ಜಿಲ್ಲಾ ಆಸ್ಪತ್ರೆಗೆ ಸಂಸದ ಗೋವಿಂದ ಕಾರಜೋಳ ಭೇಟಿ

| Published : Sep 21 2024, 02:07 AM IST

ಸಾರಾಂಶ

ಸಂಸದ ಗೋವಿಂದ ಕಾರಜೋಳ ಶುಕ್ರವಾರ ಜಿಲ್ಲಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು. ಅಶುಚಿತ್ವ ಕಂಡು ತೀವ್ರ ಅಸಮಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗಸಂಸದ ಗೋವಿಂದ ಕಾರಜೋಳ ಶುಕ್ರವಾರ ಜಿಲ್ಲಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು. ಅಶುಚಿತ್ವ ಕಂಡು ತೀವ್ರ ಅಸಮಧಾನ ವ್ಯಕ್ತಪಡಿಸಿದರು.ಜಿಲ್ಲಾಸ್ಪತ್ರೆಯ ಪುರುಷ ಮತ್ತು ಮಹಿಳಾ ವಾರ್ಡ್, ಔಷದಿ ದಾಸ್ತಾನು, ರಕ್ಷ ಪರೀಕ್ಷೆ ಲ್ಯಾಬ್, ಆಪರೇಷನ್ ಥಿಯೇಟರ್ ಹಾಗೂ ಶೌಚಾಲಯ ಸೇರಿದಂತೆ ವಿವಿಧ ಕಡೆ ವೀಕ್ಷಣೆ ಮಾಡಿದರು. ರೋಗಿಗಳ ಜತೆ ಮಾತನಾಡಿ, ವೈದ್ಯರು ಚಿಕಿತ್ಸೆ ನೀಡುವ ಕುರಿತು ಮಾಹಿತಿ ಪಡೆದರು.ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಪ್ರಮಾಣದಲ್ಲಿ ಬಡವರು ಬರುತ್ತಾರೆ. ಅವರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡುವುದು ವೈದ್ಯರ ಕರ್ತವ್ಯ. ಸಾಧ್ಯವಾದಷ್ಟು ಔಷಧಿಗಳನ್ನು ಆಸ್ಪತ್ರೆಯಿಂದಲೇ ನೀಡುವ ಕಾರ್ಯವನ್ನು ಮಾಡಿ. ಹೊರಗಡೆ ಚೀಟಿ ಬರೆದು ಕೊಡುವುದು ಬೇಡ. ಚಿತ್ರದುರ್ಗ ಜಿಲ್ಲೆಯಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುವುದರಿಂದ ಅಪಘಾತಗಳ ಸಂಖ್ಯೆ ಜಾಸ್ತಿ ಇವೆ. ಹಾಗಾಗಿ ಸದಾ ಜಾಗರೂಕರಾಗಿರಬೇಕು ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರಳಿ, ಮಾಧುರಿ ಗೀರಿಶ್, ವಕ್ತಾರ ನಾಗರಾಜ್ ಬೇದ್ರೆ, ಜಿಲ್ಲಾಸ್ಪತ್ರೆ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.