ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ರಾಜ್ಯದ ಪ್ರತಿ ವರ್ಗಗಳ ಜನತೆಯ ನೆಮ್ಮದಿ ಬದುಕಿಗೆ ಸಿಎಂ ಸಿದ್ದರಾಮಯ್ಯ ಸರ್ಕಾರ ಕೈಗೊಂಡಿರುವ ಜನಪರ ಕೆಲಸಗಳಿಗೆ ಮನ್ನಣೆ ನೀಡಿ ರಾಜ್ಯದ ಈ ಉಪ ಚುನಾವಣೆ ಮೂರೂ ಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ್ತೊಮ್ಮೆ ಆಶೀರ್ವಾದಿಸಿದ್ದಾರೆ ಎಂದು ತೇರದಾಳ ಕ್ಷೇತ್ರದ ಯುವ ಮುಖಂಡ ಸಿದ್ದು ಕೊಣ್ಣೂರ್ ಸಂತಸ ವ್ಯಕ್ತಪಡಿಸಿದರು.ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭೆ ಉಪಚುನಾವಣೆ ನಡೆದು ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ ಕಾರಣ ತೇರದಾಳ ಕ್ಷೇತ್ರದ ಮಹಾಲಿಂಗಪುರ ಪಟ್ಟಣದ ಚೆನ್ನಮ್ಮ ಮತ್ತು ಬಸವೇಶ್ವರ ವೃತ್ತಗಳಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ, ಗುಲಾಲ್ ಎರಚಿ ವಿಜಯೋತ್ಸವ ಆಚರಿಸಿದರು.
ಈ ವೇಳೆ ಮಾತನಾಡಿದ ಅವರು, ವಿರೋಧ ಪಕ್ಷದ ಸೋಲಿಗೆ ಕಾರಣ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಇಲ್ಲ ಸಲ್ಲದ ಹಸಿ ಸುಳ್ಳು ಆರೋಪ ಮಾಡುತ್ತಾ ಬಂದಿರುವುದು. ಈ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸುವ ಮೂಲಕ ಅವರು ಹಾಸ್ಯಾಸ್ಪದಕ್ಕೆ ಒಳಗಾಗಿದ್ದಾರೆ ಎಂದರು.ವಿಜಯೋತ್ಸವದಲ್ಲಿ ಮುಖಂಡರಾದ ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್, ರಂಗನಗೌಡ ಪಾಟೀಲ್, ಮಲ್ಲಪ್ಪ ಸಿಂಗಾಡಿ, ಬಸವರಾಜ ರಾಯರ, ಬಲವಂತಗೌಡ ಪಾಟೀಲ್, ಮುಸ್ತಾಕ್ ಚಿಕ್ಕೋಡಿ, ಅರ್ಜುನ್ ದೊಡಮನಿ, ಸುನೀಲ್ ಗೌಡ ಪಾಟೀಲ್, ನಜೀರ್ ಝಾರೆ, ಪ್ರಕಾಶ ಮಮದಾಪುರ, ಸಿರಾಜ್ ಪೆಂಡಾರಿ, ಲಕ್ಷ್ಮಣ ಮಾಂಗ, ಚನ್ನು ದೇಸಾಯಿ, ವಿಠ್ಠಲ ಹೊಸಮನಿ, ಬಂದೇನವಾಜ ಸಿಂದಗಿ, ಮಹಾಲಿಂಗ ಪಾಟೀಲ್, ಮಹಾಲಿಂಗಪ್ಪ ಮಾಳಿ, ಆನಂದ ಬಂಡಿ, ಸಿದ್ದು ಭೂಸನ್ನವರ, ನಾರಾಯಣ ನಿಕ್ಕಂ, ಆನೀಲ ದೇಸಾಯಿ, ವಿನೋದ ಸಿಂಪಿ, ಸುರೇಶ್ ಜೋಗನ್ನವರ, ಸಿದ್ಧರಾಮ ಯರಗಟ್ಟಿ, ಶ್ರೀಶೈಲ್ ಪೋಲೀಸ್ ಪಾಟೀಲ್, ಹಣ್ಮಂತ ಬಂಡಿವಡ್ಡರ, ಮುಂತಾದವರಿದ್ದರು.