ವಿಶ್ವ ಹಿಂದೂ ಪರಿಷತ್‌ ವಿಶ್ವದ ಹಿಂದೂಗಳ ಧ್ವನಿ, ಪ್ರತಿನಿಧಿ: ಪಡುವೆಟ್ನಾಯ

| Published : Sep 02 2024, 02:00 AM IST

ವಿಶ್ವ ಹಿಂದೂ ಪರಿಷತ್‌ ವಿಶ್ವದ ಹಿಂದೂಗಳ ಧ್ವನಿ, ಪ್ರತಿನಿಧಿ: ಪಡುವೆಟ್ನಾಯ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವ ಹಿಂದೂ ಪರಿಷತ್‌ ಬೆಳ್ತಂಗಡಿ ಪ್ರಖಂಡ ವತಿಯಿಂದ ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನ ಹಾಗೂ ಷಷ್ಠಿಪೂರ್ತಿ ಸಮಾರೋಪ ಸಂಭ್ರಮದ ಅಂಗವಾಗಿ ಬೃಹತ್ ಹಿಂದೂ ಸಮಾವೇಶ ಹಾಗೂ ಬೃಹತ್ ಶೋಭಾಯಾತ್ರೆ ಉಜಿರೆಯಲ್ಲಿ ಜರುಗಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ತ್ಯಾಗ, ಬಲಿದಾನ, ಪ್ರತಿಭಟನೆ, ಹೋರಾಟಗಳ ಮೂಲಕ ಬೆಳೆದ ವಿಶ್ವ ಹಿಂದೂ ಪರಿಷತ್ ವಿಶ್ವದ ಹಿಂದೂಗಳ ಧ್ವನಿ ಹಾಗೂ ಪ್ರತಿನಿಧಿಯಾಗಿದೆ. ಹಿರಿಯರ ಶ್ರಮದ ಫಲ ಸಂಘಟನೆಯ ಬೆಳವಣಿಗೆಗೆ ಕಾರಣ. ಇದನ್ನು ತಿಳಿದು ಶಕ್ತಿ, ಸಾಮರ್ಥ್ಯ ಇನ್ನಷ್ಟು ಬಲಗೊಂಡಲ್ಲಿ ರಾಷ್ಟ್ರವು ಬಲಿಷ್ಠವಾಗುತ್ತದೆ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಹೇಳಿದರು.

ಭಾನುವಾರ ವಿಹಿಂಪ ಬೆಳ್ತಂಗಡಿ ಪ್ರಖಂಡ ವತಿಯಿಂದ ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ರಥಬೀದಿಯಲ್ಲಿ ಜರುಗಿದ ವಿಶ್ವ ಹಿಂದೂ ಪರಿಷತ್ ಸ್ಥಾಪನ ದಿನ ಹಾಗೂ ಷಷ್ಠಿ ಪೂರ್ತಿ ಸಮಾರೋಪ ಸಂಭ್ರಮ, ಬೃಹತ್ ಹಿಂದೂ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.ವಿಹಿಂಪ ಮಂಗಳೂರು ವಿಭಾಗದ ವಿಭಾಗ ಕಾರ್ಯದರ್ಶಿ ದೇವಿ ಪ್ರಸಾದ್ ಶೆಟ್ಟಿ ದಿಕ್ಸೂಚಿ ಭಾಷಣ ನೆರವೇರಿಸಿ, ಹಿಂದೂ ಸಮಾಜದ ಮೇಲೆ ರಾಜಕೀಯ, ಸಾಮಾಜಿಕ ದಾಳಿಯನ್ನು ಮೆಟ್ಟಿ ನಿಂತ ನಮ್ಮ ಹಿರಿಯರು ಸಮಾಜವನ್ನು ಕಟ್ಟಿದರು. ಸಮಾಜದ ಆಂತರಿಕ ಸವಾಲುಗಳ ವಿರುದ್ಧ ನಾವೆಲ್ಲ ಒಂದೇ ಎಂಬ ಭಾವನೆ ಮೂಡಿದೆ ಎಂದರು.ಸಮಾರಂಭ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದ ಉತ್ಸವ ಸಮಿತಿಯ ಅಧ್ಯಕ್ಷ ಡಾ.ಎಂ.ಎ. ದಯಾಕರ ಮಾತನಾಡಿ ಹಿಂದೂ ಧರ್ಮದ ಬಲಿಷ್ಠ ಪುನರುತ್ಥಾನಕ್ಕೆ ಆಳುವವರಿಗೆ ಬಲವಾದ ಸಂದೇಶ ನೀಡಬೇಕು ಎಂದರು.ವಿಹಿಂಪ ಪುತ್ತೂರು ಜಿಲ್ಲೆಯ ಕಾರ್ಯದರ್ಶಿ ನವೀನ್ ನೆರಿಯ, ಬೆನಕ ಹೆಲ್ತ್ ಸೆಂಟರ್ ಮುಖ್ಯಸ್ಥೆ ಡಾ. ಭಾರತಿ ಜಿ.ಕೆ., ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಆಡಳಿತ ನಿರ್ದೇಶಕ ಸುಮಂತ್ ಕುಮಾರ್ ಜೈನ್, ಉದ್ಯಮಿ ನಾರಾಯಣ ಗೌಡ ಕೊಳಂಬೆ ಮತ್ತಿತರರಿದ್ದರು.ಶಾಸಕ ಹರೀಶ್ ಪೂಂಜ, ವಿಧಾನಪರಿಷತ್‌ ಸದಸ್ಯ ಪ್ರತಾಪ ಸಿಂಹ ನಾಯಕ್, ವಿವಿಧ ಹಿಂದೂ ಸಮಾಜದ ಸಂಘಟನೆಗಳ ಮುಖ್ಯಸ್ಥರು ಭಾಗವಹಿಸಿದ್ದರು.60 ಮಂದಿ ಹಿರಿಯರನ್ನು ಗೌರವಿಸಲಾಯಿತು. ದಿನೇಶ್ ಚಾರ್ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪತ್ ಸುವರ್ಣ ಸ್ವಾಗತಿಸಿದರು. ಮೋಹನ್ ಬೆಳ್ತಂಗಡಿ ವಂದಿಸಿದರು.

ಬಜರಂಗದಳ ಸಂಯೋಜಕ ಸಂತೋಷ್ ಅತ್ತಾಜೆ, ಸಹ ಸಂಯೋಜಕ ಸತೀಶ್ ಮರಕ್ಕಡ, ಸತ್ಸಂಗ ಪ್ರಮುಖ್ ಅಶೋಕ್ ಕಳೆಂಜ, ಸೇವಾ ಪ್ರಮುಖ್ ವಿನೋದ್‌ ಮದ್ದಡ್ಕ, ವಿದ್ಯಾರ್ಥಿ ಪ್ರಮುಖ್ ಅಖಿಲ್ ರೆಖ್ಯ, ವಿಹಿಂಪ ಉಪಾಧ್ಯಕ್ಷ ಸತೀಶ್‌ ನೆರಿಯ, ಗೋರಕ್ಷಾ ಪ್ರಮುಖ್‌ ವಿಹಿಂಪ ರಮೇಶ್ ಧರ್ಮಸ್ಥಳ, ಗೋರಕ್ಷಕ್ ಪ್ರಮುಖ್ ಬಜರಂಗದಳ ಅನಂತ್ ಉಜಿರೆ, ಸಹ ಸಂಯೋಜಕ್ ಪ್ರಶಾಂತ್ ಕೊಕ್ಕಡ, ಪ್ರಚಾರ ಮತ್ತು ಪ್ರಸಾರ ನಾಗೇಶ್ ಕಲ್ಮಂಜ, ಸುರಕ್ಷ ಪ್ರಮುಖ ರಾಜೇಶ್ ನಿಡ್ಲೆ, ಮಾತೃಶಕ್ತಿ ಪ್ರಮುಖ್‌ ವಿದ್ಯಾ, ದುರ್ಗಾವಾಹಿನಿ ಸಂಯೋಜಕಿ ಶ್ವೇತಾ ಬೆಳಾಲ್ ಸಹಕರಿಸಿದರು. ಶಿವಶಂಖ‌ರ್ ಗೇರುಕಟ್ಟೆ ವಂದೇಮಾತರಂ ಹಾಡಿದರು.

ಶೋಭಾಯಾತ್ರೆ: ವಿಶ್ವ ಹಿಂದೂ ಪರಿಷತ್‌ ಬೆಳ್ತಂಗಡಿ ಪ್ರಖಂಡ ವತಿಯಿಂದ ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನ ಹಾಗೂ ಷಷ್ಠಿಪೂರ್ತಿ ಸಮಾರೋಪ ಸಂಭ್ರಮದ ಅಂಗವಾಗಿ ಬೃಹತ್ ಹಿಂದೂ ಸಮಾವೇಶ ಹಾಗೂ ಬೃಹತ್ ಶೋಭಾಯಾತ್ರೆ ಉಜಿರೆಯಲ್ಲಿ ಜರುಗಿತು.

ಉಜಿರೆ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಿಂದ ಪ್ರಾರಂಭಗೊಂಡ ಬೃಹತ್ ಶೋಭಾಯಾತ್ರೆಗೆ ಹಿರಿಯರಾದ ಶೇಷಗಿರಿ ಶೆಣೈ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಎಸ್‌ಡಿಎಂ ಎಜ್ಯುಕೇಶನಲ್ ಸೊಸೈಟಿ ಕಾರ್ಯದರ್ಶಿ ಪ್ರೊ. ಸತೀಶ್ಚಂದ್ರ ಸುರ್ಯಗುತ್ತು, ಆರ್‌ಎಸ್‌ಎಸ್‌ ಸಂಘ ಚಾಲಕ ಗಣೇಶ್ ಭಟ್‌ ಕಾಂತಾಜೆ, ಉದ್ಯಮಿ ದಯಾಕ‌ರ್ ಪಂಚಶ್ರೀ ಉಜಿರ ಉಪಸ್ಥಿತರಿದ್ದರು.