ಕೊಡವ ಪೊಮ್ಮಕ್ಕಡ ಒಕ್ಕೂಟ ಕೊಡವ ಸಮಾಜ ವಿರಾಜಪೇಟೆ ವತಿಯಿಂದ ಕೊಡವ ಸಮಾಜದಲ್ಲಿ ಕಕ್ಕಡ ನಮ್ಮೆ 2026-27 ನ್ನು ಆಚರಿಸಲಾಯಿತು. ಕೊಡವ ಪೊಮ್ಮಕ್ಕಡ ಒಕ್ಕೂಟದ ಪೊನ್ನಕ್ಕ ತಂಡದವರಿಂದ ಕಾರ್ಯಕ್ರಮ ನೆರವೇರಿತು.

ವಿರಾಜಪೇಟೆ: ಕೊಡವ ಪೊಮ್ಮಕ್ಕಡ ಒಕ್ಕೂಟ ಕೊಡವ ಸಮಾಜ ವಿರಾಜಪೇಟೆ ವತಿಯಿಂದ ಕೊಡವ ಸಮಾಜದಲ್ಲಿ ಕಕ್ಕಡ ನಮ್ಮೆ 2026-27 ನ್ನು ಆಚರಿಸಲಾಯಿತು. ಕೊಡವ ಪೊಮ್ಮಕ್ಕಡ ಒಕ್ಕೂಟದ ಪೊನ್ನಕ್ಕ ತಂಡದವರಿಂದ ಕಾರ್ಯಕ್ರಮ ನೆರವೇರಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ ಉದ್ಘಾಟನೆ ನೆರವೇರಿಸಿ ಮಾತನಾಡಿ, ಚಳಿ, ಗಾಳಿ, ಮಳೆಯನ್ನು ಲೆಕ್ಕಿಸದೆ ನಮ್ಮ ಮನೆಯ ಕೆಲಸಗಳನ್ನು ನಾವೇ ಮಾಡಬೇಕು. ಮನೆಯಲ್ಲಿ ಸಾಕು ಪ್ರಾಣಿಗಳನ್ನು ಸಾಕಬೇಕು. ದೈಹಿಕ ಚಟುವಟಿಕೆಗಳಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.

ವಿರಾಜಪೇಟೆ ಕೊಡವ ಸಮಾಜದ ಉಪಾಧ್ಯಕ್ಷ ಕಾಣತಂಡ ಜಗದೀಶ್ ಶುಭಾಶಯಗಳನ್ನು ಕೋರಿ, ಮಹಿಳೆಯರು ಸಮಾಜದಲ್ಲಿ ಸ್ವಾವಲಂಬಿಗಳಾಗಿ ಬದುಕಬೇಕು. ಉತ್ತಮ ಕೆಲಸವನ್ನು ಮಾಡುವುದರ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದರು.

ವಿರಾಜಪೇಟೆ ಕೊಡವ ಸಮಾಜದ ಕಾರ್ಯದರ್ಶಿ ಮಾಲೆಟಿರ ಶ್ರೀನಿವಾಸ್ ಮಾತನಾಡಿ, ಮಹಿಳೆಯರು ಮನೆಯಲ್ಲಿ ಹೇಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟುಕೊಂಡು ಜೀವನವನ್ನು ಸಾಗಿಸುತ್ತಾರೋ ಹಾಗೆಯೇ ಸಮಾಜದಲ್ಲೂ ತಮ್ಮ ಪ್ರತಿಭೆಗಳನ್ನು ಹೊರ ಚೆಲ್ಲುತಾ ಒಳ್ಳೆಯ ಹೆಸರನ್ನು ತರಬೇಕು ಎಂದರು.

ಕೊಡವ ಪೊಮ್ಮಕ್ಕಡ ಒಕ್ಕೂಟ ಕೊಡವ ಸಮಾಜ ವಿರಾಜಪೇಟೆಯ ಅಧ್ಯಕ್ಷೆ ತಾತಂಡ ಜ್ಯೋತಿ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ಕಾರ್ಯದರ್ಶಿ ಕುಂಞಿರ ಚಿತ್ರ ಚರ್ಮಣ 2025-26ನೇ ಸಾಲಿನ ವರದಿ ಮಂಡಿಸಿದರು. ಒಕ್ಕೂಟದ ಖಜಾಂಚಿ ತಾತಂಡ ಯಶು ಕಬೀರ್ 2025-26ನೇ ಸಾಲಿನ ಲೆಕ್ಕಪತ್ರ ಮಂಡಿಸಿದರು. ಮದ್ದು ಸೊಪ್ಪಿನಿಂದ ಪಾಯಸ ಹಾಗೂ ಪುಟ್ ತಯಾರಿಸುವ ಸ್ಪರ್ಧೆಯನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿತ್ತು. ಮದ್ದು ಪಾಯಸ ತಯಾರಿಸುವ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಮಾಲೆಟಿರ ವಿನಿಶಾ, ದ್ವಿತೀಯ ಬಹುಮಾನವನ್ನು ಮಂಡೇಪಂಡ ಶಾಂಶ, ತೃತೀಯ ಬಹುಮಾನವನ್ನು ಮಾಚೆಟ್ಟಿರ ರುಕ್ಮಿಣಿ ಪಡೆದುಕೊಂಡರು. ಪುಟ್ ತಯಾರಿಸುವ ಸ್ಪರ್ಧೆಯಲ್ಲಿ ಮಾಚೆಟ್ಟಿರ ರುಕ್ಮಿಣಿ ಪ್ರಥಮ ಹಾಗೂ ಪುಗ್ಗೇರ ಭವಾನಿ ದ್ವಿತೀಯ ಬಹುಮಾನ ಪಡೆದರು. ಒಕ್ಕೂಟದ ಉಪಾಧ್ಯಕ್ಷೆ ಮುರುವಂಡ ಉಷಾ ಮೊನ್ನಪ್ಪ ಅವರು ಸ್ಪರ್ಧೆಯನ್ನು ಆಯೋಜಿಸಿ ಬಹುಮಾನ ಮೊತ್ತ ನೀಡಿದರು. ಮೂಕೋಂಡ ಪ್ರೀತ್ ಈರಪ್ಪ ಅವರು ಕಕ್ಕಡ ನಮ್ಮೆಯ ಕುರಿತು ಭಾಷಣ ಸ್ಪರ್ಧೆ ನಡೆಸಿಕೊಟ್ಟರು. ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಕಾಣತಂಡ ಬೀನಾ ಜಗದೀಶ್, ದ್ವಿತೀಯ ಬಹುಮಾನವನ್ನು ಬಡುವಮಂಡ ವೀಣಾ, ತೃತೀಯ ಬಹುಮಾನವನ್ನು ಅಮ್ಮಣಿಚಂಡ ಮಂಗಳ ಪ್ರವೀಣ್ ಪಡೆದುಕೊಂಡರು. ಪೊನ್ನಕ್ಕ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಹಿಳೆಯರು ತಾವು ತಯಾರಿಸಿದ ವಿವಿಧ ವಸ್ತುಗಳ ಮಳಿಗೆಯನ್ನು ತೆರೆಯಲಾಯಿತು. ಮಂಡೇಪಂಡ ಶಾಂತಿ ಸ್ವಾಗತಿಸಿ, ಪುಡಿಯಂಡ ಅಸ್ತು, ಕುಂದಿರ ಕನಿಕೆ, ಬೊಳ್ಳಾರ್ ಪಂಡ ಅನಿತಾ ಪ್ರಾರ್ಥಿಸಿ, ಅಜ್ಜಿನಿಕಂಡ ಪ್ರಮೀಳಾ ನಾಚಯ್ಯ ನಿರೂಪಿಸಿ, ಕೀತಿಯಂಡ ಕಾವೇರಮ್ಮ ವಂದಿಸಿದರು.