ಸಾರಾಂಶ
ದೇಶೆದೆಲ್ಲೆಡೆ ಭ್ರಷ್ಟಚಾರ, ಸುಳ್ಳು ಮೋಸಗಳು ಹೆಚ್ಚುತ್ತಿದ್ದು ಇವುಗಳು ನಿಯಂತ್ರಣಕ್ಕೆ ಬಂದು ನಮ್ಮ ಮುಂದಿನ ಪೀಳಿಗೆ ಒಳ್ಳೆಯದಾಗಬೇಕಾದರೆ ಪ್ರಜೆಗಳಾದ ನಾವೂ ಮನಸಾಕ್ಷಿ ಮತ್ತು ಜಾಗೃತಿಯಿಂದ ಮತದಾನ ಮಾಡಬೇಕಾಗಿದೆ ಎಂದು ಪ್ರಜಾ ಜಾಗೃತಿ ವೇದಿಕೆ ಮುಖಂಡರು ಹೇಳಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರದೇಶೆದೆಲ್ಲೆಡೆ ಭ್ರಷ್ಟಚಾರ, ಸುಳ್ಳು ಮೋಸಗಳು ಹೆಚ್ಚುತ್ತಿದ್ದು ಇವುಗಳು ನಿಯಂತ್ರಣಕ್ಕೆ ಬಂದು ನಮ್ಮ ಮುಂದಿನ ಪೀಳಿಗೆ ಒಳ್ಳೆಯದಾಗಬೇಕಾದರೆ ಪ್ರಜೆಗಳಾದ ನಾವೂ ಮನಸಾಕ್ಷಿ ಮತ್ತು ಜಾಗೃತಿಯಿಂದ ಮತದಾನ ಮಾಡಬೇಕಾಗಿದೆ ಎಂದು ಪ್ರಜಾ ಜಾಗೃತಿ ವೇದಿಕೆ ಮುಖಂಡರು ಹೇಳಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಹೊನ್ನೂರು ಮಹದೇವಸ್ವಾಮಿ, ಸೀತಾರಾಂ, ಉಮ್ಮತ್ತೂರು ಬಸವನಾಯಕ, ಹರೀಶ್ ಈಗ ಮತದಾರ ಪ್ರಭುಗಳು ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಮುಂದಿನ ಪೀಳಿಗೆ ಉದ್ಯೋಗ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳಿಂದ ವಂಚಿತರಾಗಿ ಪರಿತಪಿಸಬೇಕಾಗುತ್ತದೆ, ಇದೀಗ ಖಾಸಗೀಕರಣದಿಂದ ಜನರಿಗೆ ಉದ್ಯೋಗ ಇಲ್ಲವಾಗಿದೆ. ಎಂದು ಎಚ್ಚರಿಸಿದರು.ಈ ದೇಶದಲ್ಲಿ ಸತ್ಯ ಮಾತನಾಡುವುದೇ ಕಷ್ಟವಾಗಿದೆ. ನ್ಯಾಯಾಂಗವೂ ಹದಗೆಟ್ಟಿದೆ. ದೇಶ ಅಪಾಯದಲ್ಲಿದೆ. ಜನರು ಮೌಢ್ಯದಲ್ಲಿ ತುಂಬಿದ್ದಾರೆ, ಮಹಾತ್ಮ ಗಾಂಧಿ ಕೊಂದವರನ್ನು ಪೂಜೆ ಮಾಡುತ್ತಾರೆ ಎಂದರು.
ಕೇಂದ್ರದಲ್ಲಿರುವ ಮೋದಿ ಸರ್ಕಾರ ಬರೀ ಸುಳ್ಳು, ಮೋಸ ದಂಧೆಯಲ್ಲಿ ತೊಡಗಿದೆ, ನೀವು ನಮ್ಮ ಜೊತೆಗೆ ಕೈಜೋಡಿಸಿ. ದೆಹಲಿಯಲ್ಲಿ ಲಂಚ ಇಲ್ಲದೆ ಕೆಲಸವಾಗುತ್ತದೆ. ನಮ್ಮಲ್ಲೂ ಅದೇ ರೀತಿಯಾಗಬೇಕು. ಸರಳವಾಗಿ ಘನತೆಯಿಂದ ಜೀವನ ನಡೆಸಲು ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು. ಜನರಿಗೆ ಮೂಲಭೂತ ಸೌಲಭ್ಯಗಳು ದೊರಕುತ್ತಿಲ್ಲ. ಎಂದು ಆರೋಪಿಸಿದರು.ದಂದೆಕೋರರ ಮೇಲೆ ಸಿಬಿಐ, ಇಡಿ ಮತ್ತು ಐಟಿ ದಾಳಿ ಮಾಡಿಸುವ ಮೂಲಕ ಪಕ್ಷಕ್ಕೆ ದೇಣಿಗೆ ಪಡೆಯುತ್ತಿದ್ದಾರೆ, ಇದು ಅಪಾಯಕಾರಿ ಬೆಳವಣಿಗೆ, ಲಂಚ ತೆಗೆದುಕೊಳ್ಳಬಾರದು ಅಂತ ಹೇಳುತ್ತಾರೆ. ಜೈಲಿಗೆ ಹೋಗಿ ಬಂದವರಿಗೆ ಚುನಾವಣಾ ನೇತೃತ್ವ ವಹಿಸುತ್ತಾರೆ. ಪ್ರಜಾಪ್ರಭುತ್ವ ಮೌಲ್ಯಗಳು ಹಾಳಾಗಿ, ರೌಡಿಗಳು, ದಂಧೆಕೋರರು ಮತ್ತು ಅತ್ಯಾಚಾರಿಗಳು ಚುನಾವಣೆಯಲ್ಲಿ ಆಯ್ಕೆಯಾಗಿ ಹೋಗುತ್ತಿದ್ದಾರೆ ಇದು ನಮ್ಮ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದರು.
ಮತದಾರರು ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ ನೀಡುವ, ಜನರ ಕಷ್ಟ ಸುಖಗಳಿಗೆ ಸ್ವಂದಿಸುವ ಪ್ರಾಮಾಣಿಕ ವ್ಯಕ್ತಿಗಳನ್ನು ಗುರುತಿಸಿ, ಯಾವುದೇ ಆಮಿಷ, ಹಣ, ಎಣ್ಣೆಗೆ ಒಳಗಾಗದೆ ಯೋಚನೆ ಮಾಡಿ, ತತ್ವ ಸಿದ್ದಾಂತ ಇದ್ದವರಿಗೆ ಮತ ಹಾಕಿ ಎಂದು ಮನವಿ ಮಾಡಿದರು.;Resize=(128,128))
;Resize=(128,128))