೊಂದಿಗೆ ಚರ್ಚಿಸಿ ಕುಟುಂಸ್ಥರ ನೆರವಿಗೆ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.ಸರ್ಕಾರವಲ್ಲದೆ ಸ್ಥಳೀಯ ಜನ ಪ್ರತಿನಿಧಿಗಳು ಕುಟುಂಸ್ಥರಿಗೆ ಸಹಕಾರ ನೀಡುತ್ತಿದ್ದಾರೆ. ರಾಜ್ಯವೇ ಈ ಭೀಕರ ಅಪಘಾತ ಕಂಡು ಮರುಗಿದೆ. ಸಂಬಂಧಿಗಳೆ ಅಂಗವಿಕಲೆ ಸಂಕಷ್ಟಗಳಿಗೆ ಮಿಡಿಯಬೇಕು. ಪತಿ ಕಳೆದುಕೊಂಡ ರೇಣುಕಾಳಿಗೆ ಉದ್ಯೋಗ ಕೊಡಿಸುವ ವಿಚಾರದಲ್ಲಿ ಸಂತ್ರಸ್ಥೆಗೆ ಆತ್ಮಸ್ಥೈರ್ಯ ತುಂಬಬೇಕು. ಗ್ರಾಮಸ್ಥರು ನೊಂದವರಿಗೆ ಮತ್ತಷ್ಟು ಸಹಕಾರ ನೀಡಿ ಬದುಕು ಕಟ್ಟಿಕೊಡುವ ಕೆಲಸ ಮಾಡಬೇಕಿದೆ ಎಂದು ವಿವರಿಸಿದರು.
ಉಪಾಧ್ಯಕ್ಷ ನಾಗೇಶ್‌ರಾವ್, ಮಾಜಿ ಎಪಿಎಂಸಿ ಸದಸ್ಯ ಸತೀಶ್, ಬಾಳೋಜಿ ಬಸವರಾಜ್, ಸಚಿನ್‌ಸಿಂಧ್ಯೆ, ದೇವರಾಜ್ ಸಿಂದೆ, ಬಸವರಾಜ್, ತಿಪ್ಪೇಶರಾವ್, ಮುರಾರಿರಾವ್, ಕಗ್ಗಿ ಮಲ್ಲೇಶ್‌ರಾವ್, ರಂಗನಾಥರಾವ್, ರಾಜಪ್ಪ, ಹಾಲೋಜಿರಾವ್, ಬಿ.ವೈ ಬಸೋಜಿರಾವ್, ರಾಮು ಸೇರಿದಂತೆ ಇತರರಿದ್ದರು.ತಾಲೂಕು ಮರಾಠ ಸಮಾಜದ ಅಧ್ಯಕ್ಷರ ವಿರುದ್ಧ ಅಸಮಾಧಾನ
ರಸ್ತೆ ಅಪಘಾತದಲ್ಲಿ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದ ಒಂದೇ ಕುಟುಂಬದ 13 ಜನರು ಮೃತಪಟ್ಟಿದ್ದಾರೆ. ಇವರೆಲ್ಲರೂ ಮರಾಠ ಸಮಾಜಕ್ಕೆ ಸೇರಿದವರಾಗಿದ್ದು, ಗ್ರಾಮಗಳಲ್ಲಿ ಬಡವರು, ಶ್ರೀಮಂತರೆನ್ನದೇ ಹಣ ಸಂದಾಯ ಮಾಡಿ ಮೃತ ಕುಟುಂಬದ ನೆರವಿಗೆ ಮುಂದಾಗಿದ್ದಾರೆ. ಆದರೆ, ತಾಲೂಕಿನ ಮರಾಠ ಸಮಾಜ ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸಮಾಜ ತಮ್ಮ ನೆರವಿಗೆ ಬರದೇ ಹೋದಲ್ಲಿ ಸಮಾಜದಿಂದಾಗುವ ಪ್ರಯೋಜವೇನು ಎಂದು ಸಮಾಜ ಬಾಂಧವರು ಅಸಮಧಾನ ವ್ಯಕ್ತಪಡಿಸಿದ್ದಾರೆ.