ಸಾರಾಂಶ
ಕನ್ನಡಪ್ರಭ ವಾರ್ತೆ, ದಾವಣಗೆರೆ
ಕಾಂಗ್ರೆಸ್, ಬಿಜೆಪಿ ಅಭ್ಯರ್ತಿಗಳ ಪರ ಸ್ಟಾರ್ ಪ್ರಚಾರಕರು ಬಂದರೂ ಸ್ವಾಭಿಮಾನಿಗಳಾದ ದಾವಣಗೆರೆ ಲೋಕಸಭಾ ಕ್ಷೇತ್ರದ ಮತದಾರರು ನನ್ನನ್ನು ಗೆಲ್ಲಿಸುತ್ತಾರೆ ಎಂದು ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಹೇಳಿದರು.ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಭಯ ಪಕ್ಷಗಳ ಅಭ್ಯರ್ಥಿಗಳ ಪರ ರಾಷ್ಟ್ರ, ರಾಜ್ಯಮಟ್ಟದ ನಾಯಕರು ಪ್ರಚಾರಕ್ಕೆ ಬರುತ್ತಿದ್ದಾರೆ. ಆದರೆ, ನನಗೆ ಜನರೇ ಸ್ಟಾರ್ ಪ್ರಚಾರಕರು, ಸೆಲೆಬ್ರಿಟಿಗಳು. ರಾಜಕಾರಣಿಗಳು ಬಂದು ಭಾಷಣ ಮಾಡಿದಾಕ್ಷಣ ಅಂತಹ ಅಭ್ಯರ್ಥಿಗಳಿಗೆ ಮತಗಳು ಹೋಗುವುದೂ ಇಲ್ಲ ಎಂದರು.
ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದು, ಅದು ಈ ಚುನಾವಣೆಯಲ್ಲಿ ಸಾಧ್ಯವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಾ ಕ್ಷೇತ್ರದ ಚುನಾವಣೆ ಪ್ರಚಾರಕ್ಕೆ ಹೋಗಿ ಭಾಷಣ ಮಾಡಿದಂತೆ ಮಾತನಾಡುತ್ತಾರೆ. ಹಿಂದುಳಿದ ವರ್ಗದವರು, ಹೊಸ ನಾಯಕನನ್ನು ಇಲ್ಲಿ ಬೆಳೆಸಲು ನಿರ್ಧರಿಸಿದ್ದಾರೆ. ಮಧ್ಯ ಕರ್ನಾಟಕಕ್ಕೆ ಹೊಸ ನಾಯಕ ಬೇಕೆಂಬ ಆಲೋಚನೆ ಹೆಚ್ಚಾಗಿದೆ. ಸಿದ್ದರಾಮಯ್ಯ ಪ್ರಶ್ನಾತೀತ ನಾಯಕರು. ನಾವು ಯಾರ ಬಳಿ ಕಷ್ಟ ಹೇಳಿಕೊಳ್ಳಬೇಕು ಎಂದು ಅವರು ಪ್ರಶ್ನಿಸಿದರು.ಜಿಲ್ಲೆಯಲ್ಲಿ ಕುಟುಂಬ ರಾಜಕಾರಣದ ವಿರುದ್ಧ ಜನರ ಆಕ್ರೋಶವಿದೆ. ಅದಕ್ಕೆ ಮೇ 7ಕ್ಕೆ ಅಂತಿಮ ಮುದ್ರೆ ಬೀಳಲಿದೆ. ಜೂ.4ಕ್ಕೆ ಉತ್ತರ ಸಿಗಲಿದೆ. ದುರಂಹಕಾರ, ನಿರ್ಲಕ್ಷಕ್ಕೆ ಮತದಾರರು ತಕ್ಕ ಪಾಠ ಕಲಿಸುತ್ತಾರೆ. ಸ್ವಾಭಿಮಾನದ ಅಭ್ಯರ್ಥಿಯಾಗ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ಹೇಳಿದರು.
ನನಗೆ ಯಾವುದೇ ಭಯವಾಗಲೀ, ಒತ್ತಡವಾಗಲೀ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಿದ್ದೇವೆ. ಪ್ರಜಾಪ್ರಭುತ್ವದ ಹಬ್ಬ ಇದು. ಮೂರು ದಶಕವಾದರೂ ಅಭಿವೃದ್ಧಿ ಮಾತ್ರ ಕಂಡಿಲ್ಲ. ಬರೀ ಶೋಷಣೆಯಾಗುತ್ತಲೇ ಇದೆ. ಧೈರ್ಯದಿಂದ ಚುನಾವಣೆಗೆ ನಿಂತಿದ್ದೇನೆ. ಪ್ರದೀಪ ಈಶ್ವರಗೆ ಸಾಕಷ್ಟು ಅಭಿಮಾನಗಳಿದ್ದು, ಅಭಿಮಾನ ಮತಗಳಾಗಿ ಪರಿವರ್ತನೆಯಾಗದು ಎಂದು ಅವರು ಅಭಿಪ್ರಾಯಪಟ್ಟರು.ದಾವಣಗೆರೆಯಲ್ಲೇ ಇದ್ದು, ಜನರಿಗೋಸ್ಕರ ಜೀವನ ಮುಡುಪಾಗಿಡಲು ನಿರ್ಧರಿಸಿದ್ದೇನೆ. ನನ್ನದು ಅಭಿವೃದ್ಧಿ ರಾಜಕಾರಣ. ಕುಟುಂಬ ರಾಜಕಾರಣಿದ ವಿರುದ್ಧ ಹೋರಾಟ. ಇದು ಅಂತ್ಯವಾದರೆ ಕಟ್ಟಕಡೆಯ ವ್ಯಕ್ತಿಯೂ ಅಭಿವೃದ್ಧಿ, ಅವಕಾಶ ಸಿಗುತ್ತದೆ. ಹೊಸಬರಿಗೆ ರಾಜಕಾರಣದಲ್ಲಿ ಅವಕಾಶ ಸಿಗಬೇಕು ಎಂದ ಅವರು, ಎಲ್ಲ ತಾಲೂಕುಗಳಲ್ಲೂ ರೋಡ್ ಶೋ, ನಡೆಸಿ ಮತಯಾಚನೆ ಮಾಡಲಾಗಿದೆ. ದಾವಣಗೆರೆಯಲ್ಲಿ ಇನ್ನು ಐದು ದಿನ ಓಡಾಡಿ ಪ್ರಚಾರ ನಡೆಸುತ್ತೇನೆ ಎಂದು ವಿನಯಕುಮಾರ ತಿಳಿಸಿದರು.
- - - -2ಕೆಡಿವಿಜಿ23: ಜಿ.ಬಿ.ವಿನಯಕುಮಾರ