ಚಿಕ್ಕಮಗಳೂರುಜ್ಞಾನಶಕ್ತಿ ಮತ್ತು ವಿಚಾರಶಕ್ತಿಯಿಂದ ಸ್ವಾಮಿ ವಿವೇಕಾನಂದ ವಿಶ್ವದ ಗಮನ ಸೆಳೆದವರು ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಕಾರ್‍ಯದರ್ಶಿ ಪ್ರಶಾಂತ ಹೊಳೆಹೊನ್ನೂರು ಹೇಳಿದರು.
- ಸಾಯಿ ಏಜಂಲ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನ ಆಚರಣೆ
ಕನ್ನಡಪ್ರಭವಾರ್ತೆ, ಚಿಕ್ಕಮಗಳೂರುಜ್ಞಾನಶಕ್ತಿ ಮತ್ತು ವಿಚಾರಶಕ್ತಿಯಿಂದ ಸ್ವಾಮಿ ವಿವೇಕಾನಂದ ವಿಶ್ವದ ಗಮನ ಸೆಳೆದವರು ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಕಾರ್‍ಯದರ್ಶಿ ಪ್ರಶಾಂತ ಹೊಳೆಹೊನ್ನೂರು ಹೇಳಿದರು.ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಚಿಕ್ಕಮಗಳೂರು ಜಿಲ್ಲಾ ಸಮಿತಿ ಸಿರಗುಂದ ಸಾಯಿ ಏಜಂಲ್ಸ್ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ’ರಾಷ್ಟ್ರೀಯ ಯುವ ದಿನ’ ಕಾರ್‍ಯಕ್ರಮದಲ್ಲಿ ಮಾತನಾಡಿದರು.ವಿವೇಕಾನಂದ ವ್ಯಕ್ತಿ ಅಲ್ಲ ಒಂದು ಶಕ್ತಿ. ಭಾರತದ ಹಿರಿಮೆ, ಗರಿಮೆಗಳನ್ನು ಜಗತ್ತಿನ ಮುಂದೆ ಪರಿಣಾಮಕಾರಿಯಾಗಿ ಅನಾವರಣಗೊಳಿಸಿದವರು. ಭಾರತದ ಜ್ಞಾನ ಸಂಪತ್ತನ್ನು ವಿವರಿಸಿದವರು. ದೇಶದ ಸ್ಥಿತಿಗತಿಗಳ ಬಗ್ಗೆ ಮರುಗಿ ಸುಧಾರಣೆಗೆ ಮುಂದಾದವರು ಆಧ್ಯಾತ್ಮದ ಕಲ್ಪನೆ, ಯೋಗ, ವೇದ, ಧ್ಯಾನ ಸಮರ್ಥವಾಗಿ ವಿಶ್ವಕ್ಕೆ ಪರಿಚಯಿಸಿದವರು ಎಂದರು.ನೋವು, ಅನುಮಾನ, ಅವಮಾನ, ಹಿಂಸೆ ಅನುಭವಿಸಿ ಭಾರತದ ಉದಾತ್ತ ಚಿಂತನೆ ತೆರೆದಿಟ್ಟ ವಿವೇಕ ಮುಖ್ಯವಾಹಿನಿಗೆ ಬಂದ ಮೇಲೆ ವಿಶ್ವಖ್ಯಾತರು. ಚಿಕಾಗೋದಲ್ಲಿ ವಿಶ್ವ ಧರ್ಮ ಸಮ್ಮೇಳನದಲ್ಲಿ ಮಾತು ಆರಂಭಿಸಿದ ಪರಿಯೆ ವಿಸ್ಮಯ. ವಿವಿಧೆಡೆ ಯಿಂದ ಬಂದ ಧರ್ಮ ವಿದ್ವಾಂಸರು ಪ್ರಭಾವಿತರಾಗಿ ಸುದೀರ್ಘ ಕರತಾಡನ ಮಾಡಿದ್ದು ಇತಿಹಾಸ. ವಿವೇಕರ ಉಪನ್ಯಾಸ ಏರ್ಪಡಿಸಲು ಸ್ಪರ್ಧೆಯೆ ನಡೆದಿತ್ತು. ಯುವ ಶಕ್ತಿಗೆ ಅವರೊಂದು ಮಾದರಿ ಎಂದ ಪ್ರಶಾಂತ, ಸಂಕಲ್ಪ ಶುದ್ಧ ವಾಗಿದ್ದರೆ ಸಾಕಾರಗೊಳ್ಳುತ್ತದೆ ಎಂದು ಹೇಳಿದರು.ಕೆ.ಆರ್.ಪೇಟೆ ಆಸ್ಪತ್ರೆ ವೈದ್ಯಾಧಿಕಾರಿ ಡಾ.ವಿದ್ಯಾಸಾಗರ್ ಪ್ರಧಾನ ಉಪನ್ಯಾಸ ನೀಡಿ, ವಿವೇಕಾನಂದರು ಭಾರತಕ್ಕೆ ನೀಡಿದ ಎರಡು ಆದರ್ಶಗಳೆಂದರೆ ತ್ಯಾಗ ಮತ್ತು ಸೇವೆ. ತಮ್ಮ ಜೀವನದಲ್ಲಿ ಇದನ್ನೆ ಪರಿಪಾಲಿಸಿದ್ದು ಯುವಜನತೆ ಅನುಕರಿ ಸಿದರೆ ಭವ್ಯ ಭಾರತ ನಿರ್ಮಾಣ ಸಾಧ್ಯ. ಧರ್ಮವೇ ಭಾರತದ ಜೀವಾಳ-ಅಂತಃಸತ್ವ. ಸ್ವಂತ ಮೋಕ್ಷವನ್ನು ತ್ಯಾಗ ಮಾಡಿ ಸೇವೆಗೆ ಸಮರ್ಪಸಿಕೊಂಡವರು ಎಂದರು.ರಾಮಕೃಷ್ಣರ ನಂತರ ಅವರ ಶಿಷ್ಯರು ಅಲೆಮಾರಿ ಸನ್ಯಾಸಿಗಳಾಗಿ ಚದುರಿದ್ದು, ನಾಲ್ಕೈದು ವರ್ಷ ಕಾಲ್ನಡಿಗೆಯಲ್ಲಿ ಭಾರತ ದಾದ್ಯಂತ ಸಂಚರಿಸಿದ ವಿವೇಕಾನಂದ ಕನ್ಯಾಕುಮಾರಿ ಬಂಡೆಯ ಮೇಲೆ ಕುಳಿತು 3 ದಿನಗಳ ಕಾಲ ಅನ್ನ ಆಹಾರ ನಿದ್ದೆ ತೊರೆದು ತಪಸ್ಸು ಮಾಡಿದ ನಂತರ ಹೊಸ ಬೆಳಕಿನೊಂದಿಗೆ ಭಾರತದ ವಿಶ್ವರೂಪ ದರ್ಶಿಸಿದವರೆಂದರು.
ಸಾಯಿ ಏಜೆಂಲ್ಸ್ ಪ.ಪೂ.ಕಾಲೇಜು ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಕುಲದೀಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿಸ್ತು, ಸಂಕಲ್ಪ, ತರ್ಕ ವಿದ್ಯಾರ್ಥಿಗಳಿಗೆ ಅತ್ಯಗತ್ಯ. ಶುದ್ಧ ಸಂಕಲ್ಪ ಸಿದ್ಧಿ ಆಗುತ್ತದೆ. ಇಚ್ಛಾಶಕ್ತಿಯಿಂದ ಹನುಮ ಲಂಕೆ ಹಾರಿದ. ಉತ್ತಮವಾದ ಚಾರಿತ್ರ್ಯ, ಪ್ರಾಮಾಣಿಕ, ಜ್ಞಾನವಂತರಾಗಿ ಯುವಕರನ್ನು ರೂಪಿಸುವ ಶಿಕ್ಷಕನದ್ದು ನಿಜವಾದ ದೇಶಸೇವೆ ಎಂದರು.ಅಭಾಸಾಪ ಶೃಂಗೇರಿ ವಿಭಾಗೀಯ ಸಂಯೋಜಕ ಚಿ.ಸ.ಪ್ರಭುಲಿಂಗಶಾಸ್ತ್ರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕೌಶಲ್ಯ ಅಭಿವೃದ್ಧಿ ಇಲಾಖೆ ಜಿಲ್ಲಾ ವ್ಯವಸ್ಥಾಪಕ ಶಿವಲಿಂಗಪ್ಪ, ಇನೋವೇಟಿವ್ ಶಾಲಾ ಮುಖ್ಯಸ್ಥ ಸಾಗರ್ ಮತ್ತು ಭವಿಷ್ಯ ನಿಧಿ ವಿಶ್ರಾಂತ ಅಧಿಕಾರಿ ವಿಜಯಕುಮಾರ ನೇತೃತ್ವದಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕನ್ನಡ ಉಪನ್ಯಾಸಕ ನಿಡಘಟ್ಟ ಕುಮಾರಸ್ವಾಮಿ ಸ್ವಾಗತಿಸಿ, ವಂದಿಸಿದರು. 13 ಕೆಸಿಕೆಎಂ 2ಚಿಕ್ಕಮಗಳೂರಿನ ಸಾಯಿ ಏಜಂಲ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನ ಆಚರಣೆ ಕಾರ್ಯಕ್ರಮ ನಡೆಯಿತು. ಪ್ರಶಾಂತ್ ಹೊಳೆಹೊನ್ನೂರು, ಶಿವಲಿಂಗಯ್ಯ, ಡಾ.ಕುಲದೀಪ, ಡಾ.ವಿದ್ಯಾಸಾಗರ್, ಪ್ರಭುಲಿಂಗಶಾಸ್ತ್ರಿ ಇದ್ದರು.