ಮೋದಿಜೀ ಕೈಬಲಪಡಿಸಲು ಬಿಜೆಪಿ ಮತ ನೀಡಿ: ಪಿ.ಸಿ. ಗದ್ದಿಗೌಡರ

| Published : Apr 27 2024, 01:17 AM IST

ಮೋದಿಜೀ ಕೈಬಲಪಡಿಸಲು ಬಿಜೆಪಿ ಮತ ನೀಡಿ: ಪಿ.ಸಿ. ಗದ್ದಿಗೌಡರ
Share this Article
  • FB
  • TW
  • Linkdin
  • Email

ಸಾರಾಂಶ

ತೇರದಾಳ: ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಅವರು ಶಾಸಕ ಸಿದ್ದು ಸವದಿ ಅವರೊಂದಿಗೆ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಮೂಲಕ ಸಾಗಿ ಕರಪತ್ರ ವಿತರಿಸಿ ಮತಯಾಚಿಸಿದರು.

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಅವರು ಶಾಸಕ ಸಿದ್ದು ಸವದಿ ಅವರೊಂದಿಗೆ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಮೂಲಕ ಸಾಗಿ ಕರಪತ್ರ ವಿತರಿಸಿ ರಾಷ್ಟ್ರದ ಅಭಿವೃದ್ಧಿಗಾಗಿ, ಮೋದಿಜೀ ಕೈಬಲಪಡಿಸಲು ತಮಗೆ ಮತ ನೀಡಬೇಕೆಂದು ಮನವಿ ಮಾಡಿದರು.

ಪಟ್ಟಣದ ಕಲ್ಲಟ್ಟಿ ಗಲ್ಲಿಯ ಗಂಗಾಧರ ಮಠದಿಂದ ಪಾದಯಾತ್ರೆ ಪ್ರಾರಂಭಿಸಿ, ಕಲ್ಲಟ್ಟಿ ಕಾಮಣ್ಣ ಕಟ್ಟೆ, ಮಾರುತಿ ಮಂದಿರ, ಎಸ್‌ಬಿಐ ವೃತ್ತ, ಪ್ರಭು ಮಹಾದ್ವಾರ, ವಿಠ್ಠಲ ಮಂದಿರ, ಪ್ರಭು ದೇವಸ್ಥಾನ, ಸಿದ್ಧೇಶ್ವರ ಗಲ್ಲಿ, ಅಲ್ಲಮಪ್ರಭು ಖಾದಿ ಭಂಡಾರ, ಜವಳಿ ಬಜಾರ್‌, ಅಂಚೆ ಕಚೇರಿ, ಜೋಳದ ಬಜಾರ್, ಐಸಿಐಸಿಐ ಬ್ಯಾಂಕ, ಗುಡ್ಡಿಗಲ್ಲಿ, ಪಾತ್ರೋಟ ಗಲ್ಲಿ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ಸೇರಿದಂತೆ ಪ್ರಮುಖ ಬೀದಿಗಳ ಮುಖಾಂತರ ರೇಣುಕಾ ಮಂದಿರದವರೆಗೆ ಪ್ರಚಾರ ನಡೆಸಿದರು. ಅಲ್ಲಲ್ಲಿ ಮಹಿಳೆಯರು ಅಭ್ಯರ್ಥಿ ಗದ್ದಿಗೌಡರ ಅವರಿಗೆ ಆರತಿ ಮಾಡಿ ಹರಸಿದರು. ಇದೇ ಸಂದರ್ಭದಲ್ಲಿ ಅಲ್ಲಮಪ್ರಭು ದರ್ಶನ ಪಡೆದರು.

ತೇರದಾಳ ಶಾಸಕ ಸಿದ್ದು ಸವದಿ, ಡಾ. ಎಂ.ಎಸ್. ದಾನಿಗೊಂಡ, ಸಿದ್ದು ಅಮ್ಮಣಗಿ, ಸುರೇಶ ಅಕಿವಾಟ, ಮಹಾವೀರ ಕೊಕಟನೂರ, ಸುರೇಶ ರೇಣಕೆ, ಬಾಳುದಾದಾ ದೇಶಪಾಂಡೆ, ಭುಜಬಲಿ ಕೆಂಗಾಲಿ, ರಾಮಣ್ಣ ಹಿಡಕಲ್, ಕೇದಾರಿ ಪಾಟೀಲ, ಅಪ್ಪು ಮಂಗಸೂಳಿ, ಲಕ್ಷ್ಮಣ ನಾಯಕ, ಬಸಪ್ಪ ಮುಕರಿ, ಡಾ.ಪುಷ್ಪದಂತ ದಾನಿಗೊಂಡ, ಅಲ್ಲಪ್ಪ ಬಾಬಗೊಂಡ, ಶಶಿಕಾಂತ ಹಜಾರೆ, ನಿಂಗಪ್ಪ ಮಾಲಗಾಂವಿ, ಶೀತಲ ಬೋಳಗೊಂಡ, ಸಂತೋಷ ಅಕ್ಕೆನ್ನವರ, ಸಂತೋಷ ಜಮಖಂಡಿ, ಸಂಗಮೇಶ ಕಾಲತಿಪ್ಪಿ, ಕಾಶಿನಾಥ ರಾಠೋಡ, ಶ್ರೀಶೈಲ ಮೋದಿ, ಆನಂದ ಮಧುಮಲಿ, ನಿಂಗಪ್ಪ ನಿಲಜಗಿ, ಪ್ರವೀಣ ತುಬಚಿ, ದಶರಥ ಅಕ್ಕೆನ್ನವರ, ರಮೇಶ ಧರೆಣ್ಣವರ, ಸದಾಶಿವ ಹೊಸಮನಿ, ಶೀತಲ ಘೂಳನ್ನವರ, ಸತ್ಯಪ್ಪ ಚವಜ, ಡಾ.ಬಸವರಾಜ ಭುಜಕ್ಕನವರ ಸೇರಿದಂತೆ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.