ಗಣಪತಿ ವಿತರಿಸಿ ಗೌರಿ ಗಣೇಶ ಹಬ್ಬದ ಶುಭಾಶಯ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಶ್ರೀರಾಂಪುರದ ಮೂಕಾಂಬಿಕಾ ಸಮೃದ್ಧಿ ಬಡಾವಣೆಯಲ್ಲಿ 5ನೇ ವರ್ಷದ ಗಣೇಶೋತ್ಸವ ಅಂಗವಾಗಿ ರಂಗೋಲಿ ಸ್ಪರ್ಧೆ ಹಾಗೂ ಮಕ್ಕಳಿಗೆ ವಿವಿಧ ಕ್ರೀಡಾಕೂಟ ಆಯೋಜಿಸಿತ್ತು.ಮಹಿಳೆಯರಿಗೆ ಚುಕ್ಕಿ ರಂಗೋಲಿ ಸ್ಪರ್ಧೆ, 1ರಿಂದ 5 ವರ್ಷದ ಮಕ್ಕಳಿಗೆ ಚೆಂಡಿನೊಂದಿಗೆ ಆಟ ಹಾಗೂ ಹಿಟ್ಟು ಕಲೆಸುವ ಆಟ, 5 ರಿಂದ 10 ವರ್ಷದ ಮಕ್ಕಳಿಗೆ ಬಟ್ಟೆ ಪಿನ್ ಜೋಡಿಸುವ ಆಟ ಮತ್ತು ಮೆಮೊರಿ ಟೆಸ್ಟ್, 10ರಿಂದ 15 ವರ್ಷದ ಮಕ್ಕಳಿಗೆ ಪಿರಮಿಡ್ ಜೋಡಿಸುವುದು ಹಾಗೂ ವರ್ಡ್ ಬಿಲ್ಡಿಂಗ್ ಸೇರಿದಂತೆ ವಿವಿಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಬಡಾವಣೆಯ ನಿವಾಸಿಗಳು ಹಾಗೂ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.
ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿ ಜಯಶ್ರೀ ಶಿವರಾಂ ಹಾಗೂ ಸಾಹಿತಿ ಗಾಯತ್ರಿ ಸುಂದರೇಶ್ ಅವರು ತೀರ್ಪುಗಾರರಾಗಿ ಭಾಗವಹಿಸಿದ್ದರು.ಈ ವೇಳೆ ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ವಿಭಾಗದ ಪುನೀತ್, ವಿಶ್ವ ಹಿಂದೂ ಪರಿಷತ್ ವತಿಯಿಂದ ಬಡಾವಣೆಯ ನಿವಾಸಿಗಳಿಗೆ ಗಣಪತಿ ವಿತರಿಸಿ ಗೌರಿ ಗಣೇಶ ಹಬ್ಬದ ಶುಭಾಶಯ ಕೋರಲಾಯಿತು.
ಮೂಕಾಂಬಿಕಾ ಸಮೃದ್ಧಿ ಬಡಾವಣೆ ನಿವಾಸಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ.ಆರ್. ಗಣೇಶ್, ಗಣೇಶೋತ್ಸವ ಅಧ್ಯಕ್ಷ ರಾಮಕೃಷ್ಣ, ಕಾರ್ಯದರ್ಶಿ ನಾಗಭೂಷಣಾಚಾರಿ, ಮಂಜುನಾಥ್, ಮೋಹನ್, ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ವಿಭಾಗದ ಅಧ್ಯಕ್ಷ ಪುನೀತ್ ಜಿ ಕೂಡ್ಲೂರು ಮೊದಲಾದವರು ಇದ್ದರು.