ಸಾರಾಂಶ
ಕನ್ನಡಪ್ರಭ ವಾರ್ತೆ ಬೀರೂರು
ಪ್ರಪಂಚದ ಸುಂದರ ವಾಸ್ತುಶಿಲ್ಪಗಳ ಕಲಾ ಸೌಂದರ್ಯಕ್ಕೆ ಶಿಲ್ಪಿಗಳು ಆರಾಧಿಸುವ ವಿಶ್ವಕರ್ಮರು ಕಾರಣ ಎಂದು ಪುರಸಭೆ ಮಾಜಿ ಅಧ್ಯಕ್ಷ, ಸದಸ್ಯ ಎಂ.ಪಿ.ಸುದರ್ಶನ್ ಹೇಳಿದರು.ಪುರಸಭೆ ಸಭಾಂಗಣದಲ್ಲಿ ಬುಧವಾರ ಪುರಸಭೆ ಮತ್ತು ವಿಶ್ವಕರ್ಮ ಸಮುದಾಯದ ವತಿಯಿಂದ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ವಿಶ್ವಕರ್ಮ ಎಂದರೆ ವಿಶ್ವದ ಸೃಷ್ಠಿಕರ್ತ ಎಂದರ್ಥ. ಭಗವಾನ್ ಶ್ರೀಕೃಷ್ಣನ ದ್ವಾರಕೆ, ಪಾಂಡವರ ಇಂದ್ರಪ್ರಸ್ಥ ಸೇರಿದಂತೆ ವಿಶ್ವ ಪ್ರಸಿದ್ದ ದೇವಾಲಯಗಳಲ್ಲಿರುವ ವಾಸ್ತು ಶಿಲ್ಪ ಗಳನ್ನು ವಿಶ್ವಕರ್ಮರು ನಿರ್ಮಿಸಿದ್ದು ಪ್ರಪಂಚದ ಮೊಟ್ಟ ಮೊದಲ ವಾಸ್ತು ಶಿಲ್ಪ ಕಾರರಾಗಿದ್ದಾರೆ ಎಂದರು.ವಿಶ್ವಕರ್ಮ ಜಯಂತಿ ಆಚರಣೆ ಆ ಸಮುದಾಯಕ್ಕೆ ಮಾತ್ರ ಸೀಮಿತವಲ್ಲ. ಸಮಾಜದ ಎಲ್ಲರೂ ಭಾಗವಹಿಸಿ ಆಚರಣೆ ಮಾಡಿದಾಗ ಎಲ್ಲಾ ಸಮುದಾಯಗಳ ಬಾಂಧವ್ಯ ಗಟ್ಟಿಯಾಗುತ್ತದೆ ವಿಶ್ವಕರ್ಮರ ಜತೆಯಲ್ಲಿ ಬದುಕದ ಮನುಷ್ಯ ಜಗತ್ತಿನಲ್ಲಿ ಇಲ್ಲ. ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ ವಿಶ್ವಕರ್ಮರನ್ನು ನೆನಪಿಸುವ ಕಾರ್ಯ ಜಯಂತಿ ಮೂಲಕ ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಸೇವೆ ಸಲ್ಲಿಸಿದ ಹಿರಿಯರನ್ನು ಗೌರವಿಸುವ ಮೂಲಕ ಆಚರಣೆ ನಡೆಸಿದರೆ ಜಯಂತಿ ಅರ್ಥಪೂರ್ಣವಾಗಿರುತ್ತದೆ ಎಂದರು.
ವಿಶ್ವಕರ್ಮ ಸಮಾಜದ ಅಧ್ಯಕ್ಷ ವಿಶ್ವೇಶ್ವರಾಚಾರ್ ಮಾತನಾಡಿ, ವಿಶ್ವಕರ್ಮ ದೇವಶಿಲ್ಪಿ ಎಂದು ಕೆಲವು ವಿದ್ವಾಂಸರು ಹೇಳಿದರೆ, ಜಗತ್ತಿನ ಸರ್ವಸೃಷ್ಠಿಗೂ ವಿಶ್ವಕರ್ಮ ಕರ್ತೃ ಎಂದು ಅನೇಕ ವಿದ್ವಾಂಸರು ಧೃಡಪಡಿಸಿದ್ದಾರೆ. ಪುರಾಣದಲ್ಲಿ ಪುಷ್ಪಕವಿಮಾನ, ಧ್ವಾರಕೆಯ ನಿರ್ಮಾಣದಿಂದ ಹಿಡಿದು ವಿಶ್ವಕರ್ಮರು ಅನೇಕ ನಿರ್ಮಾಣಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.ವಿಶ್ವಕರ್ಮ ಸಮಾಜದ ಮೂಲ ಕಸುಬುಗಳನ್ನು ಉಳಿಸಿಕೊಂಡು ಹೋಗುವ ಕೆಲಸ ಇಂದು ಆಗಬೇಕಿದೆ. ಹಿಂದಿನ ಕಾಲದ ವಸ್ತುಗಳ ಕಲಾತ್ಮಕತೆಯನ್ನು ಉಳಿಸಿಕೊಂಡು ಹೋಗುವ ಜತೆಗೆ, ತಂತ್ರಜ್ಞಾನ ಬಳಕೆಯ ಸಂದÀರ್ಬದಲ್ಲೂ ಹಿಂದಿನ ವಿಶಿಷ್ಠತೆ ಗಳನ್ನು ಉಳಿಸಬೇಕು ಎಂದು ಹೇಳಿದರು.
ಪುರಸಭೆ ಸದಸ್ಯ ಬಿ.ಆರ್.ಮೋಹನ್ ಕುಮಾರ್ ಮಾತನಾಡಿ, ವಿಶ್ವಕರ್ಮರು ವಿಶ್ವದ ಶ್ರೇಷ್ಠ ವಾಸ್ತುಶಿಲ್ಪಿಗಳಾಗಿದ್ದು, ರೈತರ ನೇಗಿಲಿನಿಂದ ಹಿಡಿದು ಅರಮನೆಗಳ ನಿರ್ಮಾಣದವರೆಗು ವಿಶ್ವ ಕರ್ಮರ ಕೊಡುಗೆ ಸಾಕಷ್ಟಿದೆ.ಜಗತ್ತಿನೆಲ್ಲಡೆ ದೇವಾಲಯ , ಪ್ರಾರ್ಥನ ಮಂದಿರ ಗಳನ್ನು ವಿಶ್ವಕರ್ಮರು ನಿರ್ಮಿಸಿದ್ದಾರೆ. ವಿಶ್ವಕರ್ಮ ಸಮಾಜಕ್ಕೆ ತನ್ನದೆ ಆದ ಚಾರಿತ್ರಿಕ ಹಿನ್ನೆಲೆ ಇದೆ. ವೇದಗಳ ಕಾಲದಿಂದಲೂ ಸಮಾಜಕ್ಕೆ ಇವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ವಿಶ್ವಕರ್ಮ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು, ಅನೇಕತೆಯಲ್ಲಿ ಏಕತೆ ಹೊಮದಿರುವುದೇ ನಮ್ಮ ವೈಶಿಷ್ಟ್ಯ ಎಂದರು.ಬಿ.ಎಂ.ಮಲ್ಲಿಕಾರ್ಜುನ್ ಮಾತನಾಡಿ, ಸರ್ಕಾರದಿಂದ ಈ ಹಿಂದುಳಿದ ವಿಶ್ವಕರ್ಮ ಸಮಾಜಕ್ಕೆ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಮೀಸಲಾತಿ ದೊರೆತಾಗ ಮಾತ್ರ ಜನಾಂಗದ ಅಭಿವೃದ್ದಿಯಾಗುತ್ತದೆ, ರಾಜ್ಯದ ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಹರಿಸಿ ನ್ಯಾಯ ದೊರಕಿಸಿಕೊಡಬೇಕು ಎಂದರು
ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷಿö್ಮ ಮೋಹನ್, ಉಪಾಧ್ಯಕ್ಷ ಎನ್.ಎಂ.ನಾಗರಾಜ್, ಮುಖ್ಯಾಧಿಕಾರಿ ಜಿ.ಪ್ರಕಾಶ್, ಆರೋಹ್ಯ ನಿರೀಕ್ಷಕ ವೈ.ಎಂ.ಲಕ್ಷö್ಮಣ್, ವಿಶ್ವಕರ್ಮ ಸಮುದಾಯದ ಮುಖಂಡರುಗಳು ಮತ್ತು ಪುರಸಭಾ ಸಿಬ್ಬಂದಿ ಇದ್ದರು.