ಸಾರಾಂಶ
ಸಹಿ ಸಂಗ್ರಹ ಅಭಿಯಾನಕ್ಕೆ ಶಾಸಕ ಕೋನರಡ್ಡಿ ಚಾಲನೆ
ಕನ್ನಡಪ್ರಭ ವಾರ್ತೆ ನವಲಗುಂದಲೋಕಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ನಡೆದ ಮತ ಕಳ್ಳತನದ ಆರೋಪವನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗಮನ ಸೆಳೆದಿದ್ದು “ವೋಟ್ ಚೋರ, ಗದ್ದಿ ಛೋಡ್” ಎಂಬ ಅಭಿಯಾನ ಪ್ರಾರಂಭಿಸಿದ್ದು, ಅವರ ಹೋರಾಟ ಬೆಂಬಲಿಸಿ ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಅಭಿಯಾನಕ್ಕೆ ಶಾಸಕ ಎನ್.ಎಚ್. ಕೋನರಡ್ಡಿ ಚಾಲನೆ ನೀಡಿದರು.
ಅವರು ಶನಿವಾರ ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಸಹಿ ಸಂಗ್ರಹ ಅಭಿಯಾನದಲ್ಲಿ ಮಾತನಾಡಿದ ಅವರು, ನವಲಗುಂದ ವಿಧಾನಸಭಾ ಕ್ಷೇತ್ರದ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕಿನ ಎಲ್ಲ ಬೂತ್‌ಗಳಲ್ಲಿ ಹೆಚ್ಚು ಸಹಿ ಸಂಗ್ರಹಣೆ ಮಾಡಲು ನಿರ್ಧರಿಸಲಾಗಿದೆ ಎಂದರು.ಕಳೆದ ಲೋಕಸಭಾ ಚುನಾವಣೆಯಲ್ಲಿ ಭಾರಿ ಸಂಖ್ಯೆಯಲ್ಲಿ ಮತಗಳ್ಳತನ ನಡೆದಿದೆ. ನಮ್ಮ ರಾಜ್ಯದ ಮಹಾದೇವಪುರ ಮತ್ತು ಆಳಂದ ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸುಳ್ಳು ಮತದಾರರನ್ನು ಸೇರ್ಪಡೆ ಮಾಡಿ ಒಂದು ಪಕ್ಷದ ಪರವಾಗಿ ಫಲಿತಾಂಶ ಬರುವ ಹಾಗೆ ಮಾಡಲು ಚುನಾವಣಾ ಆಯೋಗ ಕರ್ತವ್ಯ ನಿರ್ವಹಿಸುತ್ತಿದೆ ಎಂದು ರಾಹುಲ್ ಗಾಂಧಿ ಅವರು ಸಾಕ್ಷಿಗಳ ಸಮೇತ ಬಹಿರಂಗ ಪಡೆಸಿದ್ದಾರೆ. ನಮ್ಮ ಜಾತ್ಯತೀತ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಬೇಕಾಗಿದೆ ಎಂದರು.
ದೇಶಾದ್ಯಂತ “ವೋಟ್ ಚೋರ, ಗದ್ದಿ ಛೋಡ್” ವಿನೂತನ ಹೋರಾಟವನ್ನು ಹಮ್ಮಿಕೊಂಡಿದ್ದು ನವಲಗುಂದ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ 20 ಸಾವಿರಕ್ಕೂ ಹೆಚ್ಚು ಸಹಿ ಸಂಗ್ರಹ ಮಾಡಲು ಸೂಚನೆ ನೀಡಿದರು.ನವಲಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡರ, ವಿಜಯಪ್ಪಗೌಡ ಪಾಟೀಲ, ಪುರಸಭೆ ಸದಸ್ಯರಾದ ಮಂಜು ಜಾಧವ, ಅಪ್ಪಣ್ಣ ಹಳ್ಳದ, ಮಾಂತೇಶ ಭೋವಿ, ಮೊದೀನಸಾಭ ಶಿರೂರ, ಕಿರಣ ಉಳ್ಳಿಗೇರಿ, ಶಿವಾನಂದ ಚಿಕ್ಕನರಗುಂದ, ಎ.ಡಿ. ಕುಲಕರ್ಣಿ, ಸಂತೋಷಗೌಡ ಪಾಟೀಲ, ಎಂ.ಎಂ. ಮುಲ್ಲಾ, ರಾಜು ದೊಡ್ಡಮನಿ, ಶಿವಾನಂದ ಪಾಚಂಗಿ, ಬಸವರಾಜ ಈಟಿ ಸೇರಿ ಹಲವರಿದ್ದರು.