ಶಾಸಕ ಯಶವಂತರಾಯಗೌಡರ ಪೆನಲ್‌ಗೆ ಮತ ನೀಡಿ

| Published : Feb 11 2024, 01:50 AM IST

ಶಾಸಕ ಯಶವಂತರಾಯಗೌಡರ ಪೆನಲ್‌ಗೆ ಮತ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ಹಾಲುಮತ ಸಮಾಜದ ಶೇರುದಾರರು ಯಾರ ಮಾತಿಗೂ ಕಿವಿಗೊಡಬೇಡಿ, ನ್ಯಾಯ, ನೀತಿ, ಸತ್ಯದ ಪರವಾಗಿರುವ ಶಾಸಕರ ಪೆನಲ್‌ಗೆ ಮತ ನೀಡಬೇಕು

ಕನ್ನಡಪ್ರಭ ವಾರ್ತೆ ಇಂಡಿ

ಫೆ.11ಕ್ಕೆ ನಡೆಯುವ ನಿರ್ದೇಶಕ ಮಂಡಳಿಯ ಚುನಾವಣೆಯಲ್ಲಿ ಶೇರು ಹೊಂದಿರುವ ಹಾಲುಮತ ಮತದಾರ ಬಂಧುಗಳು ಶಾಸಕ ಯಶವಂತರಾಯಗೌಡ ಪಾಟೀಲ ಪೆನಲ್‌ಗೆ ಮತ ನೀಡಬೇಕು ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಗುರಣ್ಣಗೌಡ ಪಾಟೀಲ ಹಾಗೂ ಹಾಲುಮತ ಸಮಾಜದ ಮುಖಂಡ ಜಟ್ಟೆಪ್ಪ ಮನವಿ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಾಲುಮತ ಸಮಾಜದ ಶೇರುದಾರರು ಯಾರ ಮಾತಿಗೂ ಕಿವಿಗೊಡಬೇಡಿ, ನ್ಯಾಯ, ನೀತಿ, ಸತ್ಯದ ಪರವಾಗಿರುವ ಶಾಸಕರ ಪೆನಲ್‌ಗೆ ಮತ ನೀಡಬೇಕು ಎಂದರು.

ಮರಗೂರ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಮಂಡಳಿಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರು ಹಾಲುಮತ ಸಮಾಜಕ್ಕೆ 2 ಬಾರಿ ನ್ಯಾಯ ಒದಗಿಸಿದ್ದಾರೆ. ಹಾಲುಮತ ಸಮಾಜದ ಜಟ್ಟೆಪ್ಪ ರವಳಿಗೆ ಸ್ಥಾನ ನೀಡಿದ್ದಾರೆ. ಆಡಳಿತ ಮಂಡಳಿ ಮೊದಲ ಹಾಗೂ 2ನೇ ಚುನಾವಣೆಯಲ್ಲಿ ಹಾಲುಮತ ಸಮಾಜಕ್ಕೆ ಪ್ರಾಶಸ್ತ್ಯ ನೀಡಿದ್ದಾರೆ ಎಂದು ತಿಳಿಸಿದರು.

ಅವಿನಾಶ ಬಗಲಿ, ನೀಲಕಂಠ ರೂಗಿ, ನಿಂಗಣ್ಣ ಪೂಜಾರಿ ಮಾತನಾಡಿ, ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ಮಾಣದ ರೂವಾರಿ ಶಾಸಕ ಯಶವಂತರಾಯಗೌಡ ಪಾಟೀಲರು ಹಾಲುಮತ ಸಮಾಜಕ್ಕೆ ಕಾರ್ಖಾನೆಯಲ್ಲಿ 2 ಬಾರಿ ಸ್ಥಾನ ನೀಡಿ ನ್ಯಾಯ ಒದಗಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕರ ಪೆನಲ್ಗೆ ಮತ ನೀಡುವಂತೆ ಕೋರಿದರು.

ಗೋಷ್ಠಿಯಲ್ಲಿ ಭೀಮಾಶಂಕರ ಸಾಹುಕಾರ, ಸಂಜು ಪೈಕಾರ, ಕೃಷ್ಣ ಅಚ್ಚೆಗಾರ, ಧರ್ಮಣ್ಣ ಅಲಬಗೊಂಡ, ಭೀರಪ್ಪ ಪೂಜಾರಿ, ಭಾಗಪ್ಪ ಇಚ್ಚೂರ, ಪುಂಡಲೀಕ ಅಲಬಗೊಂಡ, ಸುಭಾಷ ಅಚ್ಚೆಗಾರ, ಮಲ್ಲು ಪೂಜಾರಿ, ಯಲ್ಲಪ್ಪ ಪೂಜಾರಿ, ಭೀರಪ್ಪ ಪೂಜಾರಿ, ಸಾಹೇಬಗೌಡ ಪಾಟೀಲ, ರಾಮಣ್ಣ ಕಂಠಿಕಾರ, ಕಲ್ಲಪ್ಪ ರೂಗಿ, ಸಿದ್ದು ಗುಡ್ಲ, ಹಮಂತ್ರಾಯ ಪೂಜಾರಿ, ಬಸವರಾಜ ಕವಡಿ ಇದ್ದರು.