ವಿರೂಪಾಕ್ಷರೆಡ್ಡಿ ಸಾಧನೆ ಬಹುದೊಡ್ಡದು: ಹುಸೇನದಾಸ

| Published : Sep 16 2024, 01:46 AM IST

ಸಾರಾಂಶ

ನಾಡು ಸೇರಿದಂತೆ ಹೊರ ರಾಜ್ಯದಲ್ಲಿಯೂ ದಾಸ ಸಾಹಿತ್ಯವನ್ನು ಬೆಳೆಸಿದ ಕೀರ್ತಿ ವಿರೂಪಾಕ್ಷರೆಡ್ಡಿ ಅವರದ್ದಾಗಿದೆ.

ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ

ಕನ್ನಡಪ್ರಭ ವಾರ್ತೆ ಕನಕಗಿರಿ

ನಾಡು ಸೇರಿದಂತೆ ಹೊರ ರಾಜ್ಯದಲ್ಲಿಯೂ ದಾಸ ಸಾಹಿತ್ಯವನ್ನು ಬೆಳೆಸಿದ ಕೀರ್ತಿ ವಿರೂಪಾಕ್ಷರೆಡ್ಡಿ ಅವರದ್ದಾಗಿದೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ಹುಸೇನದಾಸ ಹೇಳಿದರು.

ಪಟ್ಟಣದ ಬಸವಶ್ರೀ ಇಂಡೇನ್ ಗ್ರಾಮೀಣ ವಿತರಕ ಕೇಂದ್ರ ಕಚೇರಿಯಲ್ಲಿ ಹೇಮ-ವೇಮ ರೆಡ್ಡಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಧಕನಲ್ಲದವರು ಸಾಧಕನೆಂದು ಹೆಸರೇಳಿಕೊಂಡು ಹೊಟ್ಟೆ ತುಂಬಿಸಿಕೊಳ್ಳುವ ಸಂದರ್ಭದಲ್ಲಿ ಸನ್ಮಾನ, ಹಾರ ತೂರಾಯಿಗಳ ಆಸೆಯಿಲ್ಲದೆ ೫೦ ವರ್ಷಕ್ಕೂ ಹೆಚ್ಚು ಕಾಲ ಹಾರ್ಮೋನಿಯಂ ಜತೆಗೆ ಸಂಗೀತ ಸೇವೆ ಮಾಡಿರುವ ವಿರೂಪಾಕ್ಷರೆಡ್ಡಿ ಅವರ ಕಲೆ ನಿಜಕ್ಕೂ ಅವಿಸ್ಮರಣೀಯ. ಪ್ರಸ್ತುತ ದಿನಮಾನಗಳಲ್ಲಿ ಇಂತಹ ಪ್ರಾಮಾಣಿಕ ಮತ್ತು ಭಕ್ತಿಮಾರ್ಗದಲ್ಲಿ ಸಾಧನೆ ಮಾಡಿರುವ ಅಪರೂಪ ಕಲಾವಿದರು ಇವರಾಗಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂತಹ ಸಾಧಕರನ್ನು ಗುರುತಿಸಿ ಕಲಾಶ್ರೀ ಪ್ರಶಸ್ತಿ ನೀಡುತ್ತಿರುವುದು ನಿಜಕ್ಕೂ ಪ್ರಶಂಶನೀಯ ಎಂದರು.

ಹೇಮ-ವೇಮ ಟ್ರಸ್ಟ್ ಅಧ್ಯಕ್ಷ ಪುರುಷೋತ್ತಮರೆಡ್ಡಿ ಮಾದಿನಾಳ ಮಾತನಾಡಿ, ಕೃಷಿಯ ಜತೆಗೆ ಭಜನೆ ಕಲಿತು ದಾಸ, ಶರಣ ಸಾಹಿತ್ಯವನ್ನು ಬೆಳೆಸಿದ ವಿರೂಪಾಕ್ಷರೆಡ್ಡಿ ಕಾರ್ಯ ಶ್ಲಾಘನೀಯ. ಇಂತಹ ಕಲಾವಿದರ ಕಲೆಯನ್ನು ಮೆಚ್ಚಿ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಅಭಿನಂದನೀಯ ಎಂದರು.

ಪಟ್ಟಣದ ರಾಘವೇಂದ್ರ ಭಜನಾ ಸಂಘ ಹಾಗೂ ಕನಕಗಿರಿ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ವಿರೂಪಾಕ್ಷರೆಡ್ಡಿ ಓಣಿಮನಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯ ಹುಸೇನದಾಸ ಹಾಗೂ ಮುಖ್ಯಮಂತ್ರಿಗಳ ಪದಕ ಪ್ರಶಸ್ತಿ ಪುರಷ್ಕೃತ ಈರಪ್ಪ ಹಾದಿಮನಿ ಅವರನ್ನು ಸನ್ಮಾನಿಸಲಾಯಿತು.

ಪ್ರಮುಖರಾದ ಬಿ.ವಿ. ಜೋಶಿ, ಪಶುಪತಿ ಪಾಟೀಲ್, ಕೀರ್ತಿ ಸೋನಿ, ಅಶೋಕ ಸಜ್ಜನ, ಪ್ರಕಾಶ ಹಾದಿಮನಿ, ಮಂಜುನಾಥರೆಡ್ಡಿ ಮಾದಿನಾಳ, ರವಿರೆಡ್ಡಿ ಮಾದಿನಾಳ, ಯಂಕಾರೆಡ್ಡಿ ಕೆರಿ, ನಾರಾಯಣರೆಡ್ಡಿ, ಚಂದ್ರಹಾಸರೆಡ್ಡಿ ಅಳ್ಳಳ್ಳಿ, ಭೀಮರೆಡ್ಡಿ ಓಣಿಮನಿ, ಗುರುನಾಥರೆಡ್ಡಿ, ರಾಜಶೇಖರರೆಡ್ಡಿ ಮಾದಿನಾಳ, ಪಂಪಾರೆಡ್ಡಿ ಗಚ್ಚಿನಮನಿ, ಮಂಜುನಾಥ ಕೊರೆಡ್ಡಿ, ರಂಗಾರೆಡ್ಡಿ ಬೊರೆಡ್ಡಿ, ಪಂಪಾರೆಡ್ಡಿ ಮಾದಿನಾಳ, ಶಿವರೆಡ್ಡಿ ಮಣ್ಣೂರು, ಹನುಮಂತರೆಡ್ಡಿ ಮಹಲಿನಮನಿ, ಸಂತೋಷ ಸೇರಿದಂತೆ ಇತರರು ಇದ್ದರು.