ಅಂಗನವಾಡಿ ಕಾರ್ಯಕರ್ತೆಯರಿಂದ ಮತದಾನ ಜಾಗೃತಿ

| Published : Apr 20 2024, 01:01 AM IST

ಸಾರಾಂಶ

ಈ ಜಾಥಾ ನಗರಸಭೆ ಮುಧೋಳ ಆವರಣದಿಂದ ಆರಂಭಗೊಂಡು ಜಡಗಣ್ಣ - ಬಾಲಣ್ಣ ಸರ್ಕಲ್, ಕಲ್ಮೇಶ್ವರ ಚೌಕ್, ಗಾಂಧಿ ಸರ್ಕಲ್, ಶಿವಾಜಿ ಸರ್ಕಲ್‌ ಮಾರ್ಗವಾಗಿ ಹೊರಟು ತಾಲೂಕು ಆಡಳಿತ ಭವನದವರೆಗೆ ಸಾಗಿ ಮುಕ್ತಾಯಗೊಳಿಸಲಾಯಿತು.

ಕನ್ನಡ ಪ್ರಭ ವಾರ್ತೆ ಮುಧೋಳ

ಲೋಕಸಭಾ ಚುನಾವಣೆಯ ನಿಮಿತ್ತ ಜಿಲ್ಲಾಆಡಳಿತ, ಜಿಲ್ಲಾ ಪಂಚಾಯತ ಬಾಗಲಕೋಟೆ, ಜಿಲ್ಲಾ ಸ್ವೀಪ್ ಸಮಿತಿ ಬಾಗಲಕೋಟೆ ಹಾಗೂ ತಾಲೂಕು ಸ್ವೀಪ್‌ ಸಮಿತಿ ಮುಧೋಳ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಧೋಳ ಇವರ ಸಂಯುಕ್ತಾಶ್ರಯದಲ್ಲಿ ಅಂಗನ ವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಂದ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು.

ಜಾಗೃತಿ ಜಾಥಾಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿ.ಪಿ. ಏಗನಗೌಡರ ಚಾಲನೆ ನೀಡಿದರು. ಈ ಜಾಥಾ ನಗರಸಭೆ ಮುಧೋಳ ಆವರಣದಿಂದ ಆರಂಭಗೊಂಡು ಜಡಗಣ್ಣ - ಬಾಲಣ್ಣ ಸರ್ಕಲ್, ಕಲ್ಮೇಶ್ವರ ಚೌಕ್, ಗಾಂಧಿ ಸರ್ಕಲ್, ಶಿವಾಜಿ ಸರ್ಕಲ್‌ ಮಾರ್ಗವಾಗಿ ಹೊರಟು ತಾಲೂಕು ಆಡಳಿತ ಭವನದವರೆಗೆ ಸಾಗಿ ಮುಕ್ತಾಯಗೊಳಿಸಲಾಯಿತು. ಈ ವೇಳೆ ಮತದಾನ ಜಾಗೃತಿ ಕುರಿತು ಎಲ್ಲರೂ ಪ್ರತಿಜ್ಞಾವಿಧಿ ಪ್ರಮಾಣೀಕರಿಸಿದರು.

ತಾಪಂ ಇಒ ವಿ.ಪಿ.ಏಗನಗೌಡರ, ಪ್ರಭಾರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಾಶಿಬಾಯಿ ಜಿ. ಕೊರೆಗೋಳ (ಮಸಳಿ) , ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿ.ಎನ್‌.ಬಂಗಾರೆಪ್ಪನವರ, ಹಿರಿಯ ಮೇಲ್ವಿಚಾರಕಿ ರಜಿನಿ ಹಿರೇಮಠ, ಇಂದಿರಾ ನಾಯ್ಕ ಹಾಗೂ ವಲಯದ ಮೇಲ್ವಿಚಾರಕಿ ಶೋಭಾ ಮಂಟೂರ, ರಾಜೇಶ್ವರಿ ಲೆಂಕನ್ನವರ, ಲತಾ ಬೆನಕಟ್ಟಿ, ಉಷಾ ಮನ್ನೆಪ್ಪಗೋಳ, ವಾಣಿಶ್ರೀ ಮುನ್ನೋಳ್ಳಿ, ಸೈದುಭಾನು ಅನೋಜಿ, ಗಾಯತ್ರಿ ಮಹಾಜನ್, ಸುಜಾತಾ ಪತ್ತಾರ, ಅಮನಾ ಫಿರಜಾದೆ, ನಗರ ಸಭೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸೇರಿದಂತೆ ಇತರರು ಪಾಲ್ಗೊಂಡಿದ್ದರು.