ವಿರಾಜಪೇಟೆ ಐತಿಹಾಸಿಕ ಗೌರಿ ಗಣೇಶೋತ್ಸವಕ್ಕೆ ತೆರೆ

| Published : Sep 08 2025, 01:01 AM IST

ಸಾರಾಂಶ

ಐತಿಹಾಸಿಕ ಗೌರಿ ಗಣೇಶೋತ್ಸವ ತನ್ನ ಗತಕಾಲದ ವೈಭವದೊಂದಿಗೆ 22 ಸಮಿತಿಗಳ ಉತ್ಸವ ಮೂರ್ತಿಯ ಸಾಮೂಹಿಕ ಶೋಭಾಯಾತ್ರೆ ಸಂಪನ್ನಗೊಂಡಿತು.

ಕನ್ನಡಪ್ರಭವಾರ್ತೆವಿರಾಜಪೇಟೆವಿರಾಜಪೇಟೆ ನಗರದ ಐತಿಹಾಸಿಕ ಗೌರಿ ಗಣೇಶೋತ್ಸವ ತನ್ನ ಗತಕಾಲದ ವೈಭವದೊಂದಿಗೆ 22 ಸಮಿತಿಗಳ ಉತ್ಸವ ಮೂರ್ತಿಯ ಸಾಮೂಹಿಕ ಶೋಭಾಯತ್ರೆಯೊಂದಿಗೆ ಶನಿವಾರ ರಾತ್ರಿ ಸಂಪನ್ನಗೊಂಡಿತು.ವಿರಾಜಪೇಟೆ ನಗರದಲ್ಲಿ 9 ದಿನಗಳ ಕಾಲ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಗೌರಿ- ಗಣೇಶೋತ್ಸವ ಆಚರಣೆ ಮಾಡಿ ಅನಂತ ಪದ್ಮನಾಭ ವ್ರತದಂದು ಸಾಮೂಹಿಕ ಉತ್ಸವ ಮೂರ್ತಿಯ ವಿಸರ್ಜನಾ ಮಹೋತ್ಸವ ಅತಿ ವಿಜ್ರಂಭಣೆಯಿಂದ ನಡೆಯಿತು. ತುಂತುರು ಮಳೆಯಿದ್ದರು. ಜಿಲ್ಲೆಯ ನಾನಾ ಭಾಗಗಳು ಸೇರಿದಂತೆ ರಾಜ್ಯ ಹಾಗೂ ನೆರೆಯ ರಾಜ್ಯಗಳಿಂದ ಅತ್ಯಧಿಕ ಪ್ರಮಾಣದಲ್ಲಿ ಭಕ್ತರು ನಗರಕ್ಕೆ ಆಗಮಿಸಿ ಶೋಭಾಯಾತ್ರೆಯಲ್ಕಿ ಭಾಗವಹಿಸಿದ್ದರು. ಆ.27ರಂದು ರಾತ್ರಿ ನಗರದ ಶ್ರೀ ಮಹಾ ಗಣಪತಿ ದೇವಾಲಯ ದ ಉತ್ಸವ ಮೂರ್ತಿಗೆ ಪ್ರಥಮ ಪೂಜೆ ಸಲ್ಲಿಸಿ ಸಾವಿರ ಒಂದು ಇಡುಕಾಯಿ ಅರ್ಪಣೆ ಮಾಡಿ ಸಿಡಿಮದ್ದು ಸಿಡಿಸಿ ಶೋಭಯಾತ್ರೆಗೆ ಚಾಲನೆ ನೀಡಲಾಯಿತು.ವಿವಿಧ ಹೂವುಗಳಿಂದ ಶೃಂಗಾರಗೊಂಡ ಹೂವಿನ ಮಂಟಪದಲ್ಲಿ ಶ್ರೀ ಮಹಾ ಗಣಪತಿ ದೇವಾಲಯ ಮಂಟಪ ಸಾಗಿತ್ತು. ನಂತರದಲ್ಲಿ ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯ ದ ಗೌರಮ್ಮ ಗಣಪತಿ ಉತ್ಸವ ಸಮಿತಿಯ ತೆರು, ಕ್ರಮವಾಗಿ.ಶ್ರೀ ವಿಘ್ನೇಶ್ವರ ಸೇವಾ ಸಮಿತಿ ಅರಸು ನಗರ ,ಶ್ರೀ ವಿನಾಯಕ ಯುವಕ ಭಕ್ತ ಮಂಡಳಿ ಶ್ರೀ ಅಂಗಾಳ ಪರಮೇಶ್ವರಿ ದೇವಾಲಯ ತೆಲುಗರ ಬೀದಿ, ಶ್ರೀ ವಿಜಯ ವಿನಾಯಕ ಉತ್ಸವ ಸಮಿತಿ ದಖ್ಖನಿ ಮೊಹಲ್ಲಾ, ನೇತಾಜಿ ಉತ್ಸವ ಸಮಿತಿ ನೆಹರು ನಗರ, ಶ್ರೀ ಕಾವೇರಿ ಗಣೇಶೋತ್ಸವ ಸಮಿತಿ ಮೂರ್ನಾಡು ರಸ್ತೆ, ಶ್ರೀ ಮಹಾ ಗಣಪತಿ ಸೇವಾ ಸಮಿತಿ ಗಣಪತಿ ಬೀದಿ, ಶ್ರೀ ವಿನಾಯಕ ಸೇವಾ ಸಮಿತಿ ಪಂಜರ್ ಪೇಟೆ, ಜಲಧರ್ಶಿನಿ, ಶ್ರೀ ಗಣಪತಿ ಸೇವಾ ಸಮಿತಿ ಆಂಜನೇಯ ಸ್ವಾಮಿ ದೇವಾಲಯ ಚತ್ರಕೆರೆ, ಶ್ರೀ ವಿಘ್ನೇಶ್ವರ ಸೇವಾ ಸಮಿತಿ ಕುಂದ ಕುಕ್ಲೂರು, ಶ್ರೀ ಸರ್ವ ಸಿದ್ದಿ ವಿನಾಯಕ ಉತ್ಸವ ಸಮಿತಿ ಸುಂಕದ ಕಟ್ಟೆ, ಕಣ್ಮಣಿ ವಿನಾಯಕ ಸೇವಾ ಸಮಿತಿ ಮಲೆತಿರಿಕೆ ಬೆಟ್ಟ, ಶ್ರೀ ಗಣಪತಿ ಸೇವಾ ಸಮಿತಿ ಗಾಂಧಿ ನಗರ, ಶ್ರೀ ದೊಡ್ಡಮ್ಮ ಚಿಕ್ಕಮ್ಮ ತಾಯಿ ವಿನಾಯಕ ಸೇವ ಸಮಿತಿ ಹರಿಕೆರಿ, ಸುಣ್ಣದ ಬೀದಿ, ಶ್ರೀ ವಿಘ್ನೇಶ್ವರ ಸೇವಾ ಸಮಿತಿ ಕೆಂಕೇರಮ್ಮ ದೇವಾಲಯ ಕೆ. ಬೋಯಿಕೇರಿ, ಶ್ರೀ ವಿಶ್ವ ವಿನಾಯಕ ಉತ್ಸವ ಸಮಿತಿ ಮೀನುಪೇಟೆ, ಗೌರಿಕೆರೆ ವಿನಾಯಕ ಸೇವಾ ಸಮಿತಿ ಗೌರಿಕೆರೆ, ಶ್ರೀ ವಿಘ್ನೇಶ್ವರ ಸೇವಾ ಸಂಘ, ಪೌರ ಸೇವಾ ನೌಕರರ ಸಂಘ ಪುರಸಭೆ, ಶ್ರೀ ವರದ ವಿನಾಯಕ ಸೇವಾ ಸಮಿತಿ ಅಯ್ಯಪ್ಪ ಬೆಟ್ಟ, ಶ್ರೀ ವಿನಾಯಕ ಯುವ ಸಮಿತಿ ಶಿವಕೇರಿ ಮತ್ತು ಶ್ರೀ ಬಾಲ ಆಂಜನೇಯ ವಿನಾಯಕ ಉತ್ಸವ ಸಮಿತಿ ಅಪ್ಪಯ್ಯ ಸ್ವಾಮಿ ರಸ್ತೆ ಒಟ್ಟು 22 ಉತ್ಸವ ಸಮಿತಿಗಳ ಮಂಟಪಗಳು ಸರತಿಯ ಸಾಲಿನಲ್ಲಿ ಶೋಭಯಾತ್ರೆಯಲ್ಲಿ ಸಾಗಿದವು.

ಮೆರಗು ನೀಡಿದ ಕಲಾಕೃತಿಗಳು:ವಿದ್ಯುತ್ ಅಲಂಕೃತ ಮಂಟಪದೊಂದಿಗೆ ಸಮಿತಿಗಳು ಕಲಾಕೃತಿಗಳಿಗೆ ಅವಕಾಶ ಕಲ್ಪಿಸಿದ್ದರು. ಮಹಾ ಗಣಪತಿ ಸಮಿತಿ ಗಣಪತಿ ಬೀದಿ ಸಮಿತಿಯು ಚಾಮುಂಡೇಶ್ವರಿ ಯ ಸ್ಥಬ್ದ ಕಲಾಕೃತಿ, ವಿನಾಯಕ ಯುವಕ ಭಕ್ತ ಮಂಡಳಿ, ಚಂದ್ರಯಾನ ದಲ್ಲಿ ಶಿವ, ಕೇರಳದ ತ್ರಿಶೂರ್ ಪೂರಂ ನ ಚಲನವಲನ ಉಳ್ಳ ಸ್ಥಬ್ದ ಕಲಾಕೃತಿ, ಬಾಲ ಆಂಜನೇಯ ದೇವಾಲಯ ಸಮಿತಿಯಿಂದ ಬೃಹತ್ ಮತ್ತು ಚಲನವಲನ ದ ಗಣಪತಿಯ ಸ್ಥಬ್ದ ಕಲಾಕೃತಿಗಳು ಉತ್ಸವ ಮೂರ್ತಿಗಳಿಗೆ ಸಾತ್ ನೀಡಿದವು.ಸಾಂಸ್ಕೃತಿಕ ಕಲಾ ತಂಡ:ಕಲ್ಡಕ್ಕ ದ ಪುತ್ತಳಿ ಗೊಂಬೆ, ಕೀಲು ಕುದುರೆ, ಕೊಡಗಿನ ಸಂಪ್ರದಾಯಕ ಓಲಗ, ಪಂಚ ವಾದ್ಯ , ನಾಸೀಕ್ ಬ್ಯಾಂಡ್‌, ಶೋಭಯಾತ್ರೆಗೆ ಮೆರಗು ನೀಡಿದವು,ಡಿ.ಜೆ. ಸಂಗೀತಕ್ಕೆ ಮಣೆ ಹಾಕಿದ ಸಮಿತಿ:ಹಲವು ಸಮಿತಿಗಳ ಶೋಭಾಯಾತ್ರೆಯಲ್ಲಿ ಡಿ.ಜೆ. ಸಂಗೀತ ಕಂಡುಬಂತು.ಬಂದೋಬಸ್ತ್ ಕಲ್ಪಿಸಿದ ಪೊಲೀಸ್ ಇಲಾಖೆ:ಪೊಲೀಸ್ ಇಲಾಖೆಯು ಗಣೇಶೋತ್ಸವ ಕ್ಕೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತು ಕಲ್ಪಿಸಿತ್ತು. ವಿರಾಜಪೇಟೆ ತಾಲೂಕಿನ ಗಡಿ ಭಾಗದವಾದ ಮಾಕೂಟ್ಟ ದಲ್ಲಿ ಎಲ್ಲಾ ವಾಹನಗಳ ತಪಾಸಣೆ, ನಗರದಲ್ಲಿ 35 ಸಿ.ಸಿ. ಕ್ಯಾಮರಾ ಅಳವಡಿಸಲಾಗಿತ್ತು. ಕೆ.ಎಸ್,ಅರ್,ಪಿ.ತುಕಡಿ ,ಡಿ.ಸಿ.ಬಿ , ಶಸ್ತ್ರಾಸ್ತ್ರ ಮೀಸಲು ಪಡೆ, ಆಗ್ನಿ ಶಾಮಕ ದಳ, ಜಿಲ್ಲಾ ಮಿಸಲು ತುಕಡಿ, ಜಿಲ್ಲೆ ಸೇರಿದಂತೆ ಹಾಸನ ದ.ಕ. ಜಿಲ್ಲೆಯ ಹೆಚ್ಚುವರಿ ಪೊಲೀಸ್ ಸಿಬ್ಬಂದಿ, ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳು, ವಿರಾಜಪೇಟೆ ಉಪ ವಿಭಾಗದ ಡಿ.ವೈಎಸ್ಪಿ,ವಿವಿಧ ಠಾಣೆಯ ಪಿ.ಎಸ್. ಐ ಗಳು ಕಾರ್ಯನಿರತರಾಗಿದ್ದರು.ಭಾನುವಾರ ಪ್ರಾತಃ:ಕಾಲ ಇತಿಹಾಸ ಪ್ರಸಿದ್ದ ಗೌರಿಕೆರೆಯಲ್ಲಿ ಮೊದಲಿಗೆ ಶ್ರೀ ಬಸವೇಶ್ವರ ದೇವಾಲಯ ದ ಪ್ರದೇಶ ಗೌರಮ್ಮ ಉತ್ಸವ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು, ಬಳಿಕ ಶ್ರೀ ಮಹಾ ಗಣಪತಿ ದೇವಾಲಯ ಉತ್ಸವ ಮೂರ್ತಿ ನಂತರದಲ್ಲಿ ಸರತಿಯ ಸಾಲಿನಲ್ಲಿ ಬೆಳಗ್ಗೆ 9 ರ ವರೆಗೆ ಉತ್ಸವ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು.