ಸಾರಾಂಶ
ಜಾತಿ ಜನಗಣತಿ ಕಾರ್ಯಕ್ರಮ ಆರಂಭ ಆಗುತ್ತಿದೆ. ಪ್ರತಿಯೊಬ್ಬ ಒಕ್ಕಲಿಗರು ತನ್ನ ಉಪಜಾತಿಗಳನ್ನು ತಪ್ಪದೇ ಬರೆಸುವ ಮುಖಾಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸವಲತ್ತುಗಳನ್ನು ಪಡೆಯಬಹುದು. ಆದ್ದರಿಂದ ಉಪಜಾತಿಗಳನ್ನು ಬರೆಸಬೇಕೆಂದು ಅರೇ ಶಂಕರ ಮಠದ ಸಿದ್ದರಾಮಯ್ಯ ಸ್ವಾಮೀಜಿ ತಿಳಿಸಿದ್ದಾರೆ
ಕನ್ನಡಪ್ರಭ ವಾರ್ತೆ ಕುಣಿಗಲ್
ಜಾತಿ ಜನಗಣತಿ ಕಾರ್ಯಕ್ರಮ ಆರಂಭ ಆಗುತ್ತಿದೆ. ಪ್ರತಿಯೊಬ್ಬ ಒಕ್ಕಲಿಗರು ತನ್ನ ಉಪಜಾತಿಗಳನ್ನು ತಪ್ಪದೇ ಬರೆಸುವ ಮುಖಾಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸವಲತ್ತುಗಳನ್ನು ಪಡೆಯಬಹುದು. ಆದ್ದರಿಂದ ಉಪಜಾತಿಗಳನ್ನು ಬರೆಸಬೇಕೆಂದು ಅರೇ ಶಂಕರ ಮಠದ ಸಿದ್ದರಾಮಯ್ಯ ಸ್ವಾಮೀಜಿ ತಿಳಿಸಿದ್ದಾರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸರ್ಕಾರ ಜಾತಿ ಜನಗಣತಿ ಹಾಗೂ ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಪ್ರಾರಂಭಿಸುತ್ತಿದೆ. ನಿಮ್ಮ ಮನೆಬಾಗಿಲಿಗೆ ಬರುವ ಸಿಬ್ಬಂದಿಗೆ ನೀವು ಸಂಪೂರ್ಣ ಮಾಹಿತಿಯನ್ನು ನೀಡಬೇಕು. ಒಕ್ಕಲಿಗ ಸಮುದಾಯದ ಬಂಧುಗಳು ತಮ್ಮ ಒಳಪಂಗಡಗಳಾದ ಗಂಗಾಟ್ಕರ್, ಮರಸು, ನಾಮಧಾರಿ, ದಾಸ ಕುಂಚಿಟಿಗ, ರೆಡ್ಡಿ , ಹಳ್ಳಿಕಾರ್ ಹಾಗೂ ಸರ್ಪ ಎಂಬ ಒಳಜಾತಿಗಳನ್ನು ತಪ್ಪದೇ ಬರಸಿ ಇದರಿಂದ ಕೇಂದ್ರ ಸರ್ಕಾರ ನೀಡುವ 10% ಸವಲತ್ತನ್ನು ಪಡೆಯಲು ಸಹಕಾರಿ ಆಗುತ್ತದೆ ಎಂದರು.ಜಾತಿ ಜನಗಣತಿಯಲ್ಲಿ ಒಕ್ಕಲಿಗ ಜೊತೆಗೆ ಉಪಜಾತಿಗಳನ್ನು ಬರೆಸುವುದರಿಂದ ರಾಜ್ಯದಲ್ಲಿ ಒಕ್ಕಲಿಗರ ಸಂಖ್ಯೆ ಕಡಿಮೆ ಆಗುತ್ತದೆ ಎಂಬ ತಪ್ಪು ಕಲ್ಪನೆ ಕೆಲವರಲ್ಲಿದೆ. ಒಕ್ಕಲಿಗ ಮುಖ್ಯ ಜಾತಿ ಆಗಿರುತ್ತದೆ ಆದ್ದರಿಂದ ಸಮೀಕ್ಷೆಯಲ್ಲಿ ಉಪಜಾತಿಗಳನ್ನು ಕೇವಲ ಶೈಕ್ಷಣಿಕ ಪ್ರಾಮುಖ್ಯತೆ ಹಾಗೂ ಸವಲತ್ತುಗಳಿಗೆ ಮಾತ್ರ ಉಪಯೋಗಿಸಬಹುದು ಎಂದರು. ಸರ್ಕಾರ ತನ್ನ ಮೂಲಭೂತ ಸೌಕರ್ಯ ಒದಗಿಸುವ ಸಲುವಾಗಿ ಪ್ರತಿಯೊಂದು ಮನೆಗೆ ವಿದ್ಯುತ್ ಸೌಕರ್ಯ ಕುಡಿಯುವ ನೀರು ಬೀದಿ ದೀಪ ಹೀಗೆ ಹಲವಾರು ಸೌಲಭ್ಯಗಳನ್ನು ನೀಡಿದ್ದು ಸಮೀಕ್ಷೆಯಲ್ಲಿ ಅಂತಹ ಕುಟುಂಬಗಳಿಗೆ ಅಂಕ ಕಡಿಮೆ ಮಾಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಬೇಗೂರು ರಾಮಣ್ಣ ಬಾನಾ ರವಿ ಸುಮತಿ ಲಕ್ಷ್ಮಿ ದೇವಿ , ಪ್ರಕಾಶ್ ಹಾಗೂ ಆನಂದ್ ಕುಮಾರ್ ಇದ್ದರು.