ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಲು ಪ್ರತಿಯೊಬ್ಬರೂ ಮತ ಹಾಕಿ

| Published : Apr 08 2024, 01:00 AM IST

ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಲು ಪ್ರತಿಯೊಬ್ಬರೂ ಮತ ಹಾಕಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸದುರ್ಗ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲು ಬೀದಿ ನಾಟಕ ಪ್ರದರ್ಶಿಸಲಾಯಿತು.

ಕನ್ನಡಪ್ರಭವಾರ್ತೆ ಹೊಸದುರ್ಗ

ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರ ಒಂದೊಂದು ಮತವು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಲು ಕಾರಣವಾಗುತ್ತದೆ ಎಂದು ತಹಸೀಲ್ದಾರ್ ತಿರುಪತಿ ಪಾಟೀಲ್ ಹೇಳಿದರು.

ನಗರದ ಖಾಸಗಿ ಬಸ್ ನಿಲ್ದಾಣ ಮತ್ತು ಟಿ.ಬಿ.ಸರ್ಕಲ್‌ನಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ, ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಸಹಯೋಗದಲ್ಲಿ ಮತದಾನ ಜಾಗೃತಿ ಜಾಥಾ, ಬೀದಿ ನಾಟಕ ಮತ್ತು ಹಾಡುಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಮತದಾನ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿ ಮಾತನಾಡಿದರು.

18ವರ್ಷತುಂಬಿದ ಪುರುಷ ಮತ್ತು ಮಹಿಳಾ ಮತದಾರರು ತಪ್ಪದೇ ಮತಗಟ್ಟೆಗೆ ಬಂದು ಮತದಾನ ಮಾಡುವ ಮೂಲಕ ಉತ್ತಮ ನಾಯಕರ ಆಯ್ಕೆ, ಉತ್ತಮ ಸರ್ಕಾರ ರಚನೆಗೆ ಸಹಕರಿಸಬೇಕು ಎಂದು ತಿಳಿಸಿದರು.

ತಾಪಂ ಇಒ ಸುನೀಲ್ ಕುಮಾರ್ ಮಾತನಾಡಿ ದೇಶದ ಭವಿಷ್ಯ ಪ್ರತಿ ಮಾತದಾರ ನೀಡುವ ಮತದ ಮೇಲೆ ನಿಂತಿದೆ. ಏಪ್ರಿಲ್ 26ರಂದು ಸರ್ಕಾರದ ರಜೆ ಘೋಷಣೆಯಾಗಿದ್ದು ಪ್ರಜಾ ಪ್ರಭುತ್ವ ವ್ಯವಸ್ಥೆ - ಲೋಕಸಭೆ ಚುನಾವಣೆ ನಾಡಹಬ್ಬಅಸಡ್ಡೆ ಮಾಡದೆ, ಯಾವುದೇ ಆಸೆ , ಆಮಿಷಗಳಿಗೆ, ಒತ್ತಡಗಳಿಗೆ ಮಣಿಯದೆ ಎಲ್ಲರೂ ಅತ್ಯಂತ ಸಡಗರದಿಂದ ತಮ್ಮ ಅಮೂಲ್ಯ ಮತ ಯೋಗ್ಯ ಅಭ್ಯರ್ಥಿಗಳಿಗೆ ನೀಡಬೇಕು ಎಂದು ತಿಳಿಸಿದರು.

ಇದೆ ವೇಳೆ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಶಿಕ್ಷಣಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಿದರು.

ಈ ವೇಳೆ ಸಹಾಯಕ ಚುನಾವಣೆ ಅಧಿಕಾರಿ ಮಹೇಂದ್ರ ಕುಮಾರ್, ಸಹಾಯಕ ಕೃಷಿ ಸಹಾಯಕ ನಿರ್ದೇಶಕ ಸಿ.ಎಸ್. ಈಶ, ಪುರಸಭೆ ಮುಖ್ಯ ಅಧಿಕಾರಿ ತಿಮ್ಮರಾಜು, ಸಕಾ೯ರಿ ಶಿಕ್ಷಕರ ತರಬೇತಿ ಸಂಸ್ಥೆ ಪ್ರಾಚಾರ್ಯ ಎಂ.ಎಸ್. ನಟರಾಜ್, ಉಪನ್ಯಾಸಕರಾದ ಶಶಿಧರ , ಅಜ್ಜಯ್ಯ, ಆರ್. ಲಕ್ಷ್ಮಯ್ಯ, ಲತಾ, ಮಮತಾ, ಬೀದಿ ನಾಟಕದ ನಿರ್ದೇಶಕ ಪೀಲಾಪುರ ಆರ್. ಕಂಠೇಶ್ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.