ರೈತರ ಮಿತ್ರರಾಗಿ ಆಕರ್ಷಿಸುತ್ತಿವೆ ವಿಎಸ್‌ಟಿ ಮಶಿನ್‌ಗಳು

| Published : Sep 23 2024, 01:25 AM IST

ರೈತರ ಮಿತ್ರರಾಗಿ ಆಕರ್ಷಿಸುತ್ತಿವೆ ವಿಎಸ್‌ಟಿ ಮಶಿನ್‌ಗಳು
Share this Article
  • FB
  • TW
  • Linkdin
  • Email

ಸಾರಾಂಶ

ಸಣ್ಣ ರೈತರಿಗೆ ಸಹಕಾರಿಯಾಗಿ ನಿಲ್ಲುತ್ತಿದೆ ವಿಎಸ್‌ಟಿ ಕಂಪನಿಯ ಯಂತ್ರೋಪಕರಣಗಳು. ಇವು ರೈತನಿಗೆ ಮಿತ್ರನಾಗಿ ಕೃಷಿ ಚಟುವಟಿಕೆಯಲ್ಲಿ ಕೈ ಜೋಡಿಸುತ್ತಿವೆ

ಧಾರವಾಡ: ಸಣ್ಣ ರೈತರಿಗೆ ಸಹಕಾರಿಯಾಗಿ ನಿಲ್ಲುತ್ತಿದೆ ವಿಎಸ್‌ಟಿ ಕಂಪನಿಯ ಯಂತ್ರೋಪಕರಣಗಳು. ಇವು ರೈತನಿಗೆ ಮಿತ್ರನಾಗಿ ಕೃಷಿ ಚಟುವಟಿಕೆಯಲ್ಲಿ ಕೈ ಜೋಡಿಸುತ್ತಿವೆ. ಕೃಷಿ ಕೂಲಿ ಕಾರ್ಮಿಕರ ಕೊರತೆಯ ಸಮಯದಲ್ಲಿ ಮತ್ತೊಬ್ಬರ ಮೇಲೆ ಅವಲಂಬಿತನಾಗದೇ ಈ ಯಂತ್ರಗಳಿಂದ ಏಕಾಂಗಿಯಾಗಿ ಕೃಷಿ ಕಾರ್ಯ ನಿರ್ವಹಿಸಿ ದ್ವಿಗುಣ ಆದಾಯ ಗಳಿಸಬಹುದಾಗಿದೆ.

ವಿಎಸ್‌ಟಿ ಕಂಪನಿ ತಯಾರಿಸುವ ಯಂತ್ರೋಪಕರಣಗಳಲ್ಲಿ ಪಾವರ್ ಟಿಲ್ಲರ್‌ ಯಂತ್ರ ಪ್ರಮುಖವಾದದ್ದು. ಇದರಿಂದ ಎಲ್ಲ ಕೃಷಿ ಚಟುವಟಿಕೆ ನಿರ್ವಹಿಸಬಹುದಾಗಿದೆ. ಈ ಯಂತ್ರದಲ್ಲಿ 9 ಎಚ್.ಪಿ.ಯಿಂದ ಆರಂಭವಾಗಿ 16.5 ಎಚ್.ಪಿ. ವರೆಗೂ ದೊರೆಯುತ್ತವೆ. ₹1.60 ಲಕ್ಷದಿಂದ ₹2.40 ಲಕ್ಷ ದರದಲ್ಲಿದ್ದು, ದೇಶದಲ್ಲಿಯೇ ನಂ. 1 ಸ್ಥಾನದಲ್ಲಿದೆ. ಇನ್ನು ವಿ.ಎಸ್.ಟಿ. ಪಾವರ್ ವಿಂಡರ್ ಯಂತ್ರ 2 ಎಚ್.ಪಿ. ಯಿಂದ ಎಂಟು ಎಚ್.ಪಿ ವರೆಗಿನ ಸಾಮರ್ಥ ಹೊಂದಿದ್ದು, ಪೈರುಗಳಲ್ಲಿನ ಮಧ್ಯದ ಕಸ ತೆಗೆಯಲು ಸಹಕಾರಿಯಾಗುವ ಯಂತ್ರ. ಹಗುರವಾಗಿದ್ದು, ಸರಳ ವಿಧಾನದಲ್ಲಿ ಮಹಿಳೆಯರು ಸಹ ಉಪಯೋಗಿಸಬಹುದಾಗಿದೆ.

ವಿ.ಎಸ್.ಟಿ ವೀಡ್ ಕಟರ್ ರೈತನಿಗೆ ಹೊಲದಲ್ಲಿರುವ ಕಸವನ್ನು ಯಾವುದೇ ಆಳುಗಳ ಸಹಾಯವಿಲ್ಲದೆ ಕೇವಲ 1 ಲೀ. ಪೇಟ್ರೋಲ್‌ನಲ್ಲಿ 2.5 ಗಂಟೆಗಳ ಕಾಲ ಕಳೆ ಕತ್ತರಿಸಲು ಈ ಯಂತ್ರ ಬಳಕೆಯಾಗಲಿದೆ. ಇದರಲ್ಲಿ ಮೂರು ಮಾದರಿಗಳಿದ್ದು, 26 ಸಿಸಿ, 34 ಸಿಸಿ, 42 ಸಿಸಿ ಯಂತ್ರಗಳಿವೆ. ಇದು ಇಂಧನ ದಕ್ಷತೆ ಹಾಗೂ ಹೆಚ್ಚು ಸಾಮರ್ಥ್ಯ ಉಳದ್ದಾಗಿದೆ. ವಿ.ಎಸ್.ಟಿ. ಪವರ್ ರೀಪರ್ ಯಂತ್ರ ರೈತ ಮಿತ್ರನಂತಿದ್ದು, ಬೆಳೆಗಳ ಕೊಯ್ಲಿಗಾಗಿ ಬಳಸಲಾಗುತ್ತದೆ. ದಿನಕ್ಕೆ 5 ಎಕರೆಯಷ್ಟು ಬೆಳೆಯನ್ನು ಕಟಾವು ಮಾಡಬಹುದು. ಭತ್ತ, ರಾಗಿ, ಗೋಧಿ, ನವಣೆ, ಕಡಲೆ ಇತ್ಯಾದಿ ಬೆಳೆಗಳನ್ನು ಕಟಾವು ಮಾಡುತ್ತದೆ. ಮತ್ತೊಬ್ಬರಿಗೆ ಬಾಡಿಗೆ ನೀಡುವ ಮೂಲಕವೂ ಈ ಯಂತ್ರದಿಂದ ಆದಾಯ ಗಳಿಸಬಹುದಾಗಿದೆ.

ವಿ.ಎಸ್.ಟಿ. ಕಂಪನಿಯವರು ರೈತರ ಸಹಾಯಕ್ಕಾಗಿ ಹೊರ ತಂದಿರುವ ಈ ಯಂತ್ರಗಳು ಸರ್ಕಾರ ನೀಡುವ ಸಹಾಯಧನದಿಂದಲೂ ಲಭ್ಯವಿದ್ದು, ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಿ ಪಡೆಯಬಹುದು. ಇದೀಗ ಕೃಷಿ ಮೇಳದಲ್ಲಿಯ ಸ್ಟಾಲ್‌ನಲ್ಲಿಯೂ ಬುಕಿಂಗ್‌ಗಳು ಆರಂಭವಾಗಿವೆ. ಹೆಚ್ಚಿನ ಮಾಹಿತಿಗಾಗಿ 9535141265 ಅಜಯ ಅಥವಾ 9945779930 ಮಂಜುನಾಥ ಅವರನ್ನು ಸಂಪರ್ಕಿಸಬಹುದು.