ಎಂಎಲ್‌ಎಗಿಂತ ಎಂಪಿ ಚುನಾವಣೆಯಲ್ಲಿ ಕ್ಷೀಣಿಸಿದ ಮತದಾನ

| Published : Apr 30 2024, 02:11 AM IST

ಸಾರಾಂಶ

ಕಳೆದ 2019 ರಲ್ಲಿ ನಡೆದ ಲೋಕಸಭಾ ಚುನಾವಣೆಗೆ ಹೋಲಿಕೆ ಮಾಡಿದರೆ ಈ ಬಾರಿ ಮತದಾನದಲ್ಲಿ ಏರಿಕೆ ಕಂಡಿದೆ. ಆದರೆ, ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿದೆ.

ಕಳೆದ ವರ್ಷದಲ್ಲಿ ನಡೆದ ವಿಧಾನಸಭೆ ಚುನಾವಣೆ । ಇದೀಗ ಲೋಕಸಭಾ ಚುನಾವಣೆ ಮತದಾನದಲ್ಲಿ ಶೇ. 3.16 ರಷ್ಟು ಇಳಿಮುಖ

ಆರ್‌.ತಾರಾನಾಥ್‌

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಳೆದ 2019 ರಲ್ಲಿ ನಡೆದ ಲೋಕಸಭಾ ಚುನಾವಣೆಗೆ ಹೋಲಿಕೆ ಮಾಡಿದರೆ ಈ ಬಾರಿ ಮತದಾನದಲ್ಲಿ ಏರಿಕೆ ಕಂಡಿದೆ. ಆದರೆ, ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿದೆ.

2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಶೇ.78.30 ರಷ್ಟು ಮತದಾನ ವಾಗಿತ್ತು. ಆದರೆ, ಇದೇ ಏಪ್ರಿಲ್‌ 26 ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಶೇ. 75.14 ರಷ್ಟು ಮಾತ್ರ ಮತದಾನ ವಾಗಿದೆ. ಶೇ. 3.16 ರಷ್ಟು ಕಡಿಮೆ ಮತದಾನವಾಗಿದೆ.

ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಹೆಚ್ಚು ಮತದಾನವಾಗಿದ್ದರೆ, ಚಿಕ್ಕಮಗಳೂರು ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾನವಾಗಿದೆ. ಆದರೆ, ವಿಧಾನಸಭಾ ಚುನಾವಣೆಗೆ ಹೋಲಿಕೆ ಮಾಡಿದರೆ ಲೋಕಸಭಾ ಚುನಾವಣೆಯಲ್ಲಿ ಮೂಡಿಗೆರೆ ಕ್ಷೇತ್ರದಲ್ಲಿ ಹೆಚ್ಚು ಮತದಾನವಾಗಿದೆ. ಇನ್ನುಳಿದ 4 ಕ್ಷೇತ್ರಗಳಲ್ಲಿ ಕಡಿಮೆ ಮತದಾನವಾಗಿದೆ. ಈ ಪೈಕಿ ತರೀಕೆರೆಯಲ್ಲಿ ಶೇ. 5.06 ಕಡಿಮೆ ಮತದಾನವಾಗಿದೆ.ನಿರಾಸಕ್ತಿ:

ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಬಗ್ಗೆ ಅಷ್ಟೇನೂ ಉತ್ಸಾಹ ಇರಲಿಲ್ಲ. ಇದಕ್ಕೆ ಕಾರಣ, ಬಿಸಿಲಿನ ಝಳದಿಂದಾಗಿ ಜನರು ಮತಗಟ್ಟೆಗೆ ಬರಲಿಲ್ಲ ಎಂದು ಹೇಳಲಾಗದು. ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿರುವ ಬಹಳಷ್ಟು ಮಂದಿ ಈ ಬಾರಿ ಮತಗಟ್ಟೆಗೆ ಹೋಗಲೇ ಇಲ್ಲ. ಈ ಕುರಿತು ಪತ್ರಿಕೆ ಹಲವರನ್ನು ಮಾತನಾಡಿಸಿದಾಗ ಆಸಕ್ತಿ ಇಲ್ಲ, ಯಾಕೆ ವೋಟ್‌ ಮಾಡಬೇಕೆಂಬ ಅಭಿಪ್ರಾಯವನ್ನು ತಮ್ಮ ಸರಿಕರೊಂದಿಗೆ ಹಂಚಿಕೊಂಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಬಗ್ಗೆ ಈ ರೀತಿ ತೀರ್ಮಾನಕ್ಕೆ ಬಂದಿರುವುದು ಅಪಾಯಕಾರಿ ಬೆಳವಣಿಗೆ ಈ ಬಾರಿ ಚುನಾವಣೆಯಲ್ಲಿ ವ್ಯಕ್ತವಾಗಿದೆ.

ಇನ್ನೊಂದು ಅಘಾತಕಾರಿ ವಿಷಯವೆಂದರೆ, ರಾಜಧಾನಿ ಬೆಂಗಳೂರಿನಲ್ಲಿ ಜನರು ವೋಟ್‌ ಮಾಡಲು ಮತಗಟ್ಟೆಗೆ ಬರುವುದಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಪ್ರತಿ ಚುನಾವಣೆಯಲ್ಲಿ ರಿಪೀಟ್‌ ಆಗುತ್ತಲೇ ಇರುತ್ತದೆ. ಆದರೆ, ಈ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ನಗರ ಪ್ರದೇಶದ ಜನರು, ಅದರಲ್ಲೂ ಪ್ರಜ್ಞಾವಂತ ಮತದಾರರು ವೋಟ್‌ ಮಾಡಲು ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲ.

ಈ ಎಲ್ಲಾ ಕಾರಣದಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿದೆ.-------- ಬಾಕ್ಸ್‌----

ಕ್ಷೇತ್ರ ವಿಧಾನಸಭೆಲೋಕಸಭೆ ಚುನಾವಣೆ (ಶೇ.ವಾರು)

----- ----- ------

ಶೃಂಗೇರಿ82.13 80.31

------------------------------------------------

ಮೂಡಿಗೆರೆ 77.3777.47

-----------------------------------------------

ಚಿಕ್ಕಮಗಳೂರು72.9970.73

---------------------------------------------

ತರೀಕೆರೆ79.3574.29

---------------------------------------------

ಕಡೂರು80.8674.73

-----------------------------------------------

ಒಟ್ಟು78.30 75.14

--------------------------------------------- 29 ಕೆಸಿಕೆಎಂ 6ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ನಕ್ಷೆ.