ಸಾರಾಂಶ
ಪ್ರತಿಯೊಬ್ಬ ಅಭ್ಯರ್ಥಿಗಳ ತಾಲೂಕಿನಲ್ಲಿ ನಡೆಯುವ ಕಾರ್ಯಕ್ರಮಗಳ ಮಾಹಿತಿ ಪಡೆದುಕೊಂಡು ಒಂದು ವೇಳೆ ದುರ್ಬಳಕೆ ಮಾಡಿಕೊಳ್ಳುವವರ ವಿರುದ್ದ ಕ್ರಮ ವಹಿಸಬೇಕು. ಜೊತೆಗೆ ಪ್ರತಿಯೊಂದಕ್ಕೂ ಮಾಹಿತಿ ನೀಡಬೇಕು ಎಂದು ಇಲ್ಲಿನ ಚುನವಣಾಧಿಕಾರಿಗಳು ಹಾಗೂ ಸಿಬ್ಬಂದಿಗೆ ಜಿಲ್ಲಾ ಲೆಕ್ಕ ವೀಕ್ಷಕರಾದ ರೋಹಿತ್ ಅಸುಂದಾನಿ ಹಾಗೂ ಪ್ರಿಯತಮ್ ಅಶೋಕ್ ಸಲಹೆ ಸೂಚನೆಗಳ ನೀಡಿದರು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಲೆಕ್ಕ ವೀಕ್ಷಕರಾದ ರೋಹಿತ್ ಅಸುಂದಾನಿ ಹಾಗೂ ಪ್ರಿಯತಮ್ ಅಶೋಕ್ ಅವರು ಶ್ರೀರಂಗಪಟ್ಟಣ ಸಹಾಯಕ ಚುನಾವಣಾ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಅಗತ್ಯ ಸಲಹೆ, ಸೂಚನೆ ನೀಡಿದರು.ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳು ಪರವಾನಿಗೆ ತೆಗೆದುಕೊಳ್ಳಲು ನಿಗಧಿ ಮಾಡಿರುವ ಖರ್ಚಿನ ಮಾಹಿತಿಗಳನ್ನು ಸಂಕ್ಷಿಪ್ತವಾಗಿ ಪಡೆದುಕೊಳ್ಳಬೇಕು. ಶ್ರೀರಂಗಪಟ್ಟಣದ ಚುನಾವಣಾ ಶಾಖೆಯಿಂದ ಪಡೆಯುವ ಪರವಾನಿಗೆಗಳ ಲೆಕ್ಕಗಳು, ಚುನಾವಣೆಗೆ ಬಳಸುವ ವಾಹನ ಬಳಕೆ ಅವುಗಳ ಲೆಕ್ಕ, ರ್‍ಯಾಲಿಗಳು, ಕಾರ್ಯಕ್ರಮಗಳ ಕುರಿತು ನಡೆಯು ಅಂದಾಜಿನ ಪಟ್ಟಿ ಜೊತೆಗೆ ಅವುಗಳ ಖರ್ಚಿನ ಲೆಕ್ಕಗಳನ್ನು ನೀಡಬೇಕು.
ಪ್ರತಿಯೊಬ್ಬ ಅಭ್ಯರ್ಥಿಗಳ ತಾಲೂಕಿನಲ್ಲಿ ನಡೆಯುವ ಕಾರ್ಯಕ್ರಮಗಳ ಮಾಹಿತಿ ಪಡೆದುಕೊಂಡು ಒಂದು ವೇಳೆ ದುರ್ಬಳಕೆ ಮಾಡಿಕೊಳ್ಳುವವರ ವಿರುದ್ದ ಕ್ರಮ ವಹಿಸಬೇಕು. ಜೊತೆಗೆ ಪ್ರತಿಯೊಂದಕ್ಕೂ ಮಾಹಿತಿ ನೀಡಬೇಕು ಎಂದು ಇಲ್ಲಿನ ಚುನವಣಾಧಿಕಾರಿಗಳು ಹಾಗೂ ಸಿಬ್ಬಂದಿಗೆ ಸಲಹೆ ಸೂಚನೆಗಳ ನೀಡಿದರು.ಸಹಾಯಕ ಚುನಾವಣಾಧಿಕಾರಿ ಆನಂದ್ ಕುಮಾರ್, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ಡಿವೈಎಸ್ಪಿ ಮುರುಳಿ, ಉಪ ತಹಸೀಲ್ದಾರ್ ನೇತ್ರಾವತಿ, ಕಂದಾಯ ಅಧಿಕಾರಿ ರೇವಣ್ಣ ಸೇರಿದಂತೆ ಇತರರು ಇದ್ದರು.ಎಂಟು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಕನ್ನಡಪ್ರಭ ವಾರ್ತೆ ಮಂಡ್ಯಮಂಡ್ಯ ಲೋಕಸಭಾ ಸಾರ್ವತ್ರಿಕ ಚುನಾವಣೆ 2024ಕ್ಕೆ ಸಂಬಂಧಿಸಿದಂತೆ ಒಟ್ಟು 27 ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದು, 8 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತವಾಗಿರುತ್ತವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಟಿ.ವಿ.ಅರುಣ್ ಕುಮಾರ್, ಎಂ.ಇಂದುಕುಮಾರ್, ಜಿ.ಕೃಷ್ಣ, ಚಿಕ್ಕಯ್ಯ, ಹೆಚ್.ನಾರಾಯಣ, ಎಲ್. ಡಿ. ನಂದೀಶ (02- ನಾಮಪತ್ರ ), ಶಂಭುಲಿಂಗೇಗೌಡ, ಟಿ.ಎನ್.ಸತೀಶ್ ಕುಮಾರ್ ಅವರ ನಾಮಪತ್ರ ತಿರಸ್ಕೃತವಾಗಿವೆ. ಕ್ರಮಬದ್ಧವಾಗಿ ನಾಮ ನಿರ್ದೇಶಿತರಾದ 19 ಉಮೇದುವಾರರ ಪಟ್ಟಿ ಇಂತಿದೆ.ಎಚ್.ಡಿ.ಕುಮಾರಸ್ವಾಮಿ- ಜನತಾದಳ (ಜಾತ್ಯತೀತ), ವೆಂಕಟರಮಣೇಗೌಡ - ಭಾರತೀಯ ರಾಷ್ಟೀಯ ಕಾಂಗ್ರೆಸ್, ಎಸ್.ಶಿವಶಂಕರ್- ಬಹುಜನ ಸಮಾಜ ಪಾರ್ಟಿ, ಕೆ.ಆರ್.ಚಂದ್ರಶೇಖರ- ಕರ್ನಾಟಕ ರಾಷ್ಟ್ರ ಸಮಿತಿ, ಬೂದಯ್ಯ - ಕರುನಾಡು ಪಾರ್ಟಿ, ಎಚ್.ಡಿ. ರೇವಣ್ಣ - ಪೂರ್ವಾಂಚಲ್ ಮಹಾ ಪಂಚಾಯತ್ ಪಾರ್ಟಿ, ಎಸ್.ಲೋಕೇಶ - ಉತ್ತಮ ಪ್ರಜಾಕೀಯ ಪಕ್ಷ, ಎಸ್.ಅರವಿಂದ್ - ಪಕ್ಷೇತರ, ಚನ್ನಮಾಯಿಗೌಡ - ಪಕ್ಷೇತರ, ಚಿಕ್ಕನಂಜಾಚಾರಿ - ಪಕ್ಷೇತರ, ಕೆ.ಚಂದನ್ ಗೌಡ - ಪಕ್ಷೇತರ, ಎನ್.ಬಸವರಾಜು - ಪಕ್ಷೇತರ, ಸಿ.ಟಿ.ಬೀರೇಶ್- ಪಕ್ಷೇತರ, ಯೋಗೇಶ್ - ಪಕ್ಷೇತರ, ಡಿ.ರಾಮಯ್ಯ - ಪಕ್ಷೇತರ, ಎನ್.ರಂಜಿತಾ - ಪಕ್ಷೇತರ, ಲೋಲ - ಪಕ್ಷೇತರ, ಶಿವನಂಜಪ್ಪ - ಪಕ್ಷೇತರ, ಕೆ. ಶಿವಾನಂದ - ಪಕ್ಷೇತರ ಒಟ್ಟು 19 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿರುತ್ತದೆ.