ರಾಷ್ಟ್ರೀಯ ಹೆದ್ದಾರಿ ೨೦೯ಕ್ಕೆ ಹೊಂದಿಕೊಂಡ ಕಾಡಂಚಿನ ಗ್ರಾಮಗಳಾದ ಬೆಜ್ಜಲಪಾಳ್ಯ, ಬಾನವಾಡಿ ಗ್ರಾಮದಲ್ಲಿ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೂಮಿಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ರಾಷ್ಟ್ರೀಯ ಹೆದ್ದಾರಿ ೨೦೯ಕ್ಕೆ ಹೊಂದಿಕೊಂಡ ಕಾಡಂಚಿನ ಗ್ರಾಮಗಳಾದ ಬೆಜ್ಜಲಪಾಳ್ಯ, ಬಾನವಾಡಿ ಗ್ರಾಮದಲ್ಲಿ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ರಸ್ತೆಗಳು ಗ್ರಾಮಗಳ ಅಭಿವೃದ್ಧಿಯ ಸಂಕೇತವಾಗಿದ್ದು, ಬೆಜ್ಜಳಪಾಳ್ಯ ಗ್ರಾಮದಲ್ಲಿ ಎಸ್ಸಿಪಿ ಯೋಜನೆಯಡಿಯಲ್ಲಿ ೫೦ ಲಕ್ಷ ರು. ಬಾನವಾಡಿ ಗ್ರಾಮಕ್ಕೆ ಟಿಎಸ್ಪಿ ಯೋಜನೆಯಡಿ ೫೦ ಲಕ್ಷ ರು. ಸೇರಿದಂತೆ ೧ ಕೋಟಿ ರು.,ವೆಚ್ಚದಲ್ಲಿ ಸಿಮೆಂಟ್ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಗ್ರಾಮಸ್ಥರು ಮುಂದೆ ನಿಂತು ಗುಣಮಟ್ಟದ ರಸ್ತೆ ನಿರ್ಮಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಮ್ಮ ಕೇತ್ರವ್ಯಾಪ್ತಿಯಲ್ಲಿ ಜನತೆಯ ಆಶಯಕ್ಕೆ ಬದ್ಧರಾಗಿ ಗ್ರಾಮಗಳಲ್ಲಿ ರಸ್ತೆ ಚರಂಡಿ, ಸಮುದಾಯ ಭವನ ಆಶ್ರಯ ಮನೆ ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಸರ್ಕಾರ ಮಂಜೂರು ಮಾಡುವ ಅನುದಾನ ಹಾಗೂ ಸೌಲಭ್ಯಗಳನ್ನು ಜನರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಾಗುತ್ತಿದೆ, ಕಾಮಗಾರಿ ನಿರ್ವಹಣೆ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಚಪ್ಪ, ಸದಸ್ಯ ಪಿ.ನಾಗನಾಯಕ, ಗಣೇಶ್‌ನಾಯಕ, ಮಾಜಿ ತಾ,ಪಂ ಸದಸ್ಯ ಪಿ,ಕುಮಾರ್‌ನಾಯಕ್, ಗ್ರಾ,ಪಂ ಮಾಜಿ ಉಪಾಧ್ಯಕ್ಷ ಷಮೀರ್‌ಪಾಷ, ಶಿವಜಿನಾಯಕ, ಮುಖಂಡರಾದ ಜಡಯಪ್ಪ, ಉಲ್ಲೇಶ್‌ನಾಯಕ್, ಶಂಕರ್, ನಿಂಗಪ್ಪ, ರವಿ, ಬಿಸಲವಾಡಿರವಿ, ಪಿಡಿಓ ಲಕ್ಷಣ್‌ನಾಯಕ್, ಕೆಆರ್‌ಐಡಿಎಲ್ ಎಂಜಿನಿಯರ್‌ಮಧು, ಸೇರಿದಂತೆ ಗ್ರಾಮಸ್ಥರು, ಮುಖಂಡರು ನಿವಾಸಿಗಳು ಹಾಜರಿದ್ದರು.