ಸಾರಾಂಶ
ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಆಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ಮಾನವ ಹಕ್ಕುಗಳ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಆಳಂದ
ಮಾನವನಿಗೆ ಸಂವಿಧಾನದಡಿ ಹಕ್ಕುಗಳ ಸಂರಕ್ಷಣೆ ಮತ್ತು ಪಾಲನೆಗೆ ಒತ್ತು ನೀಡಲಾಗಿದೆ. ಇದಕ್ಕೆ ಭಾರತೀಯ ಸಂವಿಧಾನ ಬೆನ್ನೆಲುಬಾಗಿದೆ. ಹೀಗಾಗಿ ಪ್ರಜೆಗಳು ದೇಶದ ಸಂವಿಧಾನ ಮತ್ತು ಕಾನೂನು ನಿಯಮಗಳನ್ನು ಅರಿತು ಮಾನವ ಹಕ್ಕು ಮತ್ತು ಕರ್ತವ್ಯ ಪಾಲನೆ ಜೊತೆಗೆ ಪರಸ್ಪರ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ಹಿರಿಯ ಶ್ರೇಣಿಯ ನ್ಯಾಯಾಧೀಶರೂ ಆದ ಕಾನೂನು ಸೇವಾ ಸಮಿತಿ ಅಧ್ಯಕ್ಷ ಎಸ್. ಎಂ. ಅರುಟಗಿ ಹೇಳಿದರು.ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಆಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ಮಾನವ ಹಕ್ಕುಗಳ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವ ಮಾನವ ಹಕ್ಕಗಳಲ್ಲಿ ಪ್ರಮುಖವಾಗಿ ಪ್ರತಿಯೊಂದು ವ್ಯಕ್ತಿಗೂ ಜೀವನದ ಹಕ್ಕು ಹೊಂದಿದೆ. ಸ್ವತಂತ್ರತೆ ಮತ್ತು ಆರಾಧನೆಗೆ ಹಕ್ಕು, ಸಮಾಜದಲ್ಲಿ ನ್ಯಾಯ, ಸ್ವಾಸ್ಥ್ಯ ಹಾಗೂ ಆರೋಗ್ಯ ಸೌಕರ್ಯಗಳ ಹಕ್ಕು ನೀಡಲಾಗಿದೆ. ಪ್ರಜೆಗಳಿಗಿರುವ ಹಕ್ಕುಗಳನ್ನು ಅನುಭವಿಸುವುದರ ಜೊತೆಗೆ ಕರ್ತವ್ಯ ಪಾಲನೆ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.ಪ್ರಧಾನ ಸಿವಿಲ್ ನ್ಯಾಯಾಧೀಶ ಯಲ್ಲಪ್ಪಾ ಕಲ್ಲಾಪೂರ ಅವರು ಮಾತನಾಡಿ, ಮಾನವ ಹಕ್ಕುಗಳ ಸಂರಕ್ಷಣೆಗೆ ಕಾನೂನು ಸಹಾಯಸ್ತ ನೀಡಲಿದೆ ಎಂದು ಹೇಳಿದರು.
ಹಿರಿಯ ನ್ಯಾಯವಾದಿ ದೇವಾನಂದ ಹೋದಲೂರಕರ್ ವಿಶ್ವ ಮಾನವ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು.ವೇದಿಕೆಯಲ್ಲಿ ಸರ್ಕಾರಿ ವಕೀಲೆ ಜೋತಿ ವಿ. ಬಂದಿ, ನ್ಯಾಯವಾದಿ ಸಂಘದ ಕಾರ್ಯದರ್ಶಿ ಬಿ.ಟಿ. ಸಿಂಧೆ ಸೇರಿ ಹಿರಿಯ ಕಿರಿಯ ನ್ಯಾಯವಾದಿಗಳು ಮತ್ತು ಕಕ್ಷಿದಾರರು ಉಪಸ್ಥಿತರಿದ್ದರು.
ನ್ಯಾಯವಾದಿ ಅರ್ಪಣಾ ಹೋದಲೂರಕರ್ ನಿರೂಪಿಸಿದರೆ, ನ್ಯಾಯವಾದಿ ಬಿ.ಜಿ. ಬೀಳಗಿ ವಂದಿಸಿದರು.