ನಾಪೋಕ್ಲು: ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಶೋಷಿಯೇಷನ್ ಎಮ್ಮೆಮಾಡುವಿನಲ್ಲಿ ಕುಟುಂಬಗಳ ಸಹಯೋಗದಲ್ಲಿ ಆಯೋಜಿಸಿದ ಕೊಡವ ಜಮ್ಮ ಮುಸ್ಲಿಂ ಕುಟುಂಬಗಳ ನಡುವೆ ಮೂರು ದಿನಗಳ ಕಾಲ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಚಕ್ಕೇರ ಕುಟುಂಬವು ಕಪ್‌ ನ್ನು ತನ್ನಗಿಸಿಕೊಂಡಿತು.

ಪಂದ್ಯಾಟದಲ್ಲಿ 48 ತಂಡಗಳು ಭಾಗವಹಿಸಿದ್ದು, ಚೆಮ್ಬಾರಂಡ, ಕೂರುಳಿಕಾರಂಡ, ಕುವೆಲರ ಮತ್ತು ಚಕ್ಕೇರ ತಂಡಗಳು ಸೆಮಿ ಫೈನಲ್ ಪ್ರವೇಶಿದ್ದವು.

ಸೆಮಿ ಫೈನಲ್ ನಲ್ಲಿ ಕುವೆಲರ ಕೂರುಳಿಕಾರಂಡ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದರೆ ಚಕ್ಕೇರ ತಂಡವು ಚೆಮ್ಬಾರಂಡ ತಂಡವನ್ನು ಮಣಿಸಿ ಫೈನಲ್ ಪ್ರವೇಶ ಮಾಡಿತು.

ಫೈನಲ್ ನಲ್ಲಿ 17- 21ರಲ್ಲಿ ಮೊದಲ ಸೆಟ್ ಕುವೆಲರ ವಿಜೇತವಾಗಿದ್ದು, ಎರಡನೇ ಸೆಟ್ 15-21ರಲ್ಲಿ ಚಕ್ಕೇರ ತಮ್ಮದಾಗಿಸಿಕೊಂಡಿತು. ತೀವ್ರ ಪೈಪೋಟಿಯಲ್ಲಿ ನಡೆದ ಡಿಸೈಡ್ ಸೆಟ್ ನಲ್ಲಿ 13-15ರಲ್ಲಿ ಕುವೆಲರವನ್ನು ಮಣಿಸಿ ಜಮ್ಮ ಕಪ್‌ ನ್ನು ಚಕ್ಕೇರ ಕುಟುಂಬ ತಮ್ಮದಾಗಿಸಿಕೊಂಡಿತು.

ಬೆಸ್ಟ್ ಅಟಾಕರ್ ಆಗಿ ಗನಿ ಕುವೆಲರ ಚಿಟ್ಟಡೆ, ಬೆಸ್ಟ್ ಬ್ಲಾಕರ್ ಆಗಿ ಚಕ್ಕೇರ ಇಶಾಕ್, ಬೆಸ್ಟ್ ಅಲ್‌ ರೌಂಡರ್ ಆಗಿ ನಿಯಾಜ್ ಕೂರುಳಿಕಾರಂಡ ಬೆಸ್ಟ್ ಸೆಟ್ಟರ್ ಆಗಿ ಸೈಫು ಚೆಮ್ಬಾರನ್ಡ,ಬೆಸ್ಟ್ ಡಿಫೆಂಡರ್ ಆಗಿ ರೌಫ್ ಚಕ್ಕೇರ ಆಯ್ಕೆಯಾದರು.ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆಜೆಎಂಎಸ್‌ಸಿಎ ಸ್ಥಾಪಕ ಅಧ್ಯಕ್ಷ ಅನೀಸ್ ಕುವೆಲರ, ಉಪಾಧ್ಯಕ ಸೈದು ಹಾಜಿ ಬೆಲಿಯತ್ಕಾರಂಡ, ಯುವ ಉದ್ಯಮಿಗಳಾದ ಗಫೂರ್ ಜಿಮಾಕ್, ಅಶ್ರಫ್ ಕೊಪ್ಪಕ್ಕಾರಂಡ ಹಾಗೂ ವಿಶೇಷ ಅತಿಥಿಗಳಾಗಿ ಇಸ್ಮಾಯಿಲ್ ನಾಪೋಕ್ಲು, ಹಂಝ ಹರೀಶ್ಚಂದ್ರ, ಮಚ್ಚುರ ರವಿ, ಮೂವೆರಾ ವಿನು ಭಾಗವಹಿಸಿದ್ದರು.