ಸಾರಾಂಶ
ಪತ್ರಿಕೆಯ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು । ಎಪಿಎಂಸಿ ಮಾರುಕಟ್ಟೆಯ ಮಳಿಗೆಗಳನ್ನು ಮರು ಟೆಂಡರ್ ಕರೆಯುವ ಭರವಸೆ ನೀಡಿದ ಇಒ
ಎಚ್.ಎನ್. ನಾಗರಾಜು ಹೊಳವನಹಳ್ಳಿಕನ್ನಡಪ್ರಭ ವಾರ್ತೆ ಕೊರಟಗೆರೆ
ಹೊಳವನಹಳ್ಳಿ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯ ಅಂಗಡಿ ಮಳಿಗೆಗಳನ್ನು ನಿರ್ಮಾಣ ಮಾಡಿಕೊಟ್ಟರೂ ಗ್ರಾಪಂ ವತಿಯಿಂದ ಸರ್ಮಪಕ ಮೂಲಸೌಕರ್ಯ ನೀಡದೇ ಸೊರಗುತ್ತಿತ್ತು, ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಡಿ.೧೮ ರ ಸೋಮವಾರದಂದು ‘ವಾರದ ಸಂತೆ ನಿಂತು ವರ್ಷಗಳೇ ಕಳೆದರೂ ಸಂತೆ ಆರಂಭಿಸಿಲ್ಲ’ ಎಂಬ ಶೀರ್ಷಿಕೆ ಅಡಿ ಸುದ್ದಿ ಪ್ರಕಟಿಸಿತ್ತು. ಸುದ್ದಿ ಓದಿದ ನಂತರ ಎಚ್ಚೆತ್ತುಕೊಂಡ ತಾಪಂ ಇಒ ಅಪೂರ್ವ .ಸಿ. ಅನಂತರಾಮು ಸೋಮವಾರ ಸ್ಥಳಕ್ಕೆ ಭೇಟಿ ನೀಡಿದರು.ತಾಲೂಕಿನ ಹೊಳವನಹಳ್ಳಿ ಗ್ರಾಪಂಯಲ್ಲಿ ೨೦೧೬ ರಲ್ಲಿ ತುಮಕೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ೨ ಕೋಟಿ ೧೫ ಲಕ್ಷ ರು. ವೆಚ್ಚದಲ್ಲಿ ಸುಮಾರು ೭೦ ಕ್ಕೂ ಹೆಚ್ಚು ಅಂಗಡಿ ಮಳಿಗೆಗಳನ್ನು ನಿರ್ಮಿಸಿ ಗ್ರಾಪಂ ಅಭಿವೃದ್ಧಿಗಾಗಿ ಹಸ್ತಾಂತರಿಸಲಾಗಿತ್ತು. ಅದರೆ ಇಲ್ಲಿಗೆ ಬರುವ ಗ್ರಾಪಂ ಅಧಿಕಾರಿಗಳು ಹೊಳವನಹಳ್ಳಿ ಅಭಿವೃದ್ದಿ ಮಾಡದೇ ಸರ್ಕಾರದಿಂದ ಬರುವ ಹಣ ಖರ್ಚು ಮಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಗ್ರಾಪಂಯಿಂದ ನೀರು, ರಸ್ತೆ, ಶೌಚಾಲಯ, ಚರಂಡಿ ಸೇರಿದಂತೆ ಅನೇಕ ಮೂಲ ಸೌಕರ್ಯ ಮಾಡಿಕೊಟ್ಟಿದ್ದರೆ ಹೊಳವನಹಳ್ಳಿ ಗ್ರಾಮದ ದೊಡ್ಡ ವಹಿವಾಟು ನಡೆಸುವ ಜಾಗವಾಗುತ್ತಿತ್ತು. ಆದರೆ ಇಂದು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಅಂಗಡಿ ಮಳಿಗೆಗಳು ಟೆಂಡರ್ ಆಗಿದ್ದರೆ ಪ್ರತಿ ತಿಂಗಳು ೭೦ ಸಾವಿರಕ್ಕೂ ಅಧಿಕ ಹಣವು ಗ್ರಾಪಂಯ ಅಭಿವೃದ್ದಿಗೆ ಸಹಕಾರವಾಗುತ್ತಿತ್ತು ಎಂದು ಸಾರ್ವಜನಿಕರು ಇಒ ಮೇಡಮ್ ಅವರಿಗೆ ಮನವರಿಕೆ ಮಾಡಿದರು.ಗ್ರಾಮಸ್ಥ ಜಯರಾಜು ಮಾತನಾಡಿ, ಹೊಳವನಹಳ್ಳಿ ಗ್ರಾಮದ ಎಪಿಎಂಸಿ ಮಾರುಕಟ್ಟೆಯು ಅನೈತಿಕ ಚಟುವಟಿಕೆಗಳ ತಾಣವಾಗಿತ್ತು ಎಂದು ‘ಕನ್ನಡಪ್ರಭ’ ಪತ್ರಿಕೆಯಲ್ಲಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಕೊರಟಗೆರೆ ತಾಪಂ ಇಒ ಅವರು ಸ್ಥಳಕ್ಕೆ ಭೇಟಿ ನೀಡಿ, ಇಲ್ಲಿನ ವಾಸ್ತವತೆಯನ್ನು ನೋಡಿದ್ದಾರೆ. ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿರುವ ಅಂಗಡಿ ಮಳಿಗೆಗಳನ್ನು ಟೆಂಡರ್ ಮಾಡಲಾಗುವುದು ಹಾಗೂ ಪ್ರತಿ ಶುಕ್ರವಾರ ವಾರದ ಸಂತೆಯನ್ನು ಪ್ರಾರಂಭ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.ಫೋಟೊ...
ಹೊಳವನಹಳ್ಳಿ ಗ್ರಾಮದಲ್ಲಿರುವ ಎಪಿಎಂಸಿ ಮಾರುಕಟ್ಟೆಯ ಅವ್ಯವಸ್ಥೆ ಕುರಿತು ‘ಕನ್ನಡಪ್ರಭ’ ಪ್ರತಿಕೆಯಲ್ಲಿ ಪ್ರಕಟವಾದ ವಿಶೇಷ ಸುದ್ದಿ.