ಮತದಾನದಿಂದ ವಂಚಿತರಾಗಬೇಡಿ

| Published : Mar 30 2024, 12:47 AM IST

ಸಾರಾಂಶ

ಜಿಲ್ಲೆಯಲ್ಲಿ ಮತ್ತು ನಿಮ್ಮ ತಾಲೂಕಿನಲ್ಲಿ ನೂರಕ್ಕೆ ನೂರರಷ್ಟು ಮತದಾನ ಆಗಬೇಕು. ಕಾರಣ ಪ್ರತಿಯೊಬ್ಬರು ಮತದಾನದಿಂದ ವಂಚಿತರಾಗಬಾರದು. ಮತದಾನದಿಂದ ಯಾರೂ ದೂರ ಉಳಿಯಬಾರದು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಮತದಾನ ಪ್ರತಿಯೊಬ್ಬರ ಹಕ್ಕು. ಸಂವಿಧಾನ ನೀಡಿರುವ ಈ ನಿಮ್ಮ ಹಕ್ಕನ್ನು ಮತದಾನ ಮಾಡದೆ ಹಾಳು ಮಾಡಿಕೊಳ್ಳಬೇಡಿ ಎಂದು ಬಾಗಲಕೋಟ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಅಮರೇಶ ನಾಯಕ ಮತದಾರರಿಗೆ ತಿಳಿ ಹೇಳಿದರು.

ಶುಕ್ರವಾರ ಇಳಕಲ್ಲಿನ ಬಸವೇಶ್ವರ ವೃತದಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಇಳಕಲ್ಲ ತಾಲೂಕು ಸ್ವೀಪ್‌ ಸಮಿತಿ, ಇಳಕಲ್ಲ ತಹಸೀಲ್ದಾರ್‌ ಕಚೇರಿ ಹಾಗೂ ಇಳಕಲ್ಲ ನಗರ ಸಭೆಯ ಸಹಯೋಗದಲ್ಲಿ ನಡೆದ ಮತದಾನ ಜಾಗೃತಿಗಾಗಿ ಸೈಕಲ್‌ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮತ್ತು ನಿಮ್ಮ ತಾಲೂಕಿನಲ್ಲಿ ನೂರಕ್ಕೆ ನೂರರಷ್ಟು ಮತದಾನ ಆಗಬೇಕು. ಕಾರಣ ಪ್ರತಿಯೊಬ್ಬರು ಮತದಾನದಿಂದ ವಂಚಿತರಾಗಬಾರದು. ಮತದಾನದಿಂದ ಯಾರೂ ದೂರ ಉಳಿಯಬಾರದು ಎಂದು ಜಾಗೃತಿ ಮೂಡಿಸಿದರು.

ಈ ಬಾರಿ ಚುನಾವಣಾ ಆಯೋಗವು ಮತದಾನ ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ವಿಶೇಷ ಕಾಯಕ್ರಮಗಳನ್ನು ಹಮ್ಮಿಕೊಂಡಿದೆ. 85 ವರ್ಷ ಮೇಲ್ಪಟ್ಟವರು, ವಿಕಲಚೇತನರು ಮನೆಯಿಂದಲೇ ಮತದಾನ ಮಾಡುವ ಅವಕಾಶ ನೀಡಲಾಗಿದೆ. ಪಿಡಬ್ಲ್ಯೂಡಿ ಮತದಾರರಿಗೆ ವಿಶೇಷ ಸೌಲಭ್ಯ, ಸಖಿ ಮತಗಟ್ಟೆ ಸೇರಿದಂತೆ ವಿಶೇಷ ಮತಗಟ್ಟೆ ಸ್ಥಾಪಿಸಲಾಗುವುದು. ಆದ್ದರಿಂದ ಇಳಕಲ್ಲ ತಾಲೂಕಿನ ಎಲ್ಲ ಮತಕ್ಷೇತ್ರದ ಎಲ್ಲ ಮತದಾರರು ಮೇ 7ರಂದು ತಪ್ಪದೆ ಮತಗಟ್ಟೆಗೆ ಹೋಗಿ ಮುಕ್ತ ಮತ್ತು ನಿಷ್ಪಕ್ಷಪಾತದಿಂದ ಮತದಾನ ಮಾಡಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು ಎಂದು ಮನವಿ ಮಾಡಿದರು.

ಮತದಾನ ಜಾಗೃತಿ ಸೈಕಲ್‌ ಜಾಥಾ ನಗರಸಭೆಯು ಬಸವೇಶ್ವರ ವೃತ್ತದಿಂದ ಪ್ರಾರಂಭಗೊಂಡು ಬಸ್ ನಿಲ್ದಾಣ, ಕಂಠಿ ವೃತ್ತ ಮುಖಾಂತರ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ಕಂಠಿ ವೃತ್ತಕ್ಕೆ ಬಂದು ಮುಕ್ತಾಯಗೊಂಡಿತು. ನಂತರ ಅಲ್ಲಿ ಸಭೆ ನಡೆಯಿತು.

ಈ ಮತದಾನ ಜಾಗೃತಿ ಜಾಥಾದಲ್ಲಿ ಚುನಾವಣಾ ಕಾರ್ಯದರ್ಶಿಗಳು, ತಾ.ಪಂ ಅಧಿಕಾರಿ ಮುರಳಿ ದೇಶಪಾಂಡೆ, ಪೌರಾಯುಕ್ತ ರಾಜಾರಾಮ ಪವಾರ ಹಾಗು ಸೇರಿದಂತೆ ಇತರರು ಇದ್ದರು.

ಕೋಟ್...

ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮತ್ತು ನಿಮ್ಮ ತಾಲೂಕಿನಲ್ಲಿ ಶೇ.100 ರಷ್ಟು ಮತದಾನ ಆಗಬೇಕು. ಕಾರಣ ಪ್ರತಿಯೊಬ್ಬರು ಮತದಾನದಿಂದ ವಂಚಿತರಾಗಬಾರದು. ಮತದಾನದಿಂದ ಯಾರೂ ದೂರ ಉಳಿಯಬಾರದು. ಎಲ್ಲ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನ ನಮ್ಮ ಹಕ್ಕು. ಅದರಿಂದ ವಂಚಿತರಾಗಬೇಡಿ.

ಅಮರೇಶ ನಾಯಕ. ಜಿ.ಪಂ ಉಪ ಕಾರ್ಯದರ್ಶಿ