ಪಾಂಡವಪುರ ತಾಲೂಕು ಲಕ್ಷ್ಮಿಸಾಗರ ಗ್ರಾಪಂಗೆ ವಿನುತ ತಿಮ್ಮೇಗೌಡ ನೂತನ ಅಧ್ಯಕ್ಷೆ

| Published : Mar 21 2024, 01:05 AM IST

ಸಾರಾಂಶ

ಪಾಂಡವಪುರ ತಾಲೂಕಿನ ಲಕ್ಷ್ಮಿಸಾಗರ ಗ್ರಾಪಂನ ನೂತನ ಅಧ್ಯಕ್ಷರಾಗಿ ರೈತಸಂಘ- ಕಾಂಗ್ರೆಸ್ ಬೆಂಬಲಿತ ಸದಸ್ಯೆ ವಿನುತ ತಿಮ್ಮೇಗೌಡ ಅವಿರೋಧವಾಗಿ ಆಯ್ಕೆಯಾದರೆ, ದೊಡ್ಡಬ್ಯಾಡರಹಳ್ಳಿ ಗ್ರಾಮ ಪಂಚಾಯ್ತಿ ನೂತನ ಉಪಾಧ್ಯಕ್ಷೆಯಾಗಿ ಜೆಡಿಎಸ್ ಬೆಂಬಲಿತ ಪವಿತ್ರ ಶಿವಲಿಂಗು ಅವಿರೋಧವಾಗಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಲಕ್ಷ್ಮಿಸಾಗರ ಗ್ರಾಪಂನ ನೂತನ ಅಧ್ಯಕ್ಷರಾಗಿ ರೈತಸಂಘ- ಕಾಂಗ್ರೆಸ್ ಬೆಂಬಲಿತ ಸದಸ್ಯೆ ವಿನುತ ತಿಮ್ಮೇಗೌಡ ಅವಿರೋಧವಾಗಿ ಆಯ್ಕೆಯಾದರು.

ಗ್ರಾಪಂನ ಹಿಂದಿನ ಅಧ್ಯಕ್ಷೆ ಚಂದ್ರಕಲಾ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆದು ಅಧ್ಯಕ್ಷ ಸ್ಥಾನಕ್ಕೆ ವಿನುತರನ್ನು ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಗ್ರಾಪಂನ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಅಜಯ್ ಘೋಷಿಸಿದರು.

ನೂತನ ಅಧ್ಯಕ್ಷೆ ವಿನುತ ತಿಮ್ಮೇಗೌಡ ಆಯ್ಕೆಯಾಗುತ್ತಿದ್ದಂತೆಯೇ ಪಟಾಕಿ ಸಿಡಿಸಿ ಸಿಹಿಹಂಚಿಸಿ ಸಂಭ್ರಮಿಸಿದರು. ನಂತರ ಅಧ್ಯಕ್ಷೆರ ಎಲ್ಲಾ ಸದಸ್ಯರು ಅಭಿನಂಧಿಸಿದರು.

ಅಧ್ಯಕ್ಷೆ ವಿನುತ ಮಾತನಾಡಿ, ಗ್ರಾಪಂ ಸದಸ್ಯರು ಸಹಕಾರದಿಂದ ಅಧ್ಯಕ್ಷೆಯಾಗಿಆಯ್ಕೆಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ಪಡೆದು ಗ್ರಾಪಂನ ಗ್ರಾಮಗಳ ಅಭಿವೃದ್ಧಿ ಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈ ವೇಳೆ ಗ್ರಾಪಂ ಉಪಾಧ್ಯಕ್ಷ ಕೆಂಪೇಗೌಡ, ಸದಸ್ಯರಾದ ಎಲ್.ಸಿ.ಕುಮಾರ, ಕೆ.ಎಸ್.ಶಿಶಿಕಲಾ, ಮೀನಾಕ್ಷಿ, ಎಲ್.ಪಿ.ಕುಮಾರ, ಭಾರತಿ, ಸತೀಶ್, ನರಸಿಂಹಚಾರಿ, ಎನ್.ಕೆ.ಪ್ರಮೋದ್, ಸವಿತ, ಜಯಲಕ್ಷ್ಮಿ, ಮುಖಂಡರಾದ ರಂಗಸ್ವಾಮಿ, ಎಲ್.ಬಿ.ರವಿ, ಮಹದೇಶ್ವರ ದೇವರಾಜು, ಪುಟ್ಟೇಗೌಡ, ಪಾರ್ಥ, ದೇವರಾಜು, ಅಶೋಕ್, ತಿಮ್ಮೇಗೌಡ, ಪುಟ್ಟರಾಜು, ಸೋಮಶೇಖರ್ ಸೇರಿದಂತೆ ಹಲವರು ಇದ್ದರು.ದೊಡ್ಡಬ್ಯಾಡರಹಳ್ಳಿ ಗ್ರಾಪಂ ಉಪಾಧ್ಯಕ್ಷರಾಗಿ ಪವಿತ್ರ ಶಿವಲಿಂಗು ಆಯ್ಕೆ

ಪಾಂಡವಪುರ:ತಾಲೂಕಿನ ದೊಡ್ಡಬ್ಯಾಡರಹಳ್ಳಿ ಗ್ರಾಮ ಪಂಚಾಯ್ತಿ ನೂತನ ಉಪಾಧ್ಯಕ್ಷೆಯಾಗಿ ಜೆಡಿಎಸ್ ಬೆಂಬಲಿತ ಪವಿತ್ರ ಶಿವಲಿಂಗು ಅವಿರೋಧವಾಗಿ ಆಯ್ಕೆಯಾದರು.ಹಿಂದಿನ ಉಪಾಧ್ಯಕ್ಷೆ ಕುಮಾರಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಪವಿತ್ರರನ್ನು ಹೊರತುಪಡಿಸಿ ಬೇರೆಯಾರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ನೂತನ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಪುಟ್ಟಮಾಯಿಗೌಡ ಘೋಷಿಸಿದರು.ಉಪಾಧ್ಯಕ್ಷೆಯಾಗಿ ಪವಿತ್ರಶಿವಲಿಂಗು ಆಯ್ಕೆಯಾಗುತ್ತಿದ್ದಂತೆಯೇ ಪಟಾಕಿ ಸಿಡಿಸಿ ಸಿಹಿಹಂಚಿಸಿ ಸಂಭ್ರಮಿಸಿದರು. ನೂತನ ಉಪಾಧ್ಯಕ್ಷೆಯನ್ನು ಎಲ್ಲ ಸದಸ್ಯರು ಅಭಿನಂದಿಸಿದರು.ಈ ವೇಳೆ ಗ್ರಾಪಂ ಅಧ್ಯಕ್ಷ ಕಠಾರಿ ಶಂಕರ, ಸದಸ್ಯರಾದ ಪ್ರಸನ್ನ, ಆನಂದ, ರವಿರಾಜ್, ಮನು, ಲಿಂಗರಾಜು, ಮಹದೇವಮ್ಮ, ಕುಮಾರಿ, ಮಂಜುಳ, ಶಕುಂತಲ, ಶಿವಲಿಂಗು, ಮುಖಂಡರಾದ ಡಿ.ಎನ್.ರವಿ, ಡಿ.ಎಂ.ನಿಂಗೇಗೌಡ, ಡಿ.ಟಿ.ಧರ್ಮ, ಕಾಳೇಗೌಡ, ಎನ್.ಕೃಷ್ಣ, ರಂದ, ನಂಜುಂಡಪ್ಪ, ಮೆಡಿಕಲ್ ಲೋಕೇಶ್, ಡಿ.ನಿಂಗರಾಜು, ಸ್ವಾಮಿ, ಆನಂದ್‌ಗೌಡ, ಎನ್.ಶಿವಣ್ಣ, ಡಿ.ಎನ್.ಗಿರೀಶ್ ಸೇರಿದಂತೆ ಹಲವರು ಹಾಜರಿದ್ದರು.