ಪಾವಗಡ ತಾಲೂಕಿನ ಅಭಿವೃದ್ಧಿಗಾಗಿ ಕಾಂಗ್ರೆಸ್‌ಗೆ ಮತ ಹಾಕಿ

| Published : Apr 17 2024, 01:15 AM IST

ಸಾರಾಂಶ

167 ಕೋಟಿ ವೆಚ್ಚದಲ್ಲಿ ಗಡಿಯ ತಾಲೂಕಿನ ಲಿಂಗದಹಳ್ಳಿ ಹಾಗೂ ಸಾಸಲಕುಂಟೆ ಡಾಂಬರೀಕರಣ, 4 ಲಕ್ಷ ವೆಚ್ಚದಲ್ಲಿ ಎಸ್‌ಸಿ ಕಾಲೋನಿ ಸಮುದಾಯ ಭವನ ಹಾಗೂ ಭೋವಿ ಹಾಗೂ ಎಸಿ ಕಾಲೋನಿಯ ಸಂಪರ್ಕ ರಸ್ತೆ ಪ್ರಗತಿ ಸೇರಿದಂತೆ 10 ಲಕ್ಷ ವೆಚ್ಚದ ಸಿಸಿ ರಸ್ತೆ ನಿರ್ಮಿಸುವ ಮೂಲಕ ಈ ಭಾಗದ ಪ್ರಗತಿಗೆ ಹೆಚ್ಚು ಅದ್ಯತೆ ನೀಡಲಾಗಿದೆ

ಕನ್ನಡಪ್ರಭ ವಾರ್ತೆ ಪಾವಗಡ

167 ಕೋಟಿ ವೆಚ್ಚದಲ್ಲಿ ಗಡಿಯ ತಾಲೂಕಿನ ಲಿಂಗದಹಳ್ಳಿ ಹಾಗೂ ಸಾಸಲಕುಂಟೆ ಡಾಂಬರೀಕರಣ, 4 ಲಕ್ಷ ವೆಚ್ಚದಲ್ಲಿ ಎಸ್‌ಸಿ ಕಾಲೋನಿ ಸಮುದಾಯ ಭವನ ಹಾಗೂ ಭೋವಿ ಹಾಗೂ ಎಸಿ ಕಾಲೋನಿಯ ಸಂಪರ್ಕ ರಸ್ತೆ ಪ್ರಗತಿ ಸೇರಿದಂತೆ 10 ಲಕ್ಷ ವೆಚ್ಚದ ಸಿಸಿ ರಸ್ತೆ ನಿರ್ಮಿಸುವ ಮೂಲಕ ಈ ಭಾಗದ ಪ್ರಗತಿಗೆ ಹೆಚ್ಚು ಅದ್ಯತೆ ನೀಡಲಾಗಿದೆ. ಇನ್ನೂ ಹೆಚ್ಚಿನ ಪ್ರಗತಿಗೆ ಕಾಂಗ್ರೆಸ್‌ ಅಭ್ಯರ್ಥಿ ಚಂದ್ರಪ್ಪರನ್ನು ಗೆಲ್ಲಿಸಿ ಎಂದು ಶಾಸಕ ಎಚ್‌.ವಿ.ವೆಂಕಟೇಶ್‌ ಕರೆ ನೀಡಿದರು.

ಅವರು ಮಂಗಳವಾರ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪರ ಪರ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದರು. ಲಿಂಗದಹಳ್ಳಿ ವೃತ್ತದಲ್ಲಿ ತಂಗುದಾಣ ಹಾಗೂ ಶೌಚಾಲಯ ನಿರ್ಮಾಣಕ್ಕೆ 12 ಲಕ್ಷ ರು. ಬಿಡುಗಡೆ ಮಾಡಲಾಗಿದೆ. ರೈಲ್ವೆ ಪ್ರಗತಿ, ಎತ್ತಿನ ಹೊಳೆ ಭದ್ರಾ ಮೇಲ್ದಂಡೆ, ತುಂಗಭದ್ರಾ ಯೋಜನೆ ಕಾಂಗ್ರೆಸ್‌ ಕಾಲದಲ್ಲಿ ಅನುಷ್ಠಾನವಾಗಿದ್ದು, ಇನ್ನೂ 4 ತಿಂಗಳ ಒಳಗೆ ತುಂಗಭದ್ರಾ ಕುಡಿವ ನೀರು ಯೋಜನೆಗೆ ಚಾಲನೆ ನೀಡಲಾಗುವುದು. ನನಗೆ ಚಂದ್ರಪ್ಪ ಹಾಗೂ ಮುದ್ದಹನುಮೇಗೌಡರ ಸಹಕಾರದ ಅಗತ್ಯವಿದೆ. ಈ ಭಾಗದ ಪ್ರಗತಿಗೆ ಕಾಂಗ್ರೆಸ್‌ಗೆ ಹೆಚ್ಚು ಮತ ನೀಡುವ ಮಾಡುವ ಮೂಲಕ ಚಂದ್ರಪ್ಪರನ್ನು ಗೆಲ್ಲಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಮಾಜಿ ಸಚಿವ ವೆಂಕಟರಮಣಪ್ಪ ಮಾತನಾಡಿ, ತಾವು ಶಾಸಕರಾಗಿದ್ದ ವೇಳೆ ಲಿಂಗದಹಳ್ಳಿ ಭಾಗದ ಸುತ್ತಮುತ್ತಲ ಗ್ರಾಮಗಳ ಪ್ರಗತಿಗೆ ಹೆಚ್ಚು ಸಹಕರಿಸಿದ್ದೇನೆ. ಕೋಟ್ಯಂತರ ರು.ವೆಚ್ಚದ ರಸ್ತೆ, ಶಾಲಾ ಕಾಲೇಜು ಸಮುದಾಯ ಭವನಗಳ ನಿರ್ಮಾಣ, ಸಿಸಿ ರಸ್ತೆಗೆ ವಿಶೇಷ ಒತ್ತು ನೀಡಿದ್ದೇನೆ. ಪ್ರಗತಿಗೆ ಕಾಂಗ್ರೆಸ್‌ ಬೆಂಬಲಿಸಿ ಎಂದು ವಿನಂತಿಸಿಕೊಂಡರು.

ಈ ಹಿಂದಿನ ಈ ಭಾಗದ ಸಂಸದ ಎ.ನಾರಾಯಣಸ್ವಾಮಿ ಅಧಿಕಾರ ಅವಧಿಯಲ್ಲಿ ಯಾವುದೇ ರೀತಿಯ ಪ್ರಗತಿಗೆ ಪೂರಕ ವಾದ ಕೆಲಸ ಮಾಡಲಿಲ್ಲ. ಇವರ ಕಾಲದಲ್ಲಿ ಪ್ರಗತಿ ಶೂನ್ಯದಲ್ಲಿದೆ. 5 ವರ್ಷದ ಕಾಲ ಬರೀ ಸುಳ್ಳಿನಲ್ಲಿಯೇ ಕಾಲಕಳೆದ ವಿಚಾರ ನಿಮಗೆ ಗೊತ್ತಿದೆ. ಈ ಹಿಂದೆ ರಂಗಸಮುದ್ರ ಗ್ರಾಮದ ಕಾರ್ಯಕ್ರಮದಲ್ಲಿ ಸಂಸದ ಎ.ನಾರಾಯಣಸ್ವಾಮಿಗೆ ಹೇಳಿದ್ದೆ. ಪ್ರಗತಿಗೆ ಅದ್ಯತೆ ನೀಡಿ ಇಲ್ಲವಾದರೆ ಬಿಗ್‌ ಜಿರೋ ಆಗುತ್ತಿರಾ ಅಂತಾ. ಆದೇ ರೀತಿ ಯಾವುದೇ ಪ್ರಗತಿ ಸಾಧಿಸಲಿಲ್ಲ. ಜಿರೋ ಆಗಿದ್ದಾರೆಂದು ಲೇವಡಿ ಮಾಡಿದರು. ಅಭಿವೃದ್ಧಿ ವಿಚಾರದಲ್ಲಿ ರೈತ ಹಾಗೂ ಜನತೆಯನ್ನು ದಿಕ್ಕು ತಪ್ಪಿಸುತ್ತಾರೆ ಎಂದರು.

ಲಿಂಗದಹಳ್ಳಿ, ಅರಸೀಕೆರೆ, ಮಂಗಳವಾಡ, ಕೆ.ಟಿ.ಹಳ್ಳಿ, ಸಿ.ಕೆ.ಪುರ, ಗುಂಡರ್ಲಹಳ್ಳಿ, ಮುಗದಾಳಬೆಟ್ಟ, ಬ್ಯಾಡನೂರು ಪಾವಗಡದಲ್ಲಿ ರೋಡ್‌ ಶೋ ಮೂಲಕ ಮತಯಾಚಿಸಲಾಯಿತು. ಮುಖಂಡರಾದ ಸುದೇಶ್‌ಬಾಬು, ರಂಗೇಗೌಡ, ಕೆ.ಎಸ್‌.ಪಾಪಣ್ಣ, ವದನಕಲ್ಲು ನಾಗೇಂದ್ರ ನಾಯಕ, ನಾಗರಾಜಪ್ಪ, ಮಲ್ಲಣ್ಣ, ಶಂಕರರೆಡ್ಡಿ, ದೊಡ್ಡೇನಹಳ್ಳಿ ಮಾರಪ್ಪ, ಚಂದ್ರಶೇಖರರೆಡ್ಡಿ, ಸಣ್ಣರಾಮರೆಡ್ಡಿ, ತೆಂಗಿನಕಾಯಿ ರವಿ, ರಾಜೇಶ್‌, ಕರೆಕ್ಯಾತನಹಳ್ಳಿ ಮಂಜುನಾಥ್‌, ಕೆ.ಟಿ.ಹಳ್ಳಿ ರಾಮಾಂಜಿನಪ್ಪ, ಅರಸೀಕೆರೆ ಪುಟ್ಟಣ್ಣ ಇತರರಿದ್ದರು. ಮೋದಿ ಒಬ್ಬ ಸುಳ್ಳುಗಾರ, ಸುಳ್ಳಿನ ಜತೆಗೆ ಮಹಾಸುಳ್ಳುಗಾರ ಎಚ್‌.ಡಿ ಕುಮಾರಸ್ವಾಮಿ ಕೈಜೋಡಿಸಿದ್ದಾರೆ. ಜೆಡಿಎಸ್‌ ಬಿಜೆಪಿಗೆ ಬೆಂಬಲ ನೀಡಿದರೆ ಅಭಿವೃದ್ಧಿ ಶೂನ್ಯ. ಜೆಡಿಎಸ್‌-ಬಿಜೆಪಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು.

ಎಚ್‌.ವಿ.ವೆಂಕಟೇಶ್‌, ಶಾಸಕ