ಸ್ಥಳಕ್ಕಾಗಮಿಸಿದ ಮುಂಡಗೋಡ ಬಸ್ ಘಟಕ ವ್ಯವಸ್ಥಾಪಕ ಎಸ್.ಎಂ. ಕುರ್ತಕೋಟಿ ಬೆಳಗ್ಗೆ ಸಂಜೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಾಳಗನಕೊಪ್ಪ ಗ್ರಾಮಕ್ಕೆ ಬಸ್ ಬಿಡಲಾಗುವುದೆಂದು ಲಿಖಿತ ಬರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.

ಮುಂಡಗೋಡ: ಕಾಳಗನಕೊಪ್ಪ ಮಾರ್ಗವಾಗಿ ಮುಂಡಗೋಡಕ್ಕೆ ಬಸ್ ಬಿಡುವಂತೆ ಆಗ್ರಹಿಸಿ ಗ್ರಾಮಸ್ಥರು ಬುಧವಾರ ಬಸ್ ತಡೆದು ಪ್ರತಿಭಟಿಸಿದರು.

ನಿತ್ಯ ಈ ಭಾಗದಿಂದ ನೂರಾರು ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಮುಂಡಗೋಡ ಶಾಲಾ ಕಾಲೇಜಿಗೆ ಹೋಗುತ್ತಾರೆ. ಕಾಯಂ ಬಸ್ ವ್ಯವಸ್ಥೆ ಇಲ್ಲದ ಕಾರಣ ಖಾಸಗಿ ವಾಹನವೇ ಗತಿಯಾಗಿದ್ದು, ಸಮಯಕ್ಕೆ ಸರಿಯಾಗಿ ತರಗತಿಗೆ ಹಾಜಲಾಗದೆ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ಹಾಗಾಗಿ ಮುಂಡಗೋಡ- ಹನುಮಾಪುರ ಬಸನ್ನು ಬೆಳಗ್ಗೆ ಹಾಗೂ ಸಂಜೆ ಈ ಮಾರ್ಗವಾಗಿಯೇ ಬಿಡಬೇಕೆಂದು ಒತ್ತಾಯಿಸಿದರು.

ಸ್ಥಳಕ್ಕಾಗಮಿಸಿದ ಮುಂಡಗೋಡ ಬಸ್ ಘಟಕ ವ್ಯವಸ್ಥಾಪಕ ಎಸ್.ಎಂ. ಕುರ್ತಕೋಟಿ ಬೆಳಗ್ಗೆ ಸಂಜೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಾಳಗನಕೊಪ್ಪ ಗ್ರಾಮಕ್ಕೆ ಬಸ್ ಬಿಡಲಾಗುವುದೆಂದು ಲಿಖಿತ ಬರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.

ಎಬಿವಿಪಿ ಶಿರಸಿ ವಿಭಾಗ ಸಂಚಾಲಕ ಯಶರಾಜ ನಾಗರಾಜ ಬೆಣ್ಣಿ, ನಾಗರಾಜ ಚಿಗಳ್ಳಿ, ಪರಶುರಾಮ ಉಪಾರ, ನೂರಹ್ಮದ ಗದಗ, ರಾಮಚಂದ್ರ ಬೆಳವತ್ತಿ, ರಾಜು ಬೆಳವತ್ತಿ, ಪರಶುರಾಮ ಮಾಳಪ್ಪನವರ ಮುಂತಾದವರು ಪಾಲ್ಗೊಂಡಿದ್ದರು.ನಟಿ ಐರಾ ಕೃಷ್ಣರಿಂದ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ

ಭಟ್ಕಳ: ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳಿಗೆ ಚಿತ್ರನಟಿ ಐರಾ ಕೃಷ್ಣ ಅವರು ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಬರಹ ಸಾಮಗ್ರಿಗಳು, ಪಠ್ಯಪುಸ್ತಕಗಳು ಹಾಗೂ ಶಾಲಾ ಬ್ಯಾಗ್‌ಗಳನ್ನು ವಿತರಿಸಿದರು.ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ಹಸ್ತಾಂತರಿಸಿದರು. ಇದೇ ವೇಳೆ ಬಡ ಕುಟುಂಬಗಳನ್ನು ಗುರುತಿಸಿ ಮಳೆಗಾಲದಲ್ಲಿ ಉಪಯೋಗವಾಗುವ ಟಾರ್ಪಾಲ್‌ಗಳನ್ನು ಸಹ ವಿತರಿಸಿದರು.ಕನ್ನಡ, ತಮಿಳು, ತೆಲುಗು ಸೇರಿದಂತೆ ವಿವಿಧ ಭಾಷೆಗಳ ಹಲವು ಜಾಹೀರಾತುಗಳು ಹಾಗೂ ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಐರಾ ಕೃಷ್ಣ ಅವರು ಕಳೆದ ಐದು ವರ್ಷಗಳಿಂದ ತಮಿಳುನಾಡು ಸೇರಿದಂತೆ ತಮ್ಮ ಹುಟ್ಟೂರಾದ ಭಟ್ಕಳದಲ್ಲಿಯೂ ವಿವಿಧ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ವಿಶೇಷವಾಗಿ ಸರ್ಕಾರಿ ಶಾಲೆಗಳನ್ನು ಗುರುತಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗುವ ಅಗತ್ಯ ಪರಿಕರಗಳನ್ನು ವಿತರಿಸುತ್ತಾ ಬಂದಿದ್ದಾರೆ.ಈ ಬಾರಿ ತಾಲೂಕಿನ ಕೊಡ್ಸುಳು ಹೈಸ್ಕೂಲ್, ಉತ್ತರಕೊಪ್ಪದ ಗುಂಡ್ಲುಕಟ್ಟೆ ಹಿರಿಯ ಪ್ರಾಥಮಿಕ ಶಾಲೆ, ಕಾಯ್ಕಿಣಿಯ ಕೆಪಿಎಸ್ಸಿ ಹೈಸ್ಕೂಲ್ ಹಾಗೂ ಪದವಿಪೂರ್ವ ಕಾಲೇಜು ಮತ್ತು ಗೊರಟೆ ಹೈಸ್ಕೂಲ್‌ಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸುವ ಮೂಲಕ ನೆರವಿನ ಹಸ್ತ ಚಾಚಿದರು.

ಇದಲ್ಲದೆ, ನಗರ ಭಾಗದಲ್ಲಿರುವ ಕೊರಗರಕೇರಿ ಹಾಗೂ ಉತ್ತರಕೊಪ್ಪದಲ್ಲಿರುವ ಕೊಳಗೇರಿಯ ಗುಡಿಸಲುಗಳಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳನ್ನು ಗುರುತಿಸಿ, ಮಳೆ ಹಾಗೂ ಪ್ರತಿಕೂಲ ಹವಾಮಾನದಿಂದ ರಕ್ಷಣೆ ಪಡೆಯಲು ಟಾರ್ಪಾಲ್‌ಗಳನ್ನು ವಿತರಿಸಿದರು. ತಮ್ಮ ಹುಟ್ಟೂರಾದ ಭಟ್ಕಳದ ಬಗ್ಗೆ ಅಪಾರ ಗೌರವ ಹಾಗೂ ಕಾಳಜಿ ಹೊಂದಿರುವ ನಟಿ ಐರಾ ಕೃಷ್ಣ ಅವರು, ಮುಂದಿನ ದಿನಗಳಲ್ಲಿಯೂ ಸಮಾಜದ ಅಗತ್ಯವಿರುವ ವರ್ಗಗಳಿಗೆ ಇನ್ನಷ್ಟು ನೆರವು ನೀಡುವ ಆಶಯ ವ್ಯಕ್ತಪಡಿಸಿದರು.