ಸಾರಾಂಶ
ಬಾಬೂಜಿ ಕೇಂದ್ರದಲ್ಲಿ ಕೃಷಿ ಸಚಿವರಾಗಿದ್ದಾಗ ಕಾಣಿಸಿಕೊಂಡಿದ್ದ ಬರಗಾಲದಿಂದಾಗಿ ಆಹಾರ ಕ್ಷಾಮ ಎದುರಾಗಿತ್ತು. ಆಗ ಅವರು ಕೃಷಿಯಲ್ಲಿ ಸುಧಾರಣೆ ತಂದು ಸಮಸ್ಯೆಯನ್ನು ನಿಭಾಯಿಸುವ ಮೂಲಕ ಹಸಿರು ಕ್ರಾಂತಿಯ ಹರಿಕಾರರೆನಿಸಿದರು ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಹೇಳಿದರು. ಯಾದಗಿರಿ ಜಿಲ್ಲಾಡಳಿತ ವತಿಯಿಂದ ಡಾ.ಜಗಜೀವನರಾಂ ಜಯಂತಿ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಯಾದಗಿರಿ
ದೇಶದ ಹಸಿರು ಕ್ರಾಂತಿಯ ಹರಿಕಾರ ಹಾಗೂ ಮಾಜಿ ಉಪ ಪ್ರಧಾನಮಂತ್ರಿಗಳಾಗಿದ್ದ ದಿ. ಡಾ. ಬಾಬು ಜಗಜೀವನರಾಂ ರೈತರ ಅಭಿವೃದ್ಧಿಗೆ ಪಣತೊಟ್ಟು ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆ ಇಂದಿಗೂ ಪ್ರಸ್ತುತ ಎಂದು ಜಿಲ್ಲಾಧಿಕಾರಿ ಡಾ. ಸುಶೀಲಾ ಅಭಿಪ್ರಾಯಪಟ್ಟರು.ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಪ್ರಯುಕ್ತ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಡಾ.ಬಾಬೂಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಸರಳ ಹಾಗೂ ಸಾಂಕೇತಿಕವಾಗಿ ಜಯಂತಿಯನ್ನು ಆಚರಿಸಿ ಅವರು ಮಾತನಾಡಿದರು.
ಬಾಬೂಜಿ ಕೇಂದ್ರದಲ್ಲಿ ಕೃಷಿ ಸಚಿವರಾಗಿದ್ದಾಗ ಕಾಣಿಸಿಕೊಂಡಿದ್ದ ಬರಗಾಲದಿಂದಾಗಿ ಆಹಾರ ಕ್ಷಾಮ ಎದುರಾಗಿತ್ತು. ಆಗ ಅವರು ಕೃಷಿಯಲ್ಲಿ ಸುಧಾರಣೆ ತಂದು ಸಮಸ್ಯೆಯನ್ನು ನಿಭಾಯಿಸುವ ಮೂಲಕ ಹಸಿರು ಕ್ರಾಂತಿಯ ಹರಿಕಾರರೆನಿಸಿದರು ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕು.ಸರೋಜಾ, ಸಹಾಯಕ ನಿರ್ದೇಶಕ ಸಂಗಮೇಶ ಪೂಜಾರಿ, ಮುಖಂಡರಾದ ದೇವಿಂದ್ರನಾಥ ಕೆ ನಾದ್, ಸ್ಯಾಮಸನ್ ಮ್ಯಾಳಿಕೇರಿ, ನಿಂಗಪ್ಪ ವಡ್ನಳ್ಳಿ, ನಿಂಗಪ್ಪ ಹತ್ತಿಕುಣಿ, ಸ್ವಾಮಿದೇವ ದಾಸನಕೇರಿ, ಮಲ್ಲಿಕಾರ್ಜುನ ಬೆಳಗೇರಿ, ಆಂಜನೇಯ ಬಬಲಾದ, ವಾರ್ಡನ್‌ಗಳಾದ ದೇವಿಂದ್ರಪ್ಪ, ಶ್ರೀಹರಿ ಘಂಟಿ, ಯಲ್ಲಾಲಿಂಗ ಬೆಮ್ಮಳ್ಳಿ ಸೇರಿದಂತೆ ಇನ್ನಿತರ ಇಲಾಖೆಯ ಅಧಿಕಾರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.