ಮತದಾರರು ಕಡ್ಡಾಯ ಮತದಾನ ಮಾಡಿ: ಶಿವಶಂಕರ್‌

| Published : Apr 22 2024, 02:06 AM IST

ಸಾರಾಂಶ

ಹೊಸಕೋಟೆ: ಏಪ್ರಿಲ್ 26ರಂದು ನಡೆಯಲಿರುವ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ಮತದಾರರು ಕಡ್ಡಾಯವಾಗಿ ಮತದಾನ ಮಾಡಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ತಿಳಿಸಿದರು.

ಹೊಸಕೋಟೆ: ಏಪ್ರಿಲ್ 26ರಂದು ನಡೆಯಲಿರುವ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ಮತದಾರರು ಕಡ್ಡಾಯವಾಗಿ ಮತದಾನ ಮಾಡಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ತಿಳಿಸಿದರು. ನಗರದ ಚನ್ನಭೈರೇಗೌಡ ಜಿಲ್ಲಾ ಕ್ರೀಡಾಂಗಣದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಡ್ಡಾಯವಾಗಿ ಮತದಾನ ಮಾಡುವುದರ ಮೂಲಕ ಉತ್ತಮ ನಾಯಕನನ್ನು ಆಯ್ಕೆ ಮಾಡಿ ಪ್ರಜಾಪ್ರಭುತ್ವದ ಮಹತ್ವವನ್ನು ಎತ್ತಿ ಹಿಡಿಯಬೇಕಿದೆ. ಯಾವುದೇ ಜಾತಿ, ಧರ್ಮ, ಮತ, ಆಮಿಷಗಳಿಗೆ ಒಳಗಾಗದೆ ೧೮ ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಮತದಾನದಲ್ಲಿ ಭಾಗವಹಿಸುತ್ತೇನೆಂದು ಪ್ರಮಾಣವಚನ ಸ್ವೀಕರಿಸಲಾಯಿತು. ಚುನಾವಣಾ ವೆಚ್ಚ ವೀಕ್ಷಕ ದೆಬಾಶಿಷ್ ಮಜೂಮ್ದಾರ್, ಪೊಲೀಸ್ ವೀಕ್ಷಕ ರಾತೋಡ್ ಅಮಿತ್ ಕುಮಾರ್ ಭರತ್, ಚುನಾವಣಾ ವೀಕ್ಷಕ ನ್ಯಾಲಿ ಯಟೆ, ಸಿಇಒ ಅನುರಾಧ, ಸಹಾಯಕ ಚುನಾವಣಾಧಿಕಾರಿ ಕೃಷ್ಣ ಕುಲಾಲ್, ತಹಸೀಲ್ದಾರ್ ವಿಜಯ್ ಕುಮಾರ್, ಇಒ ಮಂಜುನಾಥ್, ನಗರಾಯುಕ್ತ ಜಹೀರ್ ಅಬ್ಬಾಸ್ ಇತರೆ ಅಧಿಕಾರಿಗಳು ಹಾಜರಿದ್ದರು.

(ಫೋಟೋ ಕ್ಯಾಫ್ಷನ್‌)

ಹೊಸಕೋಟೆಯಲ್ಲಿ ತಾಲೂಕು ಸ್ವೀಪ್ ಸಮಿತಿ ಏರ್ಪಡಿಸಿದ್ದ ಮತದಾನ ಜಾಗೃತಿ ಕುರಿತು ಕ್ರೀಡಾಂಗಣದಲ್ಲಿ ಬಿಡಿಸಿದ ರಂಗೋಲಿಯನ್ನು ಜಿಲ್ಲಾಧಿಕಾರಿ ಶಿವಶಂಕರ್‌, ಸಿಇಒ ಅನುರಾಧ, ಸಹಾಯಕ ಚುನಾವಣಾಧಿಕಾರಿ ಕೃಷ್ಣ ಕುಲಾಲ್, ತಹಸೀಲ್ದಾರ್ ವಿಜಯ್ ಕುಮಾರ್, ಇಒ ಮಂಜುನಾಥ್, ನಗರಾಯುಕ್ತ ಜಹೀರ್ ಅಬ್ಬಾಸ್ ಇತರರಿದ್ದರು.