ಮತಾದನ‌ ಜಾಗೃತಿ: ವಿದ್ಯಾರ್ಥಿಗಳಿಂದ ಮೂಡಿದ ಓಟಿನ ಅಕ್ಷರ

| Published : Apr 04 2024, 01:05 AM IST

ಸಾರಾಂಶ

ಸುಮಾರು 160 ಹೊಸ ಮತದಾರ ವಿದ್ಯಾರ್ಥಿಗಳು VOTE ಪದದ ಆಕೃತಿಯಲ್ಲಿ ನಿಂತಿದ್ದು ವಿಶೇಷ ಆಕರ್ಷಣೆಯಾಗಿತ್ತು.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ಬಲ್ಮಠ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಮಂಗಳೂರು ತಾಲೂಕು ಪಂಚಾಯ್ತಿ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು. ಈ ವೇಳೆ ಸುಮಾರು 160 ಹೊಸ ಮತದಾರ ವಿದ್ಯಾರ್ಥಿಗಳು VOTE ಪದದ ಆಕೃತಿಯಲ್ಲಿ ನಿಂತಿದ್ದು ವಿಶೇಷ ಆಕರ್ಷಣೆಯಾಗಿತ್ತು.ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆನಂದ್ ಕೆ, ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಕೆ.ಸಿ. ಅಣ್ಣಪ್ಪ, ಸಹಾಯಕ ನಿರ್ದೇಶಕ ಮಹೇಶ್ ಅಂಬೆಕಲ್ಲು, ತಾಲೂಕು ಮಟ್ಟದ ಸ್ವೀಪ್ ಸದಸ್ಯರು ಹಾಗೂ ತಾಲೂಕು ಐಇಸಿ ಸಂಯೋಜಕಿ ನಿಶ್ಮಿತಾ ಬೇಕಲ್ ಇದ್ದರು.