ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂತಾಮಣಿ
ಚುನಾವಣೆಗಳಲ್ಲಿ ನಮ್ಮ ಸಂಬಂಧಿಕರು, ಅಕ್ಕಪಕ್ಕದ ಮನೆಯವರು ಬೇಕಾದವರೆಂದು ನೋಡುತ್ತೇವೆ. ಆದರೆ ಇದು ದೇಶದ ಚುನಾವಣೆ ದೇಶದ ರಕ್ಷಣೆಗಾಗಿ ನಡೆಯುತ್ತಿರುವ ಚುನಾವಣೆ ಆದರಿಂದ ಪ್ರತಿಯೊಬ್ಬರು ದೇಶ ರಕ್ಷಣೆ ಮಾಡುವ ಮೋದಿ ಸರ್ಕಾರಕ್ಕೆ ಮತ ನೀಡಿ ಅವರನ್ನು 3ನೇ ಬಾರಿಗೆ ಪ್ರಧಾನಿ ಮಾಡಬೇಕೆಂದು ಮಾಜಿ ಸಚಿವ ಸಿಟಿ.ರವಿ ಮನವಿ ಮಾಡಿದರು.ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಕೈವಾರದಲ್ಲಿ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ ಪಂಚಾಯಿತಿ ಚುನಾವಣೆ ಬಂದಾಗ ನಮ್ಮ ಸಂಬಂಧಿಕರನ್ನು ನೋಡ್ತಿವಿ ದೇಶದ ಚುನಾವಣೆ ಬಂದಾಗ ಬಡಬಗ್ಗರ ಅಭಿವೃದ್ಧಿಗೆ ಒತ್ತು ಕೊಡುವವರನ್ನು ಮತ್ತು ದೇಶ ರಕ್ಷಣೆ ಮಾಡುವವರಿಗೆ ಮತ ನೀಡಬೇಕೆಂದರು.
ಕೊರೋನ ಸಂದರ್ಭದಲ್ಲಿ ದೇಶದ ಬಡಬಗ್ಗರು ಕೂಲಿನಾಲಿ ಇಲ್ಲದೆ ಹಸಿವಿನಿಂದ ನರಳಬಾರದೆಂದು ಮೋದಿ ಸರ್ಕಾರ ಉಚಿತವಾಗಿ ೧೦ ಕೆ.ಜಿ ಅಕ್ಕಿ ನೀಡಿದೆ ಅದೇ ಅಕ್ಕಿನೇ ಈಗಲೂ ಸಹ 5 ಕೆಜಿ ನೀಡಲಾಗುತ್ತಿದೆ. ಆದರೆ ಕಾಂಗ್ರೆಸ್ ಸರ್ಕಾರ ಇದನ್ನೆ ತಮ್ಮ ಗ್ಯಾರಂಟಿ ಯೋಜನೆಯೆಂದು ೧ ಕೆಜಿ ಅಕ್ಕಿನೂ ಕೊಡದೆ ೫ ಕೆಜಿಗೆ ಹಣ ನೀಡಿ ಎಲ್ಲಾ ಉಚಿತವೆಂದು ಘೋಷಣೆ ಮಾಡಿ ನಾವೇ ಕೊಟ್ಟಿದೆಂದು ಸಿದ್ದರಾಮಯ್ಯ ಹೇಳುತ್ತಾರೆ ಬಹುಶಃ ಅವರನ್ನು ನೋಡಿಯೇ "ಯಾರದೊ ದುಡ್ಡು ಯಲ್ಲಮ್ಮನಜಾತ್ರೆ " ಎಂಬ ಗಾದೆ ಮಾತು ಹೇಳಿರಬಹುದೆಂದು ವ್ಯಂಗವಾಡಿದರು.ಬಡವರಿಗೆ ಜನಧನ್ ಖಾತೆ ತೆರೆದು ಬ್ಯಾಂಕ್ ಮೆಟ್ಟಿಲೇರಿಸಿದ್ದು , ಶೌಚಾಲಯ ಮುಕ್ತ ರಾಷ್ಟ್ರ ಮಾಡಿದ್ದು, ಜಲಜೀವನ್ ಮಿಷನ್ ಮೂಲಕ ಮನೆಮನೆಗೆ ಗಂಗೆ ಯೋಜನೆಯನ್ನು ಜಾರಿ ಮಾಡಿದ್ದಾರೆ ಕಾಮಗಾರಿ ಪ್ರಗತಿಯಲ್ಲಿದೆ, ಜನೌಷಧಿ, ಜನರ ಜೀವ ಉಳಿಯಲೆಂದು ಉಚಿತ ಲಸಿಕೆ ಕೊಟ್ಟರು, ಆಯುಷ್ಮಾನ್ ಭಾರತ್ ಯೋಜನೆಯಿಂದ ಆರೋಗ್ಯ ರಕ್ಷಣೆಗೆ ಒತ್ತು ಕೊಟ್ಟಿದ್ದು ಮೋದಿ, ೧೨ ರೂಪಾಯಿಗೆ ೨ ಲಕ್ಷ ಜೀವ ವಿಮೆ ಜಾರಿಮಾಡಿದ್ದು ಮೋದಿ, ಇಷ್ಟೆಲ್ಲ ಯೋಜನೆಗಳನ್ನು ಕೊಟ್ಟ ಮೋದಿ ಸರ್ಕಾರಕ್ಕೆ ಮತ ನೀಡುವ ಮೂಲಕ ಮತ್ತೊಮ್ಮೆ ಅವರನ್ನು ಅಧಿಕಾರದಲ್ಲಿ ಮುಂದುವರೆಸಬೇಕೆಂದರು.
ಕಾಂಗ್ರೆಸ್ ಬಂದ ಮೇಲೆ ಭಯೋತ್ವಾದನೆ ಹೆಚ್ಚು:ಕಾಂಗ್ರೆಸ್ ಸರ್ಕಾರ ಬಂದು ೧ ವರ್ಷ ಕಳೆದಿಲ್ಲ ಆಗಲ್ಲೆ ರಾಜ್ಯದಲ್ಲಿ ಬಾಂಬ್ ಹಾಕುವವರ ಸಂಖ್ಯೆ ಹೆಚ್ಚಾಯಿತು ಅದಕ್ಕೆ ಬಾಂಬ್ ಹಾಕುವವರನ್ನು ಬೆಳೆಸುವ ಸರ್ಕಾರ ನಮಗೆ ಬೇಡ ಬಾಂಬ್ ಹಾಕುವವರನ್ನು ಮಟ್ಟ ಹಾಕುವ ಸರ್ಕಾರ ನಮಗೆ ಬೇಕಾಗಿದ್ದು ಈ ನಿಟ್ಟಿನಲ್ಲಿ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್‌ಬಾಬುರಿಗೆ ಹೆಚ್ಚಿನ ಮತ ಕೊಟ್ಟು ಗೆಲ್ಲಿಸಬೇಕೆಂದರು.
ಈ ಹಿಂದೆ ರೈತರು ಟಿ.ಸಿ. ಹಾಕಿಸಕೊಳ್ಳಬೇಕಾದರೆ ೧೦ ಸಾವಿರ ಇದ್ದರೆ ಸಾಕಾಗಿತ್ತಾದರೂ ಇದೀಗ ೩-೪ ಲಕ್ಷ ಬೇಕಾಗಿದ್ದು ಇದು ಕಾಂಗ್ರೆಸ್ ಗ್ಯಾರಂಟಿನಾ ಎಂದು ಪ್ರಶ್ನಿಸಿದ ಅವರು ೨೦-೩೦ ರೂ ಇದ್ದ ಛಾಪಾಕಾಗದ ಬೆಲೆಯನ್ನು ೧೦೦-೨೦೦ರೂಗಳಿಗೆ ಏರಿಸಿದ್ದು ಇಂತಹ ಸರ್ಕಾರವನ್ನು ಏನೆಂದು ಕರೆಯಬೇಕು ಪಿಕ್ ಪ್ಯಾಕೇಟ್ ಸರ್ಕಾರನೋ ಇಲ್ಲ ದರೋಡೆ ಸರ್ಕಾರವೋ ಎಂದು ಕಿಡಿಕಾರಿದರು.ಹೆಚ್ಚು ಅಂತರಗಳಿಂದ ಗೆಲ್ಲಬೇಕು:ಕೋಲಾರ ಕ್ಷೇತ್ರದಲ್ಲಿ ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎಂಬಂತೆ ಕಾಂಗ್ರೆಸ್ ಟಿಕೇಟ್ ವಿಚಾರದಲ್ಲಿದಲ್ಲಾಗಿದ್ದು, ಅಭ್ಯರ್ಥಿಯನ್ನು ಬೆಂಗಳೂರಿನಿಂದ ಕರೆ ತಂದಿದ್ದಾರೆ ಅವರ ಅಡ್ರಸ್ ಇಲ್ಲ ಅವರಿಗಾಗಿ ಅಡ್ಡಾಡಬೇಕು ಅದಕ್ಕೆ ಸ್ಥಳಿಯರಾದ ಮಲ್ಲೇಶ್ ಬಾಬುರಿಗೆ ಮತ ನೀಡಿ ಹೆಚ್ಚಿನ ಮತಗಳ ಅಂತರದಿಂದ ಅವರನ್ನು ಗೆಲ್ಲಿಸಬೇಕೆಂದರು.
ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಮಾತನಾಡಿ ನಾನು ಜೀವನದಲ್ಲಿ ಅನೇಕ ಚುನಾವಣೆ ಗಳನ್ನು ಎದುರಿಸಿದ್ದೇನೆ ಒಂದೊಂದು ಚುನಾವಣೆಯೂ ಬಹಳಷ್ಟು ಮಹತ್ವದ ಚುನಾವಣೆ, ಈಗ ಲೋಕಸಭಾ ಚುನಾವಣೆ ಲೋಕನಾಯಕನಿಗಾಗಿ ಚುನಾವಣೆ ನಡೆಯುತ್ತಿದೆ. ಇಡೀ ಜಗತ್ತು ನರೇಂದ್ರ ಮೋದಿ ಅವರನ್ನು ಮೆಚ್ಚುತ್ತಿದೆ. ಸ್ವಾತಂತ್ರ‍್ಯ ಬಂದ ನಂತರ ಸಾಕಷ್ಟು ಬದಲಾವಣೆ ಆಗಿದೆ. ಅವರ ಆಡಳಿತ ಹೇಗಿದೆ ಎಂಬುವುದು ಕಳೆದ ೧೦ ವರ್ಷಗಳಿಂದ ನೋಡಿದ್ದೇವೆ. ಈಗ ಮೂರನೇ ಬಾರಿ ಮೋದಿ ಪ್ರದಾನಿಯಾಗಬೇಕು.ದೇಶದ ಅಭಿವೃದ್ಧಿಗೆ ಹೆಚ್ಚು ಶ್ರಮವಹಿಸುವ ನಾಯಕ ನರೇಂದ್ರ ಮೋದಿಯವರಾಗಿದ್ದಾರೆ. ನಮ್ಮ ದೇಶದಲ್ಲಿ ಅಲ್ಲದೇ ಹೊರ ದೇಶಗಳಿಲ್ಲಿಯೂ ಅವರಿಗೆ ಅಪಾರ ಗೌರವ ಇದೆ. ಮೋದಿ ಅವರ ಪಾಲನೆ ನಾವೆಲ್ಲಾ ತಿಳಿದು ಕೊಳ್ಳಬೇಕಾಗಿದೆ. ನಾವೆಲ್ಲಾ ಮೋದಿ ಮೂರನೇ ಬಾರೀ ಪ್ರಧಾನಿಯಾಗಬೇಕೆಂದು ಸಂಕಲ್ಪ ಮಾಡಬೇಕಾಗಿದೆ. ಕೋವಿಡ್ ಸಂದರ್ಭದಲ್ಲಿ ೧೧ ಸಾವಿರ ಜನ ಔಷದಿ ಕೇಂದ್ರಗಳನ್ನು ತೆರೆದಿದ್ದಾರೆ. ಇದರಿಂದ ಬಡವರಿಗೆ ಕಡಿಮೆ ಬೆಲೆ ಔಷದಿ ಸಿಗುತ್ತಿದೆ. ಆದರಿಂದ ಈ ಬಾರೀ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬುರಿಗೆ ಮತ ನೀಡಿ ಮೋದಿರವರ ಕೈಯನ್ನು ನಾವೆಲ್ಲರು ಬಲಪಡಿಸಬೇಕಾಗಿದೆಯೆಂದರು.
ಕೈವಾರ ಗ್ರಾಪಂ ಕೇಂದ್ರಕ್ಕೆ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್ ಬಾಬುರ ಪರವಾಗಿ ಮತಯಾಚನೆ ಮಾಡಲು ಬಂದಾಗ ಸಿ.ಟಿ.ರವಿ ಹಾಗೂ ಜೆಡಿಎಸ್, ಬಿಜೆಪಿ ಮುಖಂಡರಿಗೆ ಕಾರ್ಯಕರ್ತರು, ಮಹಿಳೆಯರು ಸ್ವಾಗತವನ್ನು ಕೋರಿದರು.ಈ ವೇಳೆ ಮುಖಂಡರಾದ ಕೈವಾರ ಸುಬ್ಬಾರೆಡ್ಡಿ, ಬನಹಳ್ಳಿ ರವಿ, ಗುಡಾರ್ಲಹಳ್ಳಿ ರಾಜಣ್ಣ, ಮಂಜುನಾಥಚಾರಿ, ಗ್ರಾಪಂ ಅದ್ಯಕ್ಷೆ ಉಮಾದೇವಿ, ಮಾಜಿ ಜಿಪಂ ಸದಸ್ಯ ಷೇಕ್‌ಮೌಲಾ, ಗುಡೇ ಶ್ರೀನಿವಾಸರೆಡ್ಡಿ, ಬನಹಳ್ಳಿ ಮಂಜು, ತಳಗವಾರ ಪ್ರತಾಪ್, ಮಹೇಶ್ ಬೈ, ಡಾಬಾ ಮಂಜು, ಬ್ಯಾಲಹಳ್ಳಿ ಆಂಜನೇಯ ರೆಡ್ಡಿ, ಎಲ್ಲಾ ಗ್ರಾಪಂ ಸದಸ್ಯರು ಕೈವಾರ ಜೆಡಿಎಸ್, ಬಿಜೆಪಿ ಪಕ್ಷದ ಮುಖಂಡರು ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.