ನಿರ್ಭತಿಯಿಂದ ಮತ ದಾನ ಮಾಡಿ

| Published : Apr 06 2024, 12:51 AM IST

ಸಾರಾಂಶ

ನಿರ್ಭತಿಯಿಂದ ಮತದಾನ ಮಾಡಿ ಸುಭದ್ರ ದೇಶ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಬೇಕು

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ದೇಶದ ಭವಿಷ್ಯ ಪ್ರಜ್ಞಾವಂತ ಮತದಾರರ ಕೈಯಲ್ಲಿದೆ. ಅವರು ತಮ್ಮ ಅಮೂಲ್ಯ ಮತವನ್ನು ದಾನ ಮಾಡುವ ಮೂಲಕ ಈ ದೇಶದ ಭವಿಷ್ಯ ನಿರ್ಧರಿಸುವ ಗುರುತರ ಜವಾಬ್ದಾರಿ ಹೊಂದಿದ್ದಾರೆ. ಆದ್ದರಿಂದ ನಿರ್ಭತಿಯಿಂದ ಮತದಾನ ಮಾಡಿ ಸುಭದ್ರ ದೇಶ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಬೇಕು ಎಂದು ಪುರಸಭೆ ಮುಖ್ಯಧಿಕಾರಿ ಈರಣ್ಣ ದಡ್ಡಿ ಹೇಳಿದರು.

ಪುರಸಭೆ ಮತ್ತು ಜಿಲ್ಲಾಧಿಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ನಗರಾಭಿವೃದ್ಧಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಬಾಗಲಕೋಟ ತಾಲೂಕು ಆಡಳಿತ, ತಾಲೂಕು ಸ್ವೀಪ್ ಸಮಿತಿ ಸಹಯೋಗದಲ್ಲಿ ಸ್ಥಳೀಯ ಗಾಂಧಿ ಸರ್ಕಲಿನಲ್ಲಿ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮತ ಪ್ರಮಾಣ ಹೆಚ್ಚಳ, ಮತದಾನ ಮಹತ್ವ ಹಾಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಮುಂಬರುವ ಲೋಕಸಭೆ ಚುನಾವಣೆಯ ಮತದಾನದಲ್ಲಿ ಎಲ್ಲರೂ ಭಾಗವಹಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಮರದಾರರಲ್ಲಿ ಮನವಿ ಮಾಡಿದರು.

ಪುರಸಭೆ ಮ್ಯಾನೇಜರ ಎಸ್ ಏನ್ ಪಾಟೀಲ್ ಮಾತನಾಡಿ, ಕಳೆದ ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಬೂತಗಳಲ್ಲಿ ಈ ಬಾರಿ ಹೆಚ್ಚಿನ ಮತದಾನಕ್ಕೆ ಪ್ರೇರಣೆ ನೀಡುವುದಕ್ಕಾಗಿ ಈ ಅಭಿಯಾನ ಆಯೋಜಿಸಲಾಗಿದೆ. ಮತದಾನಕ್ಕೆ ಅರ್ಹರಿರುವ ಎಲ್ಲರೂ ಮತದಾನ ಮಾಡುವ ಮೂಲಕ ಮುಂಬರು ಚುನಾವಣೆಯಲ್ಲಿ ಹೆಚ್ಚಿನ ಮತದಾನ ಆಗುವಂತೆ ಮಾಡಿ ಎಂದರು.

ಪುರಸಭೆ ಸಿಬ್ಬಂದಿ ಎಂ ಎಂ ಮುಗಳಖೊಡ ಮಾತನಾಡಿ, ಮತದಾನ ಪ್ರತಿಯೊಬ್ಬರ ಹಕ್ಕು. ದೇಶದ ಉಜ್ವಲ ಭವಿಷ್ಯಕ್ಕಾಗಿ ಮತ ಅತೀ ಮುಖ್ಯವಾಗಿದೆ. ಯಾವುದೇ ಅಸೆ ಆಮಿಷಕ್ಕೆ ಬಲಿಯಾಗದೆ ಸ್ವತಂತ್ರವಾಗಿ ವಿವೇಚನೆಯಿಂದ ಮತ ಚಲಾಯಿಸಿ. ಪ್ರತಿ ದಿನ ಒಂದು ಗಂಟೆ ಪುರಸಭೆ ಪೌರ ಕಾರ್ಮಿಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಜಾಗೃತಿ ಮೂಡಿಸಲಿದ್ದಾರೆ ಎಂದರು.

ಪುರಸಭೆ ಸಿಬ್ಬಂದಿ ಬಿ.ವೈ ಮರ್ಧಿ ಮಾತನಾಡಿ, "ಮಾಡ ಬನ್ನಿ ಮತದಾನ ಇದುವೇ ನಮ್ಮ ಶ್ರಮದಾನ " ಎಂಬ ಹೊಸ ಕನಸು ಬಿತ್ತಿ ಸದೃಢ ದೇಶ ಕಟ್ಟೋಣ ಅರ್ಹ ಮತದಾರರೆಲ್ಲರೂ ತಪ್ಪದೆ ಮತ ಚಲಾಯಿಸಿ, ಇಲ್ಲಿ ಎಲ್ಲರೂ ಸಮಾನರು ಎಲ್ಲರ ಮತವು ಅಮೂಲ್ಯ, ಕುಟುಂಬ ಹಾಗೂ ನೆರೆಹೊರೆಯವರನ್ನು ಮತಗಟ್ಟೆಗೆ ಕರೆದುಕೊಂಡು ಬನ್ನಿ ಎಂದು ಕರೆ ನೀಡಿದರು.

ಈ ವೇಳೆ ಪುರಸಭೆ ಸಿಬ್ಬಂದಿ ಮೋದಿನಸಾಬ ಮುಲ್ಲಾ, ಎಂ.ಡಿ ಮಾನಿಂಗ, ರವಿ ಹಲಸಪ್ಪಗೋಳ, ಲಖನ ದೊಡಮನಿ, ಪ್ರೀತಿ ಹುಲಕುಂದ, ಮಂಜುಳಾ ಬಂಡಿವಡ್ಡರ, ಪರಸು ಬಂಡಿವಡ್ಡರ, ಸಹಾಯಕ ಸಿಬ್ಬಂದಿ ಹಾಗೂ ಸ್ವಚ್ಛತಾ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ವ್ಯಾಪಾಸ್ಥರು ಸೇರಿ ಹಲವರು ಇದ್ದರು.