ರಸ್ತೆ ಅತಿಕ್ರಮಣ ತೆರವುಗೊಳಿಸದಿದ್ದಲ್ಲಿ ಉಗ್ರ ಹೋರಾಟ

| Published : Jun 20 2024, 01:13 AM IST

ಸಾರಾಂಶ

ರಸ್ತೆಯ ಮೇಲೆ ಮನೆ ನಿರ್ಮಾಣ ಮಾಡಿರುವುದನ್ನು ತೆರವುಗೊಳಿಸಲು ಕಳೆದೊಂದು ವರ್ಷದಿಂದ ಸಂಬಂಧಿಸಿದ ಇಲಾಖೆಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಶೀಘ್ರವೇ ಅತಿಕ್ರಮಣ ತೆರವುಗೊಳಿಸಿ ಸಾರ್ವಜನಿಕರಿಗೆ ಸುಲಭ ಸಂಚಾರಕ್ಕೆ ಅವಕಾಶ ಕಲ್ಪಿಸದಿದ್ದಲ್ಲಿ ನಗರಸಭೆ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದೆಂದು ಮಹಾದೇವ ಧೂಪದಾಳ ಎಚ್ಚರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ರಸ್ತೆಯ ಮೇಲೆ ಮನೆ ನಿರ್ಮಾಣ ಮಾಡಿರುವುದನ್ನು ತೆರವುಗೊಳಿಸಲು ಕಳೆದೊಂದು ವರ್ಷದಿಂದ ಸಂಬಂಧಿಸಿದ ಇಲಾಖೆಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಶೀಘ್ರವೇ ಅತಿಕ್ರಮಣ ತೆರವುಗೊಳಿಸಿ ಸಾರ್ವಜನಿಕರಿಗೆ ಸುಲಭ ಸಂಚಾರಕ್ಕೆ ಅವಕಾಶ ಕಲ್ಪಿಸದಿದ್ದಲ್ಲಿ ನಗರಸಭೆ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದೆಂದು ಮಹಾದೇವ ಧೂಪದಾಳ ಎಚ್ಚರಿಸಿದ್ದಾರೆ.

ರಬಕವಿಯ ರಾಘವೇಂದ್ರ ದೇವಸ್ಥಾನದಿಂದ ಮಹಾಲಿಂಗಪುರ ನಾಕಾದವರೆಗೆ ಸುಮಾರು ೬೦ ಅಡಿಯಷ್ಟು ಉದ್ದನೆಯ ರಸ್ತೆಯಿದ್ದು, ಇದೀಗ ಚಿಕ್ಕ ರಸ್ತೆಯಾಗಿ ಬೈಕ್ ಸವಾರರು ಸಹ ತೆರಳಲು ಸಾಧ್ಯವಾಗುತ್ತಿಲ್ಲ. ದಿನದಿಂದ ದಿನಕ್ಕೆ ಎರಡೂ ಬದಿಯ ಮನೆಯವರು ರಸ್ತೆ ಅತಿಕ್ರಮಿಸಿಕೊಂಡು ಸರ್ಕಾರಿ ಜಾಗ ಕಬಳಿಸುವ ಹುನ್ನಾರ ನಡೆಸುತ್ತಿದ್ದಾರೆಂದು ಧೂಪದಾಳ ಆರೋಪಿಸಿದ್ದಾರೆ.ಇವೆಲ್ಲದರ ಕುರಿತು ಮಾಹಿತಿ ಒದಗಿಸಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮೌನಕ್ಕೆ ಜಾರಿರುವುದು ಸೋಜಿಗದ ಸಂಗತಿಯಾಗಿದೆ. ಈ ಕುರಿತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವದೇ ಪ್ರಯೋಜನವಾಗದಿರುವದು ವಿಪರ್ಯಾಸವಾಗಿದೆ. ತಕ್ಷಣ ಈ ಕುರಿತು ಕ್ರಮ ಕೈಗೊಳ್ಳಬೇಕೆಂಬುದು ನಾಗರಿಕರ ಒತ್ತಾಯವಾಗಿದೆ.ಜಾಗ ಅತಿಕ್ರಮಣದ ಬಗ್ಗೆ ಮಾಹಿತಿಯಿದೆ. ಬರುವ ಸೋಮವಾರ ಭೂಮಾಪಕರ ಸಮಕ್ಷಮ ಅಳತೆಯೊಂದಿಗೆ ರಸ್ತೆ ವಶಕ್ಕೆ ಪಡೆದು ಸುಗಮ ಸಂಚಾರಕ್ಕೆ ಶೀಘ್ರ ಅವಕಾಶ ಕಲ್ಪಿಸಲಾಗುವುದು.

-ಜಗದೀಶ ಈಟಿ, ಪೌರಾಯುಕ್ತರು ರಬಕವಿ-ಬನಹಟ್ಟಿ.