ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್‌ಗೆ ಗೆಲ್ಲಿಸಿ: ಶಾಸಕ ಸಿದ್ದು ಪಾಟೀಲ್‌

| Published : May 23 2024, 01:13 AM IST

ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್‌ಗೆ ಗೆಲ್ಲಿಸಿ: ಶಾಸಕ ಸಿದ್ದು ಪಾಟೀಲ್‌
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕು ಬಿಜೆಪಿಯಲ್ಲಿ ಸೃಷ್ಟಿಯಾದ ಭಿನ್ನಾಭಿಪ್ರಾಯ ತೊಲಗಿಸಿ ಪಕ್ಷದ ಹೆಸರಿನಲ್ಲಿ ಕೆಲಸ ಮಾಡಿ ವ್ಯಕ್ತಿಗಿಂತ ಪಕ್ಷ ಮುಖ್ಯವಾದದ್ದು ಎಂದು ಔರಾದ್‌ನಲ್ಲಿ ನಡೆದ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆ ಸಭೆಯಲ್ಲಿ ಹುಮನಾಬಾದ ಶಾಸಕ ಸಿದ್ದು ಪಾಟೀಲ್ ನುಡಿದರು.

ಕನ್ನಡಪ್ರಭ ವಾರ್ತೆ ಔರಾದ್

ಈ ಚುನಾವಣೆ ಪ್ರಜ್ಞಾವಂತರ ಹಾಗೂ ಪದವೀಧರರ ಚುನಾವಣೆಯಾಗಿದ್ದು ಹೆಚ್ಚಿನ ಮತದಾನ ಮಾಡಿ ಪ್ರಚಂಡ ಬಹುಮತದಿಂದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಅವರನ್ನು ಗೆಲ್ಲಿಸಿ ಪದವೀಧರರ ಅಭಿವೃದ್ಧಿಗೆ ಕೈಜೋಡಿಸಿ ಎಂದು ಈಶಾನ್ಯ ಪದವೀಧರರ ಮತಕ್ಷೇತ್ರದ ತಾಲೂಕು ಪ್ರಭಾರಿ ಹುಮನಾಬಾದ ಶಾಸಕ ಸಿದ್ದು ಪಾಟೀಲ್ ನುಡಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ಚುನಾವಣೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮಾಡಿರುವ ಕಾಂಗ್ರೆಸ್ ಸರ್ಕಾರದ ಕೆಲಸ ಶೂನ್ಯವಾಗಿದೆ. ಅವರು ಗೆದ್ದು ಮೂರು ನಾಲ್ಕು ಆಯುರ್ವೇದಿಕ ಕಾಲೇಜುಗಳು ಸ್ವಂತಕ್ಕೆ ಮಾಡಿಕೊಂಡಿದ್ದಾರೆ. ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್, ತಾಲೂಕಿನಲ್ಲಿ ಕಚೇರಿ ನಿರ್ಮಾಣ ಮಾಡಿ ತಾಲೂಕಿಗೆ ದತ್ತು ತೆಗೆದುಕೊಳ್ಳುವ ಭರವಸೆ ನೀಡಿದರು. ಗೆದ್ದ ಮೇಲೆ ತಾಲೂಕಿಗೆ ಬಂದಿಲ್ಲ. ಕಾಂಗ್ರೆಸ್ ಕಾರ್ಯಕರ್ತರ ಮುಖ ನೋಡಿಲ್ಲ. ಅಭ್ಯರ್ಥಿ ಚಂದ್ರಶೇಖರ್ ಪಾಟೀಲ್ ಕೂಡಾ ಸ್ವಂತಕ್ಕೆ ತುಂಬಿಕೊಂಡಿದ್ದಾರೆ ಎಂದು ಆರೋಪಿಸಿದರು.

ತಾಲೂಕು ಬಿಜೆಪಿಯಲ್ಲಿ ಸೃಷ್ಟಿಯಾದ ಭಿನ್ನಾಭಿಪ್ರಾಯ ತೊಲಗಿಸಿ ಪಕ್ಷದ ಹೆಸರಿನಲ್ಲಿ ಕೆಲಸ ಮಾಡಿ ವ್ಯಕ್ತಿಗಿಂತ ಪಕ್ಷ ಮುಖ್ಯವಾದದ್ದು ಎಂದು ನುಡಿದರು.

ಅದೇ ರೀತಿ ಔರಾದ ಮಂಡಲ ಅಧ್ಯಕ್ಷ ರಾಮಶೇಟ್ಟಿ ಪನ್ನಾಳೆ ಪ್ರಾಸ್ತಾವಿಕ ಮಾತನಾಡಿದರು. ವಿಧಾನ ಪರಿಷತ್ ಚುನಾವಣೆ ಔರಾದ್‌ ತಾಲೂಕು ಸಂಚಾಲಕರಾಗಿ ಪ್ರಕಾಶ ಅಲಮಾಜೆ, ಸಹ ಸಂಚಾಲಕರಾಗಿ ಶರಣಪ್ಪ ಪಂಚಾಕ್ಷರಿ ನೇಮಕ ಮಾಡಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ ಪಾಟೀಲ್ ಮಾತನಾಡಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಖಂಡೊಬಾ ಕಂಗಟೆ ನಿರೂಪಿಸಿದರು, ಬಂಟಿ ರಾಮಪುರೆ ಸ್ವಾಗತಿಸಿದರು, ಶಿವರಾಜ ಅಲಮಾಜೆ, ರಮೇಶ ಬಿರಾದಾರ, ಪಪಂ ಸದಸ್ಯ ಸಂಜು ವಡಿಯಾರ, ಬಸವರಾಜ ಹಳ್ಳೆ, ವೆಂಕಟರಾವ್ ಡೊಂಬಾಳೆ, ದಯಾನಂದ ಹಳಿಖೇಡೆ, ಬಾಲಾಜಿ ತೆಲಂಗ, ಬಸವರಾಜ ಪಾಟೀಲ್, ಶಿವಾಜಿರಾವ ಕಾಳೆ, ಶಿವಕುಮಾರ್ ಪಾಂಚಾಳ, ಸಂತೋಷ ಬಾರೊಳೆ, ಉದಯ ಸೋಲಾಪುರೆ ಸೇರಿದಂತೆ ಇನ್ನಿತರರಿದ್ದರು.