ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಅರ್ಹರಿಗೆ ಮತ ಚಲಾಯಿಸಿ

| Published : Apr 24 2024, 02:27 AM IST

ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಅರ್ಹರಿಗೆ ಮತ ಚಲಾಯಿಸಿ
Share this Article
  • FB
  • TW
  • Linkdin
  • Email

ಸಾರಾಂಶ

18 ವರ್ಷದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು ಎಂದು ತಾಪಂ ಇಒ ಹನುಮಂತಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ18 ವರ್ಷದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು ಎಂದು ತಾಪಂ ಇಒ ಹನುಮಂತಪ್ಪ ಹೇಳಿದರು.ನಗರದಲ್ಲಿ ಚುನಾವಣೆ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಸ್ವೀಪ್ ಸಮಿತಿ ಮತ್ತು ತಾಲೂಕು ಪಂಚಾಯಿತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ನಿರ್ಭೀತರಾಗಿ ಮತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮತದಾರ ಗಮನಸೆಳೆಯಲಾಗುತ್ತಿದೆ. ಮತದಾನ ನಮಗೆ ಸಂವಿಧಾನ ಕಲ್ಪಿಸಿರುವ ವಿಶೇಷ ಹಾಗೂ ಅಮೂಲ್ಯ ಹಕ್ಕಾಗಿದೆ. ಅದನ್ನು ವಿವೇಚನೆಯಿಂದ ಅರ್ಹರಿಗೆ ಚಲಾಯಿಸಬೇಕು ಎಂದರು. ಪೌರಾಯುಕ್ತ ರುದ್ರೇಶ್ ಮಾತನಾಡಿ, ಮತದಾರರು ಯಾವುದೇ ಆಮಿಷಕ್ಕೆ ಮರುಳಾಗದಿರಿ. ವಿವೇಚನೆಯಿಂದ ಮತ ಚಲಾಯಿಸುವುದು ನಮ್ಮಹಕ್ಕು. ದೇಶದ ಭವಿಷ್ಯ ನಿಮ್ಮ ಮತದ ಮೂಲಕ ನಿರ್ಧಾರವಾಗಲಿದೆ. ಹಾಗಾಗಿ ಮತ ಚಲಾಯಿಸಿ ಪ್ರಜಾಪ್ರಭುತ್ವ ಗೆಲ್ಲಿಸಿ. ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಹೇಳಿದರು. ಪಂಜಿನ ಮೆರವಣಿಗೆಯು ನಗರದ ತಾಲೂಕು ಪಂಚಾಯಿತಿಯಿಂದ ಪ್ರಾರಂಭವಾಗಿ ಅಂಬೇಡ್ಕರ್ ಸರ್ಕಲ್ ಮೂಲಕ ಪ್ರಮುಖ ರಸ್ತೆ, ಭಗವಾನ್ ಸರ್ಕಲ್ ಮೂಲಕ ಅಂಬೇಡ್ಕರ್ ರಸ್ತೆ, ಖಾಸಗಿ ಬಸ್ ನಿಲ್ದಾಣದ ಮೂಲಕ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮತದಾನದ ಜಾಗೃತಿ ಮೂಡಿಸಲಾಯಿತು. ಸಹಾಯಕ ಚುನಾವಣಾ ಅಧಿಕಾರಿ ಸೋಮಪ್ಪ ಕಡಕೋಳ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ತಾಪಂ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಡಿ.ವಿ.ವೆಂಕಟೇಶ್, ತಾಲೂಕು ಯೋಜನಾಧಿಕಾರಿ ರಂಗನಾಥ್ ಭಾಗವಹಿಸಿದ್ದರು.