ವಾಲಿಬಾಲ್‍: ಅಂತಾರಾಷ್ಟ್ರೀಯ ಮಟ್ಟಕ್ಕೆ ಸೌಮ್ಯಬಾಯಿ ಆಯ್ಕೆ

| Published : Jan 17 2025, 12:46 AM IST

ಸಾರಾಂಶ

ಕಡೂರು, ತಾಲೂಕಿನ ಯಗಟಿ ಹೋಬಳಿ 9ನೇ ಮೈಲಿಕಲ್ಲಿನ ಗ್ರಾಮೀಣ ಪ್ರತಿಭೆ ಸೌಮ್ಯಬಾಯಿ ವಾಲಿವಾಲ್ ಆಟದಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟವನ್ನು ಪ್ರತಿನಿಧಿಸಿ ಇದೀಗ ಅಂತಾರಾಷ್ಟ್ರಿಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಪಿಕಾರ್ಡ್ ಬ್ಯಾಂಕಿನ ಮಾಜಿ ಅಧ್ಯಕ್ಷ ದೊಣ್ಣೇಕೊರನಹಳ್ಳಿ ಉಮೇಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಕಡೂರು

ತಾಲೂಕಿನ ಯಗಟಿ ಹೋಬಳಿ 9ನೇ ಮೈಲಿಕಲ್ಲಿನ ಗ್ರಾಮೀಣ ಪ್ರತಿಭೆ ಸೌಮ್ಯಬಾಯಿ ವಾಲಿವಾಲ್ ಆಟದಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟವನ್ನು ಪ್ರತಿನಿಧಿಸಿ ಇದೀಗ ಅಂತಾರಾಷ್ಟ್ರಿಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಪಿಕಾರ್ಡ್ ಬ್ಯಾಂಕಿನ ಮಾಜಿ ಅಧ್ಯಕ್ಷ ದೊಣ್ಣೇಕೊರನಹಳ್ಳಿ ಉಮೇಶ್ ತಿಳಿಸಿದರು.

ಸ್ವಾಮಿನಾಯ್ಕ ಅವರ ಪುತ್ರಿಯಾದ ಸೌಮ್ಯಬಾಯಿ ಜಿಲ್ಲೆಯ ಪ್ರತಿಷ್ಠಿತ ಸೀಗೋಡಿನ ನವೋದಯ ವಿದ್ಯಾಲಯದಲ್ಲಿ 8ನೇ ತರಗತಿ ಕಲಿಯುತ್ತಿದ್ದಾರೆ. ವಾಲಿವಾಲ್ ಪಂದ್ಯಗಳಲ್ಲಿ ಭಾಗವಹಿಸಿ ಶಾಲೆ ಹಂತದಿಂದ ರಾಜ್ಯ ಮಟ್ಟಕ್ಕೆ, ರಾಜ್ಯ ಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಅಂತಾರಾಷ್ಟ್ರೀಯ ಪ್ರತಿಭೆಯಾಗಿ ನಮ್ಮ ಗ್ರಾಮೀಣ ಭಾಗದ ಬಾಲಕಿ ಸಾಧನೆ ಮಾಡಿರುವುದಕ್ಕೆ ತಾಲೂಕಿನ ಹಾಗೂ ಯಗಟಿ ಹೋಬಳಿ ಜನತೆಯ ಪರವಾಗಿ ಅಭಿನಂದಿಸುತ್ತೇವೆ ಎಂದು ಹೇಳಿದರು. ಸಾಧನೆ ಮಾಡಿರುವ ಸೌಮ್ಯಬಾಯಿ ಅವರನ್ನು ಕ್ರೀಡೆಗಳಿಗೆ ಉತ್ತೇಜನ ನೀಡುವ ಶಾಸಕ ಕೆ.ಎಸ್.ಆನಂದ್ ಸಮ್ಮುಖದಲ್ಲಿ ಗೌರವಿಸಲಾಗಿದ್ದು ಶಾಸಕರು ಸೌಮ್ಯಬಾಯಿ ಅವರಿಗೆ ಇನ್ನಷ್ಟು ಸಾಧನೆ ಮಾಡಲಿ ಎಂದು ಶುಭ ಹಾರೈಸಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಕಡೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರೇವತಿ ನಾಗರಾಜ್, ಕಾಂಗ್ರೆಸ್‌ ಮುಖಂಡರಾದ ಚೆಕ್‍ಪೋಸ್ಟ್ ರವಿ, ಪ್ರಕಾಶ್, ಮಂಜುನಾಥ್, ಸೌಮ್ಯಬಾಯಿ ಅವರ ಸ್ನೇಹಿತೆಯರು, ಕುಟುಂಬದವರು ಮತ್ತಿತರರು ಇದ್ದರು.

16ಕೆಕೆಡಿಯು2. ವಾಲಿಬಾಲ್ ಪಂದ್ಯಾವಳಿಯಲ್ಲಿ ಅಂತರಾಷ್ಟ್ರಿಯ ಮಟ್ಟಕ್ಕೆ ಆಯ್ಕೆಯಾಗಿರುವ 9ನೇ ಮೈಲಿಕಲ್ಲು ಗ್ರಾಮದ ಸೌಮ್ಯಾಬಾಯಿ ಅವರನ್ನು ಶಾಸಕ ಕೆ.ಎಸ್.ಆನಂದ್ ಸನ್ಮಾನಿಸಿ ಅಭಿನಂದಿಸಿದರು.