ಕೊಡವೂರಿನ ಮನೆ ಮನೆಗಳಲ್ಲಿ ರಾಮನ ಗೋಡೆಚಿತ್ರ

| Published : Jan 15 2024, 01:47 AM IST

ಸಾರಾಂಶ

ಅಯೋಧ್ಯೆ ರಾಮನ ಪ್ರಾಣಪ್ರತಿಷ್ಠೆಗೆ ಬಣ್ಣಬಣ್ಣಗಳಿಂದ ಶೃಂಗಾರಗೊಳ್ಳುತ್ತಿದ್ದರೆ, ಇತ್ತ ಕೃಷ್ಣನಗರಿ ಉಡುಪಿಯ ಕೊಡವೂರ ಗ್ರಾಮದ ಮನೆಮನೆಗಳ ಆವರಣ ಗೋಡೆಗಳು ರಾಮನ ಚಿತ್ರಗಳು ಸಿಂಗಾರಗೊಳ್ಳುತ್ತಿವೆ.

ಕನ್ನಡಪ್ರಭ ವಾರ್ತೆ, ಉಡುಪಿ

ಅತ್ತ ಇಡೀ ಆಯೋಧ್ಯೆಯೇ ರಾಮನ ಪ್ರಾಣಪ್ರತಿಷ್ಠೆಗೆ ಬಣ್ಣಬಣ್ಣಗಳಿಂದ ಶೃಂಗಾರಗೊಳ್ಳುತ್ತಿದ್ದರೆ, ಇತ್ತ ಕೃಷ್ಣನಗರಿ ಉಡುಪಿಯ ಕೊಡವೂರ ಗ್ರಾಮದ ಮನೆಮನೆಗಳ ಆವರಣ ಗೋಡೆಗಳು ರಾಮನ ಚಿತ್ರಗಳು ಸಿಂಗಾರಗೊಳ್ಳುತ್ತಿವೆ.

ಉಡುಪಿ ನಗರಸಭೆಯ ಸದಸ್ಯ ವಿಜಯ್ ಕೊಡವೂರು ಅವರ ಪರಿಕಲ್ಪನೆಯಲ್ಲಿ ಈ ಅಭಿಯಾನ ನಡೆಯುತ್ತಿದ್ದು, ಕೊಡವೂರು ಶಂಕರನಾರಾಯಣ ದೇವಸ್ಥಾನದ ಆವರಣ ಮತ್ತು ಇಲ್ಲಿಂದ ಮಲ್ಪೆಗೆ ತೆರಳುವ ರಸ್ತೆಯಲ್ಲಿ ಮನೆಗಳ ಆವರಣ ಗೋಡೆಯಲ್ಲಿ ರಾಮಾಯಣಕ್ಕೆ ಸಂಬಂಧಿಸಿ ಚಿತ್ರಗಳನ್ನು ರಚಿಸಲಾಗಿದೆ.

ಉಡುಪಿಯ 60ಕ್ಕೂ ಹೆಚ್ಚು ಕಲಾವಿದರುಈ ಬೃಹತ್ ವಾಲ್ ಪೇಂಟಿಂಗ್ ಗಳನ್ನು ರಚಿಸುವ ಮೂಲಕ ಅಯೋಧ್ಯೆಯ ಸಂಭ್ರಮವನ್ನು ಇಲ್ಲಿಗೂ ತಂದಿದ್ದಾರೆ. ರಾಮನ ವನವಾಸ, ಲಂಕೆಯಲ್ಲಿ ಸೀತೆ, ಶಬರಿ ಇತ್ಯಾದಿ ಘಟನೆಗಳನ್ನು ಚಿತ್ರೀಸಲಾಗಿದ್ದು ಈ ರಸ್ತೆಯಲ್ಲಿ ಸಂಚರಿಸುವವರ ಗಮನ ಸೆಳೆಯುತ್ತಿದೆ.

ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠೆಯ ಸಂಭ್ರಮವನ್ನು ಹೆಚ್ಚಿಸುವ ಹಿನ್ನೆಲೆಯಲ್ಲಿ ಈ ಅಭಿಯಾನವನ್ನು ಕೈಗೊಳ್ಳಲಾಗಿದೆ. ಈ ಸಂಭ್ರಮವನ್ನು ಸ್ಮರಣೀಯ ಮತ್ತು ಶಾಶ್ವತಗೊಳಿಸುವುದು ಇದರ ಉದ್ದೇಶವಾಗಿದೆ ಎಂದು ವಿಜಯ ಕೊಡವೂರು ತಿಳಿಸಿದ್ದಾರೆ.