ರ‍್ಯಾಂಬೋ ಸರ್ಕಸ್‌ ಆಫರ್‌: ಇಂದು ಮತದಾನಮಾಡಿ ಮೇಲ್ದರ್ಜೆ ಆಸನದಲ್ಲಿ ಸರ್ಕಸ್‌ ನೋಡಿ!

| Published : Apr 26 2024, 12:49 AM IST

ರ‍್ಯಾಂಬೋ ಸರ್ಕಸ್‌ ಆಫರ್‌: ಇಂದು ಮತದಾನಮಾಡಿ ಮೇಲ್ದರ್ಜೆ ಆಸನದಲ್ಲಿ ಸರ್ಕಸ್‌ ನೋಡಿ!
Share this Article
  • FB
  • TW
  • Linkdin
  • Email

ಸಾರಾಂಶ

ಪ್ರದರ್ಶನದ ಸಮಯದಲ್ಲಿ ಟಿಕೆಟ್‌ಗಳು ಕೌಂಟರ್‌ಗಳಲ್ಲಿ ಲಭ್ಯವಿರುತ್ತದೆ. ಮುಂಗಡ ಕಾಯ್ದಿರಿಸಿಕೊಳ್ಳಲು www.rambocircus.in ಲಾಗ್‌ಇನ್ ಮಾಡಿ. ಬುಕ್ ಮೈ ಶೋ ಆಪ್‌ನ ಮೂಲಕ ಸಹ ಟಿಕೆಟ್‌ಗಳನ್ನು ಕಾಯ್ದಿರಿಸಿಕೊಳ್ಳಬಹುದಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಹೊರವಲಯದ ಗೋಲ್ಡ್‌ ಫಿಂಚ್‌ ಸಿಟಿ ಮೈದಾನ ಎದುರಿನ ಡೆಲ್ಟಾ ಗ್ರೌಂಡ್‌ನಲ್ಲಿ ನಡೆಯುತ್ತಿರುವ ರ‍್ಯಾಂಬೋ ಸರ್ಕಸ್‌ ಮತದಾನ ಪ್ರಯುಕ್ತ ಏ.26ರಂದು ಮತದಾರರಿಗೆ ವಿಶೇಷ ಕೊಡುಗೆ ಘೋಷಿಸಿದೆ.

ಮತದಾನ ಮಾಡಿ ಸರ್ಕಸ್‌ಗೆ ಆಗಮಿಸುವ ಮತದಾರರು ತಾವು ಖರೀದಿಸಿದ ಸರ್ಕಸ್‌ನ ಟಿಕೇಟಿಗೆ ಒಂದು ಹಂತದ ಮೇಲ್ದರ್ಜೆಯ ಆಸನ ನೀಡಲಾಗುವುದು. ಈ ಕೊಡುಗೆ ಮತದಾನದ ದಿನಂದು ಶುಕ್ರವಾರ ಮಾತ್ರ ಲಭ್ಯವಿರುತ್ತದೆ.

ಬಹುನಿರೀಕ್ಷಿತ ಮತ್ತು ವಿಶ್ವವಿಖ್ಯಾತಿ ಪಡೆದಿರು ರ‍್ಯಾಂಬೊ ಸರ್ಕಸ್ ಈಗ ಮಂಗಳೂರಿನಲ್ಲಿ ಯಶಸ್ವೀ ಪ್ರದರ್ಶನ ನೀಡುತ್ತಿದೆ. ರ‍್ಯಾಂಬೊ ಸರ್ಕಸ್‌ ತನ್ನ ಪೂರ್ಣ ಪ್ರಮಾಣದ ಮೋಡಿ ಮಾಡುವ ೧೨೦ ನಿಮಿಷಗಳ ನವೀನ ಮಾದರಿಯ ಸರ್ಕಸ್‌ನ್ನು ಪ್ರದರ್ಶಿಸುತ್ತಿದೆ. ರ‍್ಯಾಂಬೊ ತಂಡ ಬಬಲ್ ಶೋ, ಸ್ಕೇಟಿಂಗ್, ಲ್ಯಾಡರ್ ಬ್ಯಾಲೆನ್ಸ್, ಸ್ವಾರ್ಡ್ ಆ್ಯಕ್ಟ್, ಕ್ಯೂಬ್‌ಜಗ್ಲಿಂಗ್, ರೊಲ್ಲಾ ಬೊಲ್ಲಾ, ಹುಲಾ ಹೂಪ್ ಮತ್ತು ಏರಿಯಲ್‌ ರೋಪ್‌ ಜೊತೆಗೆ ಅನೇಕ ಮನರಂಜನೆಗಾಗಿ ನಮ್ಮೊಂದಿಗೆ ಸೇರಿಕೊಳ್ಳಿ. ಒಮ್ಮೆ ನೀವು ಬಾಲ್ಯದಲ್ಲಿಆನಂದಿಸಿದ ನಗು ತುಂಬಿದ ವಿದೂಷಕಗಳ ಬಗ್ಗೆ ನಿಮ್ಮ ಮಕ್ಕಳಿಗೆ ಹೇಳಲು ಮರೆಯಬೇಡಿ. ಪ್ರದರ್ಶನದ ಸಮಯದಲ್ಲಿ ಟಿಕೆಟ್‌ಗಳು ಕೌಂಟರ್‌ಗಳಲ್ಲಿ ಲಭ್ಯವಿರುತ್ತದೆ. ಮುಂಗಡ ಕಾಯ್ದಿರಿಸಿಕೊಳ್ಳಲು www.rambocircus.in ಲಾಗ್‌ಇನ್ ಮಾಡಿ. ಬುಕ್ ಮೈ ಶೋ ಆಪ್‌ನ ಮೂಲಕ ಸಹ ಟಿಕೆಟ್‌ಗಳನ್ನು ಕಾಯ್ದಿರಿಸಿಕೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.