ಸಾರಾಂಶ
ರಾಹುಲ್ ಗಾಂಧಿ ಮತಗಳವು ಹೇಳಿಕೆ ಸಂಪೂರ್ಣ ಸತ್ಯವಾಗಿದೆ. 
ಕಂಪ್ಲಿ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ವೋಟ್ ಚೋರ್ ಗದ್ದಿ ಜೋಡ್ ಸಹಿ ಸಂಗ್ರಹ ಅಭಿಯಾನವನ್ನು ಭಾನುವಾರ ನಡೆಸಲಾಯಿತು.
ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ರಾಹುಲ್ ಗಾಂಧಿ ಮತಗಳವು ಹೇಳಿಕೆ ಸಂಪೂರ್ಣ ಸತ್ಯವಾಗಿದೆ. ನ್ಯಾಯಯುತವಾಗಿ ಚುನಾವಣೆ ನಡೆದರೆ ಯಾವುದೇ ರಾಜ್ಯದಲ್ಲಿ ಬಿಜೆಪಿ ಬಹುಮತ ಗಳಿಸುವುದಿಲ್ಲ. ಚುನಾವಣೆ ಆಯೋಗ ದೇಗುಲ ಇದ್ದಂತೆ, ಆಯೋಗದ ಮೇಲೆ ಭಾರತೀಯರಿಗೆ ನಂಬಿಕೆಯಿದೆ. ಕೇಂದ್ರ ಬಿಜೆಪಿ ಸರ್ಕಾರ ಇಡಿ ದುರ್ಬಳಕೆ ಮಾಡಿಕೊಂಡು ದಬ್ಬಾಳಿಕೆ ನಡೆಸುತ್ತಿದೆ. ಬಿಜೆಪಿ ಹಿಟ್ಲರ್ ಸರ್ಕಾರಕ್ಕೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಇನ್ನು ಕಂಪ್ಲಿಯಲ್ಲಿ ಕೆಲ ಬಿಜೆಪಿ ಮುಖಂಡರು ಆಂಧ್ರದಿಂದ ಕೆಲವರನ್ನು ಕರೆಸಿ ವಿಧಾನಸಭಾ ಚುನಾವಣೆ, ಕಂಪ್ಲಿ ಪುರಸಭೆಯ ಕೆಲ ವಾರ್ಡ್ ಗಳಲ್ಲಿಯೂ 180ರಿಂದ 200 ಓಟು ಹಾಕಿಸಿದ್ದಾರೆ ಎಂದು ಆರೋಪಿಸಿದರು. ಈ ಕುರಿತು ತಹಸೀಲ್ದಾರ್, ಪುರಸಭೆ ಮುಖ್ಯಾಧಿಕಾರಿ ಗಮನಕ್ಕೆ ತಂದು ಅನ್ಯಾಯವಾಗಿದ್ದನ್ನು ಹೊರ ತೆಗೆವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.ಇದಕ್ಕೂ ಮುನ್ನ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪುರಸಭೆಯಿಂದ ಅಂಬೇಡ್ಕರ್ ವೃತ್ತದತನಕ ಪ್ರತಿಭಟನೆ ಮೆರವಣಿಗೆ ನಡೆಸಿ ವೃತ್ತದಲ್ಲಿ ಸಹಿ ಸಂಗ್ರಹಿಸಿದರು.
ಪ್ರತಿಭಟನೆಯಲ್ಲಿ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಚಾನಾಳ್ ಚನ್ನಬಸವರಾಜ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಶ್ರೀನಿವಾಸರಾವ್, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಮುಖಂಡರಾದ ಇಟಗಿ ಶರಣಬಸವ, ಸಿ.ಆರ್.ಹನುಮಂತ, ವೀರಾಂಜನೇಯಲು, ಹೊನ್ನಳ್ಳಿ ಶ್ರೀದೇವಿ, ಕೆ.ಮಸ್ತಾನ್‌ವಲಿ, ಹೊಸಕೋಟೆ ಜಗದೀಶ, ವೈ.ಅಬ್ದುಲ್ ಮುನಾಫ್, ಬಿ.ಜಾಫರ್, ಗೌಡ್ರು ಸುರೇಶಗೌಡ, ನೇಣ್ಕಿ ಗಿರೀಶ್, ಬಾವಿಕಟ್ಟೆ ಚನ್ನಬಸವ, ಬಳ್ಳಾಪುರ ಲಿಂಗಪ್ಪ, ಆರ್.ಪಿ.ಶಶಿಕುಮಾರ್, ಕೆ.ಷಣ್ಮುಖ, ಗ್ಯಾರಂಟಿ ಸಮಿತಿ ಸೇರಿ ನಾನಾ ಸಮಿತಿ ಸದಸ್ಯರು, ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರಿದ್ದರು.;Resize=(128,128))
;Resize=(128,128))