ಯುವ ಜನತೆಗೆ ವಿವೇಕಾನಂದರು ದಾರಿ ದೀಪ: ಎಚ್.ಎಂ.ಬಸವರಾಜಪ್ಪ

| Published : Jan 13 2024, 01:30 AM IST

ಯುವ ಜನತೆಗೆ ವಿವೇಕಾನಂದರು ದಾರಿ ದೀಪ: ಎಚ್.ಎಂ.ಬಸವರಾಜಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಮೊಬೈಲ್‌ ಯುಗದಲ್ಲಿ ದಾರ್ಶನಿಕರ ಜೀವನ ಚರಿತ್ರೆ ಮರೆಯುವಂತಾಗಿದೆ. ಪುಸ್ತಕ ಜ್ಞಾನವನ್ನು ರೂಪಿಸಲಿದೆ. ವಿವೇಕರ ಜ್ಞಾಪಕ ಶಕ್ತಿ, ಅತಿಮತೆಯ ಬುದ್ಧಿ ಅಪರಿಮಿತವಾಗಿದೆ. ಅಂಧಕಾರದ ಬದುಕಿಗೆ ದಿವ್ಯ ಚೇತನವಾಗಲಿದೆ. ವಿವೇಕರ ವಾಣಿ ಬದುಕಿಗೆ ಅಳವಡಿಸಿಕೊಳ್ಳಬೇಕಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿವಿವೇಕಾನಂದರ ಚಿಂತನೆ, ತತ್ವ ಸಿದ್ಧಾಂತ, ನುಡಿದ ಮುತ್ತಿನ ನುಡಿ ತಿಳಿಸಿದರೆ ಭವಿಷ್ಯದಲ್ಲಿ ದಾರಿದೀಪವಾಗಲಿದೆ ಎಂದು ಉಪಪ್ರಾಂಶುಪಾಲ ಎಚ್.ಎಂ.ಬಸವರಾಜಪ್ಪ ತಿಳಿಸಿದರು.

ಪಟ್ಟಣದ ಕೆಪಿಎಸ್ ಪ್ರೌಢಶಾಲೆಯಲ್ಲಿ ಯುವಜನ ಮತ್ತು ಅಭಿವೃದ್ಧಿ ಸಂಸ್ಥೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಸಮುದಾಯ ಆರೋಗ್ಯ ಕೇಂದ್ರ ಏರ್ಪಡಿಸಿದ್ದ ವಿವೇಕಾನಂದ ಜಯಂತಿಯಲ್ಲಿ ಮಾತನಾಡಿದರು.

ಮೌಢ್ಯಬಿಟ್ಟು ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ. ನಿಮ್ಮ ನಡೆ, ನುಡಿ, ಮಾಡುವ ಕೆಲಸಗಳೇ ತಮಗೆ ದಾರಿ ದೀಪವಾಗಲಿದೆ ಎಂದು ಸಾಧಿಸಿ ತೋರಿಸಿಕೊಟ್ಟವರು ವಿವೇಕಾನಂದರು ಎಂದರು.

ಮೊಬೈಲ್‌ ಯುಗದಲ್ಲಿ ದಾರ್ಶನಿಕರ ಜೀವನ ಚರಿತ್ರೆ ಮರೆಯುವಂತಾಗಿದೆ. ಪುಸ್ತಕ ಜ್ಞಾನವನ್ನುರೂಪಿಸಲಿದೆ. ವಿವೇಕರ ಜ್ಞಾಪಕ ಶಕ್ತಿ, ಅತಿಮತೆಯ ಬುದ್ಧಿ ಅಪರಿಮಿತವಾಗಿದೆ. ಅಂಧಕಾರದ ಬದುಕಿಗೆ ದಿವ್ಯ ಚೇತನವಾಗಲಿದೆ ಎಂದರು.

ವಿವೇಕರ ವಾಣಿ ಬದುಕಿಗೆ ಅಳವಡಿಸಿಕೊಳ್ಳಬೇಕಿದೆ. ಯುವ ಸಂಪತ್ತು. ದೇಶದ ಬಲು ದೊಡ್ಡ ಆಸ್ತಿ. ವಿವೇಕರ ಜನ್ಮದಿನವನ್ನು ಯುವ ದಿನವಾಗಿ ನಾಡಿನಲ್ಲಿ ಆಚರಿಸುತ್ತಿರುವುದು ವಿವೇಕರಲ್ಲಿದ್ದ ಯುವಘರ್ಜನೆಯ ಸಾಧನೆಗೆ ಸಾಕ್ಷಿಯಾಗಿದೆ ಎಂದರು.

ಯುವಜನ ಮತ್ತುಅಭಿವೃದ್ಧಿ ಸಂಸ್ಥೆ ಮೇಲ್ವಿಚಾರಕ ಎನ್. ಪರಮೇಶ್ , ಶಿಕ್ಷಕ ಪರಮೇಶ್ ಮಾತನಾಡಿದರು. ವಿವೇಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸ್ಮರಿಸಲಾಯಿತು. ಆಪ್ತ ಸಮಾಲೋಚಕಿ ವಿಂಧ್ಯಾ, ಮೇಲ್ವಿಚಾರಕಎನ್. ಪರಮೇಶ್, ಲ್ಯಾಬ್‌ ಟೆಕ್ನಿಷಿಯನ್‌ ರಂಗಸ್ವಾಮಿ, ಶಿಕ್ಷಕ ಸುರೇಶ್, ಶ್ರೀಕಾಂತ್ ಚಿಮ್ಮಲ್, ಸುಷ್ಮಾ, ತೇಜಾವತಿ ಉಪಸ್ಥಿತರಿದ್ದರು.ಸ್ವಾಮಿ ವಿವೇಕಾನಂದರು ಯುವಕರ ಆತ್ಮಶಕ್ತಿಯ ಸಂಕೇತದಂತಿದ್ದರು: ಡಾ.ಅಣ್ಣಯ್ಯ ತೈಲೂರುಮದ್ದೂರು: ಸ್ವಾಮಿ ವಿವೇಕಾನಂದರು ಯುವಕರ ಆತ್ಮಶಕ್ತಿಯ ಸಂಕೇತದಂತಿದ್ದರು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಅಣ್ಣಯ್ಯ ತೈಲೂರು ಅಭಿಪ್ರಾಯ ಪಟ್ಟರು.

ತಾಲೂಕಿನ ಕೊಪ್ಪ ಸರ್ಕಾರಿ ಪದವಿ ಕಾಲೇಜಿನ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯಲ್ಲಿ ಮಾತನಾಡಿ, ಯುವಕರು ಈ ದೇಶದ ಆಸ್ತಿ. ದೇಶದ ಭದ್ರತೆಗೆ ಅವರ ಕೊಡುಗೆ ಹೆಚ್ಚಾಗಿ ಸಿಗಬೇಕೆಂದು ಬಯಸಿದ್ಧ ವಿವೇಕಾನಂದರು ಯುವಶಕ್ತಿಯ ಪ್ರತೀಕ ಎಂದರೆ ತಪ್ಪಾಗಲಾರದು. ಅವರ ತತ್ವ ಆದರ್ಶಗಳನ್ನು ಯುವಕರು ಅಳವಡಿಸಿಕೊಂಡಾಗ ಮಾತ್ರ ಅವರ ಜನ್ಮದಿನಕೊಂದು ಅರ್ಥ ಎಂದರು.ವಿದ್ಯಾರ್ಥಿಗಳು ಶಿಕ್ಷಣ ಕಲಿಕೆ ಮಾತ್ರವಲ್ಲದೆ ನೈತಿಕ ಶಿಕ್ಷಣಕ್ಕೂ ಒತ್ತು ನೀಡಿದಾಗ ಮಾತ್ರ ಬದುಕು ಸುಂದರವಾಗಿರುತ್ತದೆ. ಹಾಗಾಗಿ ವಿದ್ಯಾರ್ಥಿಗಳು ನೈತಿಕತೆ ಪ್ರಾಮಾಣಿಕತೆಯನ್ನು ಮೂಡಿಸಿಕೊಳ್ಳಬೇಕು ಎಂದರು.ಸಮಾರಂಭದಲ್ಲಿ ಕನ್ನಡ ಉಪನ್ಯಾಸಕಿ ಸರ್ವ ಮಂಗಳ, ಪ್ರಥಮ ದರ್ಜೆ ಸಹಾಯಕಿ ಕುಮಾರಿ, ಸಹಾಯಕ ವೆಂಕಟೇಶ್, ಭವಾನಿ ವಿದ್ಯಾರ್ಥಿಗಳು ಹಾಜರಿದ್ದರು.